ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರನ್ನು ಭೇಟಿಯಾದ ಎಂಎನ್ಎಸ್ ಮುಖಂಡರು, ಉತ್ತರ ಭಾರತೀಯರ ಅನಿಯಂತ್ರಿತ ವಲಸೆ ತಡೆಯದಿದ್ದರೆ ಮಹಾವಿಪತ್ತು: ಯೋಗೇಶ್ ಪರುಲೇಕರ್

ಬೆಂಗಳೂರು: ಅತ್ಯಂತ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಪ್ರಧಾನ ಕಾರ್ಯದರ್ಶಿ ಯೋಗೇಶ್ ಪರುಲೇಕರ್ ಹಾಗೂ ಮುಂಬೈ ಘಟಕದ ಅಧ್ಯಕ್ಷ ಸಂದೀಪ್ ದೇಶಪಾಂಡೆ ಅವರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಭಾಷಾ, ಸಾಂಸ್ಕೃತಿಕ ಹಾಗೂ ಜನಸಂಖ್ಯಾ ಬದಲಾವಣೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ದೇಶದ ವಿವಿಧ ಭಾಷೆಗಳ ಅಸ್ಮಿತೆ ಮತ್ತು ಹಕ್ಕುಗಳ ರಕ್ಷಣೆಗೆ ಪ್ರಾದೇಶಿಕ ಭಾಷಾ ಚಳವಳಿಗಳು ಒಂದಾಗಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಉತ್ತರ ಭಾರತೀಯರ ಅನಿಯಂತ್ರಿತ ವಲಸೆ ಮಹಾವಿಪತ್ತು: ಯೋಗೇಶ್ ಪರುಲೇಕರ್

ಸಭೆಯಲ್ಲಿ ಮಾತನಾಡಿದ ಎಂಎನ್ಎಸ್ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪರುಲೇಕರ್, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ನಡೆಯುತ್ತಿರುವ ಅನಿಯಂತ್ರಿತ ಹಾಗೂ ಅಪಾಯಕಾರಿ ವಲಸೆಯ ಕುರಿತು ಆತಂಕ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಮರಾಠಿಗರ ಜಮೀನು ಮತ್ತು ಆಸ್ತಿಗಳು ಕ್ರಮೇಣ ಉತ್ತರ ಭಾರತೀಯರ ಪಾಲಾಗುತ್ತಿವೆ. ಇದೇ ರೀತಿಯ ಬೆಳವಣಿಗೆ ಕರ್ನಾಟಕದಲ್ಲೂ ನಡೆಯುತ್ತಿದೆ. ಬೆಂಗಳೂರಿನ ಇಂದಿನ ಪರಿಸ್ಥಿತಿಯನ್ನು ನೋಡಿದರೆ, ಹದಿನೈದು ವರ್ಷಗಳ ಹಿಂದಿನ ಮುಂಬೈನ ಪರಿಸ್ಥಿತಿ ನೆನಪಾಗುತ್ತದೆ. ನಮ್ಮ ರಾಜ್ಯಗಳ ಭೌಗೋಳಿಕ ಹಾಗೂ ಸಾಮಾಜಿಕ ಚಹರೆಯನ್ನೇ ಬದಲಾಯಿಸುವ ರೀತಿಯಲ್ಲಿ ವಲಸೆ ನಡೆಯುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ವಲಸೆ ಬಂದವರೇ ರಾಜಕೀಯ ಅಧಿಕಾರದ ಭಾಗವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಬೆಳವಣಿಗೆ ಕರ್ನಾಟಕದಲ್ಲೂ ಮುಂದಿನ ಕೆಲವು ವರ್ಷಗಳಲ್ಲಿ ಸಂಭವಿಸುವ ಸಾಧ್ಯತೆ ಇದೆ. ನಾವು ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದೇವೆ ಎಂದು ಅವರು ಎಚ್ಚರಿಸಿದರು.

ಮಹಾರಾಷ್ಟ್ರಕ್ಕೆ ಪ್ರತಿದಿನ ಉತ್ತರ ಭಾರತದಿಂದ ಸುಮಾರು 40 ರೈಲುಗಳು ಆಗಮಿಸುತ್ತಿದ್ದು, ಸಾವಿರಾರು ಹೊಸ ವಲಸಿಗರು ಬರುತ್ತಿದ್ದಾರೆ. ಈ ಬೆಳವಣಿಗೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಅನುಮಾನವಿದೆ. ಜನಸಂಖ್ಯಾ ಒತ್ತಡದಿಂದ ಬಳಲುತ್ತಿರುವ ರಾಜ್ಯಗಳ ಜನರನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ವಲಸೆ ಬರುವಂತೆ ಮಾಡಲಾಗುತ್ತಿದೆ. ಇದರಿಂದ ರಾಜ್ಯಗಳ ಸಾಮಾಜಿಕ ಸ್ವರೂಪವೇ ಬದಲಾಗುತ್ತಿದೆ ಎಂದು ಪರುಲೇಕರ್ ಹೇಳಿದರು.

ಮೊದಲು ಮುಂಬೈಯಂತಹ ಮಹಾನಗರಗಳನ್ನು ಗುರಿಯಾಗಿಸಿಕೊಂಡಿದ್ದ ವಲಸೆ ಈಗ ಎರಡನೇ ಮತ್ತು ಮೂರನೇ ಹಂತದ ನಗರಗಳತ್ತ ವಿಸ್ತರಿಸುತ್ತಿದೆ. ಪುಣೆಯಂತಹ ನಗರಗಳಿಗೆ ಈಗ ನೇರವಾಗಿ ಉತ್ತರ ಭಾರತದಿಂದ ರೈಲುಗಳು ಬರುತ್ತಿವೆ ಎಂದು ಅವರು ಹೇಳಿದರು.

ಹಿಂದಿಯೇತರ ಭಾರತೀಯ ಭಾಷೆಗಳ ಜನರು ಒಂದಾಗಬೇಕು: ಸಂದೀಪ್ ದೇಶಪಾಂಡೆ

ಎಂಎನ್ಎಸ್ ಮುಂಬೈ ಘಟಕದ ಅಧ್ಯಕ್ಷ ಸಂದೀಪ್ ದೇಶಪಾಂಡೆ ಮಾತನಾಡಿ, ಹಿಂದಿಯೇತರ ಭಾರತೀಯ ಭಾಷೆಗಳ ಜನರು ಒಂದಾಗಿ ನಿಲ್ಲುವ ಕಾಲ ಬಂದಿದೆ ಎಂದು ಹೇಳಿದರು.

ನಾವು ಒಂದಾಗಿ ನಿಲ್ಲದಿದ್ದರೆ ನಮ್ಮ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯ ಮೇಲಿನ ಒತ್ತಡಗಳು ಮುಂದುವರಿಯುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಅವರ ಸೂಚನೆಯ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಭಾಷಾ ಚಳವಳಿಗಳು ಒಂದಾಗುವ ಕಾಲ ಬಂದಿದೆ: ಟಿ.ಎ. ನಾರಾಯಣಗೌಡ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ದೇಶದ ವಿವಿಧ ಭಾಷೆಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಚಳವಳಿಗಳು ಒಂದಾಗುವ ಕಾಲ ಬಂದಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಂತೆಯೇ ಕರ್ನಾಟಕದಲ್ಲೂ ವಲಸೆಯ ಪ್ರಮಾಣ ಹೆಚ್ಚುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದ ರಾಜ್ಯದ ಸಾಮಾಜಿಕ ಸ್ವರೂಪ ಬದಲಾಗುತ್ತಿದೆ. ಕರ್ನಾಟಕಕ್ಕೆ ಪ್ರತಿದಿನ ರೈಲುಗಳ ಮೂಲಕ ಸಾವಿರಾರು ಜನರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಹಲವು ನಗರಗಳಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಒತ್ತಡ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಇಲ್ಲಿಗೆ ಬಂದು ‘ಕನ್ನಡ ಮಾಲೂಮ್ ನಹೀಂ, ಹಿಂದಿ ಮೇ ಬಾತ್ ಕರೋ, ಹಿಂದಿ ರಾಷ್ಟ್ರ ಭಾಷಾ ಹೈ’ ಎಂದು ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲೆ ಹೊರರಾಜ್ಯದವರಿಂದ ಹಲ್ಲೆ ನಡೆದಿರುವ ಹಲವು ಪ್ರಕರಣಗಳು ವರದಿಯಾಗಿವೆ ಎಂದು ನಾರಾಯಣಗೌಡ ಹೇಳಿದರು.

ಕರವೇ–ಎಂಎನ್ಎಸ್ ಸಭೆಯ ಪ್ರಮುಖ ತೀರ್ಮಾನಗಳು

1. ಭಾರತೀಯ ಭಾಷೆಗಳ ವೇದಿಕೆ ಸ್ಥಾಪನೆ.

2. ಭಾರತೀಯ ಭಾಷೆಗಳ ಹಕ್ಕು, ಅಸ್ಮಿತೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಹತ್ತು ಅಂಶಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಿ ಪ್ರಕಟಿಸುವುದು.

3. ಭಾರತೀಯ ಭಾಷೆಗಳ ವೇದಿಕೆಯಲ್ಲಿ ಪಾಲ್ಗೊಳ್ಳುವಂತೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ರಾಜ್ಯಗಳ ಭಾಷಾ ಹೋರಾಟಗಾರರು, ಸಂಘಟನೆಗಳು ಹಾಗೂ ರಾಜಕೀಯ ಸಂಘಟನೆಗಳಿಗೆ ಮನವಿ ಮಾಡುವುದು.

4. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳಂ, ತೆಲಂಗಾಣ, ಪಾಂಡಿಚೇರಿ, ಗೋವಾ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಇತರ ರಾಜ್ಯಗಳ ಭಾಷಾ ಪ್ರತಿನಿಧಿಗಳನ್ನು ಒಳಗೊಂಡಂತೆ ಮುಂಬರುವ ಅಕ್ಟೋಬರ್-ನವೆಂಬರ್ ನಲ್ಲಿ ದೆಹಲಿಯಲ್ಲಿ ಭಾರತೀಯ ಭಾಷೆಗಳ ವೇದಿಕೆಯಿಂದ ಬೃಹತ್ ಸಮಾವೇಶ

5. ಮುಂಬರುವ ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಭಾರತೀಯ ಭಾಷೆಗಳ ವೇದಿಕೆಯ ವತಿಯಿಂದ ಬೃಹತ್ ಸಮಾವೇಶ ಆಯೋಜಿಸುವುದು.

ಈ ಮಹತ್ವದ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಜಾವಗಲ್, ದಿನೇಶ್ ಕುಮಾರ್ ಎಸ್.ಸಿ., ಐಟಿ ಘಟಕದ ಮುಖ್ಯಸ್ಥ ಬಿ.ಎಚ್. ರಾಘವೇಂದ್ರ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್ ಹಾಗೂ ಕರವೇ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

More articles

Latest article

Most read