ಕನ್ನಡದ ಖ್ಯಾತ ನಟ ದರ್ಶನ್ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇವಾಗ ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು. “ಇದು 10 ವರ್ಷದ ಸುಂದರ ಸಂಬಂಧ” ಎಂದು ಕೂಡ ಹೇಳಿದ್ದರು. ಇದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಿರೋಧಿಸಿದ್ದರು. ಇದಕ್ಕೆ ಪವಿತ್ರಾಗೌಡ ಕೂಡ ಈಗ ತಿರುಗೇಟು ನೀಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಪೋಸ್ಟ್ ಗೆ ಒಏಸ್ ಬುಕ್ ಪೋಸ್ಟ್ ಮೂಲಕ ತಿರುಗೇಟು ನೀಡಿರುವ ಪವಿತ್ರ ಗೌಡ, ನಾನು ಪವಿತ್ರಾ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದೇನೆ. ಇಲ್ಲಿಯವರೆಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ ಎಂದು ಹೇಳಿದ್ದಾರೆ.
ನಾನು ನನ್ನ ಹಿತಾಸಕ್ತಿಗೋಸ್ಕರ ಈ ಥರ ಇಲ್ಲ, ಇದು ನಮ್ಮ ಪವಿತ್ರವಾದ ಪ್ರೀತಿ. ಕಳೆದ 10 ವರ್ಷದಿಂದ ಜೊತೆಗೆ ಇರೋದು ಸುಲಭವೂ ಅಲ್ಲ.ಈ ವಿಷಯ ವಿಜಯಲಕ್ಷ್ಮೀ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮೀ ಅವರೇ ನನಗೆ ಹಲವಾರು ಬಾರಿ ಫೋನ್ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮೀ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ವಿಚ್ಛೇದನದ ಡಾಕ್ಯುಮೆಂಟ್ಸ್ ಸಮಯ ಬಂದಾಗ ಹಂಚಿಕೊಳ್ಳುತ್ತೇನೆ) ಎಂದು ಹೇಳಿದ್ದಾರೆ.
ಇದೀಗ ವಿಜಯಲಕ್ಕ್ಷ್ಮೀ ಅವರು ನನ್ನ ವಿರುದ್ಧವಾಗಿ ಪೋಸ್ಟ್ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ವಯಸ್ಕ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮೀ ದರ್ಶನ್ ಎಂಬ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಫೋಟೋಗಳನ್ನು ಬಳಕೆ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ.
ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತಗೊಳೋ ಹಕ್ಕು ಇದೆ, ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ. ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ದರ್ಶನ್ ಲೈಫ್ಗೆ ಬರುವ ಮುನ್ನವೇ, ಅವರಿಬ್ಬರ ಮಧ್ಯೆ ಏನು ಸಮಸ್ಯೆ ಇದೆ, ದರ್ಶನ್ ಏನು ಅನುಭವಿಸಿದ್ದಾರೆ ಅಂತ ನಿಮಗೆಲ್ಲರಿಗೂ ಗೊತ್ತಿದೆ. ಎಲ್ಲದಕ್ಕಿಂತ ಮುಖ್ಯ ಆತ್ಮ ಗೌರವ ಎಂದು ಪೋಸ್ಟ್ ಮಾಡಿದ್ದಾರೆ.
ವಿಜಯಲಕ್ಷ್ಮಿ ಪೋಸ್ಟ್ :-
ಪವಿತ್ರಗೌಡ ದರ್ಶನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಿಡಿಕಾರಿದ್ದು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ, ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ. ಪುರುಷ ವಿವಾಹಿತನೆಂದು ತಿಳಿದಿದ್ದರೂ ಕೂಡ ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಅವರೊಂದಿರುವ ಪೋಸ್ಟ್ ಹಂಚಿಕೊಳ್ಳುವುದು ಸರಿಯಲ್ಲ. ಎಂದು ಪವಿತ್ರಗೌಡ ಅವರ ಪತಿ ಸಂಜಯ್ ಸಿಂಗ್ ಮತ್ತು ಅವರ ಮಗಳ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.
ಮುಂದುವರೆದು, ಖುಷಿ ಗೌಡ ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.