ಪ್ರಧಾನಿ ನರೇಂದ್ರ ಮೋದಿ ಸಲಹೆಗಳು ಕೇಂದ್ರ ಸರ್ಕಾರದ ವೈಫಲ್ಯಗಳಿಗೆ ಹಿಡಿದ ಕನ್ನಡಿ : ರಾಹುಲ್‌ ಗಾಂಧಿ ಕಿಡಿ

ನವದೆಹಲಿ :  ಪೆಟ್ರೋಲ್‌ ಹಾಗೂ ಚಿನ್ನದ ಬೆಲೆ ಏರಿಕೆ ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಳು ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ, ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವನ್ನು ತಗ್ಗಿಸಲು, ಪ್ರಧಾನಿ ನರೇಂದ್ರ ಮೋದಿ ಭಾರತೀಯರು ಹಲವಾರು ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮನೆಯಿಂದ ಕೆಲಸ ಮಾಡುವುದು, ಒಂದು ವರ್ಷ ಚಿನ್ನ ಖರೀದಿಸದೇ ಇರುವುದು, ವಿದೇಶದಲ್ಲಿ ಮದುವೆ ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳು ಸರ್ಕಾರದ ವೈಫಲ್ಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ. 

ಮೋದಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಮೋದಿ ಜಿ ನಿನ್ನೆ ಸಾರ್ವಜನಿಕರಿಂದ ತ್ಯಾಗಗಳನ್ನು ಒತ್ತಾಯಿಸಿದರು – ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಕಡಿಮೆ ಪೆಟ್ರೋಲ್ ಬಳಸಬೇಡಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆಯನ್ನು ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ” ಎಂದು ಹೇಳಿದ್ದೀರ, ಇವು ಕೇವಲ “ಧರ್ಮೋಪದೇಶಗಳು” ಅಲ್ಲ, “ವೈಫಲ್ಯದ ಪುರಾವೆಗಳು” ಎಂದು  ಎಕ್ಸ್‌ ನಲ್ಲಿ ಪ್ರತಿಕ್ರಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ, ಅವರು ದೇಶವನ್ನು ಎಂತಹ ಸ್ಥಿತಿಗೆ ತಂದಿದ್ದಾರೆಂದರೆ, ಸಾರ್ವಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಹೇಳಬೇಕಾಗಿದೆ. ಪ್ರತಿ ಬಾರಿಯೂ ಅವರು ಜವಾಬ್ದಾರಿಯನ್ನು ಜನರ ಮೇಲೆ ವರ್ಗಾಯಿಸುತ್ತಾರೆ, ಇದರಿಂದ ಅವರು ಸ್ವತಃ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಗಾಂಧಿ ಬರೆದಿದ್ದಾರೆ.
ರಾಜಿ ಮಾಡಿಕೊಂಡ ಪ್ರಧಾನಿ ಎಂದು ಮೋದಿಯ ವಿರುದ್ಧ ತಮ್ಮ ವಾಗ್ದಾಳಿಯನ್ನು ಪುನರುಚ್ಚರಿಸಿದರು ಮತ್ತು ದೇಶವನ್ನು ನಡೆಸುವುದು ಇನ್ನು ಮುಂದೆ ಅವರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದರು.

ಸದ್ಯಕ್ಕೆ ತಾತ್ಕಾಲಿಕ ಕದನ ವಿರಾಮದಲ್ಲಿರುವ ಈ ಯುದ್ಧವು ಜಾಗತಿಕ ಇಂಧನ ಪೂರೈಕೆಯಲ್ಲಿ  ಗಂಭೀರ ಪರಿಣಾಮ ಬೀರಿದ್ದರಿಂದ ಪ್ರಪಂಚದಾದ್ಯಂತ  ತೈಲ ಅಭಾವ ತಲೆದೋರಿದೆ. 

More articles

Latest article

Most read