ಪ್ರಭುತ್ವದ ಆರ್ಥಿಕ ವೈಫಲ್ಯದ ಹೊಣೆ;  ಪ್ರಜೆಗಳ ಬದುಕಿನ ಮೇಲೆ ಹೊರೆ

ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಪ್ರಧಾನಿಗಳು ಏನು ಮಾಡ್ತಿದ್ದಾರೆ? ಆತ್ಮ ನಿರ್ಭರ್ ಇಂಡಿಯಾ ಮಾಡ್ತೀನಿ ಅಂದ್ರು, ಮಾಡಿದ್ರಾ? ರಫ್ತು ಯಾಕೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗ್ತಿದೆ? ಆಮದು ಪ್ರಮಾಣ ಯಾಕೆ ಹೆಚ್ಚಾಗ್ತಿದೆ? ವಿದೇಶಿ ನೇರ ಬಂಡವಾಳ ಹೂಡಿಕೆ ಯಾಕೆ ದೇಶದಿಂದ ಆಚೆ ಹೋಗ್ತಿದೆ? ಆದಾನಿ ಅಂಬಾನಿಗಳ ಮೂಲಕ ಲಕ್ಷಾಂತರ ಕೋಟಿ ದೇಶಿ ಬಂಡವಾಳ ವಿದೇಶಗಳಲ್ಲಿ ಹೂಡಿಕೆ ಆಗ್ತಿದೆ. ಇದೆಲ್ಲದರಿಂದಾಗಿ  forex ಖಾಲಿ ಆಗಿ ರೂಪಾಯಿ ಮೌಲ್ಯ ಡಾಲರ್ ಎದುರು ಬೀಳ್ತಾನೇ ಇದೆ. ಈ ಮೋದಿ ಪಟಾಲಂ ದಶಕದಿಂದ ಕೇವಲ ಚುನಾವಣೆಗಳಲ್ಲಿ ತೊಡಗುವುದನ್ನು ಬಿಟ್ಟು, ವಿದೇಶಗಳನ್ನು ಸುತ್ತುವುದನ್ನು ಬಿಟ್ಟು, ಚೀನಾ ದೇಶದ ರೀತಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪ್ರಯತ್ನ ಪಟ್ಟಿದ್ದೇ ಆಗಿದ್ದರೆ ನಮ್ಮ ದೇಶದ ವಿದೇಶಿ ವಿನಿಮಯ ಮೀಸಲು ಬೇಕಾದಷ್ಟಿರುತ್ತಿತ್ತು. ಹಾಗೂ ಕೊಲ್ಲಿ ಯುದ್ಧದ ಏಟನ್ನು ನಿಭಾಯಿಸಬಹುದಾಗಿತ್ತು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

“ಇನ್ನೊಂದು ವರ್ಷ ಚಿನ್ನ ಖರೀದಿ ಬೇಡ, ಪೆಟ್ರೋಲ್ ಡೀಸೆಲ್ ಬಳಕೆ ಕಡಿತ ಮಾಡಿ, ವಿದೇಶಿ ಪ್ರಯಾಣ ಮುಂದೂಡಿ, ವಿದೇಶಿ ಸರಕು ನಿರಾಕರಿಸಿ, ಮನೆಯಿಂದಲೇ ಕೆಲಸ ಮಾಡಿ, ಸಾರ್ವಜನಿಕ ಸಾರಿಗೆ ಬಳಸಿ, ಖಾದ್ಯ ತೈಲ ಮಿತಗೊಳಿಸಿ, ರಸಗೊಬ್ಬರ ಬಳಕೆ ಕಡಿತಗೊಳಿಸಿ..” ಎಂದು  ಪ್ರಧಾನಿಗಳು ಮೇ 10 ರಂದು ಹೈದರಾಬಾದಿನ ಸಭೆಯೊಂದರಲ್ಲಿ ಸಮಸ್ತ ಭಾರತೀಯರಿಗೆ ಕರೆ ಕೊಟ್ಟಿದ್ದಾರೆ.

ಅರೆ.. ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣಾ ರ್ಯಾಲಿಗಳಲ್ಲಿ ದೇಶದ ಆರ್ಥಿಕತೆ ಸುಭಿಕ್ಷೆಯಾಗಿದೆ ಎಂದು ಇದೇ ವಿಶ್ವಗುರುಗಳು ಹೇಳಿದ್ದರಲ್ಲಾ, ಈಗೇನಾಯ್ತು? ಬಹುಷಃ ಭಾರತದ ಆರ್ಥಿಕ ಅಧೋಗತಿಯನ್ನು ಚುನಾವಣೆಯ ನಂತರವೇ ಬಹಿರಂಗಪಡಿಸಬೇಕೆಂದು ಕಾಯ್ತಾ ಇದ್ದಂತಿತ್ತು. ಅತ್ತ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ಆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದೇ ತಡ, ಪ್ರಧಾನಿಗಳ ಉಪದೇಶ ಹೊರಗೆ ಬಿತ್ತು. ದೇಶಪ್ರೇಮವನ್ನು ಸಾಬೀತು ಪಡಿಸಬೇಕೆಂದರೆ ಮೇಲೆ ಹೇಳಿದ್ದನ್ನು ಭಾರತೀಯರು ಪಾಲಿಸಬೇಕೆಂಬುದು ಮೋದಿಯವರ ಭಾವನಾತ್ಮಕ ಕರೆಯ ಉದ್ದೇಶವಾಗಿತ್ತು.

ಇಷ್ಟು ದಿನ ಮುಚ್ಚಿಟ್ಟ ಆರ್ಥಿಕ ಅಧೋಗತಿಯನ್ನು ಈಗ ಬಿಚ್ಚಿಡಲು ಮುಖ್ಯ ಕಾರಣ ಮಧ್ಯಪ್ರಾಚ್ಯದ ಯುದ್ಧ, ಕಚ್ಚಾ ತೈಲ ಬೆಲೆ ಏರಿಕೆ, ಆರ್ಥಿಕ ಒತ್ತಡ, ವಿದೇಶಿ ವಿನಿಮಯ ಮೀಸಲು (Forex reserves) ರಕ್ಷಣೆ. ಇವುಗಳನ್ನೆಲ್ಲಾ ರಾಜತಾಂತ್ರಿಕವಾಗಿ ನಿರ್ವಹಿಸುವಲ್ಲಿ ವಿಫಲವಾದ ಪ್ರಧಾನಿಗಳು ತಮ್ಮ ಹೊಣೆಗಾರಿಕೆಯನ್ನು ದೇಶದ ಜನರ ಮೇಲೆ ಹಾಕಿದ್ದಾರೆ.

ಹೌದು.. ಈಗ ಜಾಗತಿಕ ಬಿಕ್ಕಟ್ಟು ಇದೆ. ಆರ್ಥಿಕ ಸ್ಥಿರತೆಗೆ ಇವೆಲ್ಲವನ್ನೂ ಮಾಡಬೇಕಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಹಾಗಿದ್ದರೆ ಈ ಜಾಗತಿಕ ಸಂಕಷ್ಟಕ್ಕೆ ಕಾರಣ ಆದವರು ಯಾರು? ಚೀನಾ, ರಷ್ಯಾ, ಜಪಾನ್, ಜರ್ಮನ್ ಮುಂತಾದ ದೇಶಗಳಿಗೆ ಇಲ್ಲದೇ ಇರುವ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ಬಂದಿದ್ದಾದರೂ ಯಾಕೆ?

ಅದಕ್ಕೆಲ್ಲಾ ಮೋದಿಯವರ ವಿದೇಶಾಂಗ ನೀತಿ ಮತ್ತು ಸರಂಡರ್ ಪಜೀತಿಯೇ ಕಾರಣ. ಅದ್ಯಾವುದೋ ಮುಲಾಜಿಗೋ, ಎಪ್‌ಸ್ಟೀನ್ ಫೈಲ್ ಬ್ಲಾಕ್‌ಮೇಲ್‌ ಗೋ ಹೆದರಿದ ಮೋದಿಯವರು ಟ್ರಂಪ್ ಮುಂದೆ ಸಂಪೂರ್ಣ ಶರಣಾಗತರಾಗಿ ದೇಶದ ಸಾರ್ವಭೌಮತ್ವವನ್ನು ಅವರ ಅಡಿದಾವರೆಗಳಿಗೆ ಒಪ್ಪಿಸಿದ್ದೇ ದೇಶದ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.

* ಮೊದಲು ಅತೀ ಕಡಿಮೆ ಬೆಲೆಗೆ ತೈಲವನ್ನು ರಷ್ಯಾ ಭಾರತಕ್ಕೆ ಸರಬರಾಜು ಮಾಡುತ್ತಿತ್ತು. ಯಾವಾಗ ರಷ್ಯಾ ದ ತೈಲ ಖರೀದಿಸಬಾರದು ಎಂದು ಟ್ರಂಪ್ ಆದೇಶಿಸಿದರೋ ಆಗ ಮೋದಿ ಸಾಹೇಬರು ಹೆಚ್ಚಿನ ಬೆಲೆಗೆ ಅಮೇರಿಕದಿಂದ ಇಂಧನ ಸರಕು ಕೊಳ್ಳಬೇಕಾಯ್ತು.

* ಇರಾನ್ ಸಹ ಅಮೇರಿಕಕ್ಕೆ ತೈಲ ಸಂಪನ್ಮೂಲ ಸರಬರಾಜು ಮಾಡುತ್ತಿತ್ತು. ಅದಕ್ಕೂ ಅಡ್ಡಗಾಲು ಹಾಕಿದ ಟ್ರಂಪ್ ಇರಾನ್ ತೈಲ ನಿಲ್ಲಿಸಿ ಅಂತಾ ಮೋದಿಯವರಿಗೆ ಕಟ್ಟಪ್ಪಣೆ ಮಾಡಿದ್ದರಿಂದ ಇರಾನ್ ಇಂಧನ ಸ್ಟಾಪ್ ಆಯ್ತು.

* ಕೊಲ್ಲಿ ಯುದ್ದ ಆರಂಭವಾಗುವುದಕ್ಕಿಂತ ಮೂರು ದಿನ ಮುಂಚೆ ಟ್ರಂಪ್ ಕೋರಿಕೆಯಂತೆ ಇಸ್ರೇಲಿಗೆ ಭೇಟಿ ನೀಡಿದ ಮೋದಿಯವರು ಇಸ್ರೇಲನ್ನು ಫಾದರ್ ಲ್ಯಾಂಡ್ ಎಂದು ಹೊಗಳಿ ಶತಮಾನಗಳ ಕಾಲದ ಮಿತ್ರರಾಷ್ಟ್ರವಾದ ಇರಾನ್ ದೇಶವನ್ನು ಹೀಯಾಳಿಸಿ ಬಂದರು. ಇದರಿಂದಾಗಿ ಇರಾನ್ ಮುನಿಸುಗೊಂಡಿತು. ಇರಾನಿನ ಸರ್ವೋಚ್ಚ ನಾಯಕ ಖೊಮೇನಿ ಹಾಗೂ 40 ಜನ ಗಣ್ಯರನ್ನು ಅಮೇರಿಕ ಬಾಂಬಿಟ್ಟು ಹತ್ಯೆ ಮಾಡಿದರೂ ಭಾರತದ ಪರವಾಗಿ ಮೋದಿ ಒಂದು ಸಾಂತ್ವನದ ಮಾತನ್ನೂ ಹೇಳಲಿಲ್ಲ.

* ಯಾವಾಗ ಯುದ್ಧ ತೀವ್ರವಾಯ್ತೋ ಆಗ ಟ್ರಂಪ್ ಮೋದಿಯವರಿಗೆ “ರಷ್ಯಾದಿಂದ ತೈಲ ಖರೀದಿಗೆ ಒಂದು ತಿಂಗಳ ರಿಯಾಯಿತಿ ಕೊಟ್ಟಿದ್ದೇನೆ” ಎಂದು ಕರುಣೆ ತೋರಿದರು. ಆದರೆ ರಷ್ಯಾ ಮೊದಲಿನ ಹಾಗೆ ಕಡಿಮೆ ಬೆಲೆಗೆ ತೈಲ ಸರಬುರಾಜು ಮಾಡಲು ನಿರಾಕರಿಸಿ ಮಾರುಕಟ್ಟೆ ದರದಲ್ಲಿ ತೈಲವನ್ನು ಮಾರಿತು. ಇದರಿಂದ ಭಾರತಕ್ಕೆ ಅಪಾರ ನಷ್ಟವೂ ಆಯ್ತು.

* ಇದರ ಮೇಲೆ ಟ್ರಂಪ್ ಭಾರತದ ಸರಕುಗಳ ಮೇಲೆ 18% ತೆರಿಗೆ ವಿಧಿಸಿದ್ದಲ್ಲದೇ ಭಾರತದಿಂದ ರಫ್ತಾಗುವ ಸರಕುಗಳಿಗೆ ಶೂನ್ಯ ತೆರಿಗೆ ಎಂದು ಘೋಷಿಸಿದರು. ಇದನ್ನೂ ಶರಣಾಗತ ಪ್ರಧಾನಿ ಕನಿಷ್ಠ ಪ್ರತಿರೋಧವನ್ನು ತೋರದೇ ಒಪ್ಪಿಕೊಂಡರು. ಇದರಿಂದಾಗಿ ಭಾರತದ ಸರಕುಗಳಿಗೆ ತೆರಿಗೆ ವಿಧಿಸಿದ್ದರಿಂದ ರಫ್ತು ವ್ಯವಹಾರ ಕುಂಠಿತವಾಯ್ತು. ಭಾರತದ ಆರ್ಥಿಕತೆಗೂ ಹೊಡೆತ ಬಿತ್ತು. ತೆರಿಗೆ ರಹಿತ ಆಮದು ಹೆಚ್ಚಾಯಿತು. ಇದರಿಂದಾಗಿ ವಿದೇಶಿ ವಿನಿಮಯದ ಮೇಲೆ ದುಷ್ಪರಿಣಾಮವಾಗಿ ಭಾರತದ ಆರ್ಥಿಕತೆ ಕುಸಿಯತೊಡಗಿತು.

* ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯಲು ಮೋದಿಯವರಿಗೆ ಅದ್ಯಾವ ಬೆದರಿಕೆ ಇತ್ತೋ ಗೊತ್ತಿಲ್ಲ. “ನಾನು ಮನಸ್ಸು ಮಾಡಿದರೆ ಮೋದಿಯ ರಾಜಕೀಯ ಭವಿಷ್ಯವನ್ನು ನಾಶ ಮಾಡಬಲ್ಲೆ” ಎಂದು ಟ್ರಂಪ್ ಬಹಿರಂಗವಾಗಿಯೇ ಹೇಳಿ ಮೋದಿಯವರ ಶರಣಾಗತಿಯನ್ನು ಬಯಲು ಮಾಡಿದರು.

* ಅಮೇರಿಕ ಇಸ್ರೇಲ್ ಪರವಾದ ಮೋದಿ ನಿಲುವಿನಿಂದಾಗಿ ಇರಾನ್ ತನ್ನ ಹಾರ್ಮೋಜ್ ಜಲಸಂಧಿಯಲ್ಲಿ ಭಾರತದ ತೈಲದ ಹಡಗುಗಳನ್ನು ತಡೆಹಿಡಿಯಿತು. ಹಡಗೊಂದಕ್ಕೆ ಅನುಮತಿ ಕೊಡಲು 18 ಕೋಟಿ ಟೋಲ್ ವಿಧಿಸಿತು. ತದನಂತರ ಹಡಗು ಸಂಚಾರವನ್ನೇ ನಿಲ್ಲಿಸಿತು.

* ಮೋದಿಯವರು ಮಾಡಿದ ಈ ಎಲ್ಲಾ ಯಡವಟ್ಟುಗಳಿಂದಾಗಿ ಭಾರತದ ಆರ್ಥಿಕತೆಗೆ ಸಂಕಷ್ಟ ಎದುರಾಯಿತು. ವಿದೇಶಿ ವಿನಿಮಯದಲ್ಲಿ ಏರು ಪೇರಾಗಿ ಡಾಲರ್ ಎದುರು ರೂಪಾಯಿಯ ಮೌಲ್ಯ ಏರುತ್ತಲೇ ಹೋಯ್ತು.

ಇವೆಲ್ಲಾ ಬಿಕ್ಕಟ್ಟುಗಳಿಗೆ ತಪ್ಪಾದ ವಿದೇಶಾಂಗ ನೀತಿ, ಮೋದಿ ಶರಣಾಗತಿಯೇ ಮೂಲ ಕಾರಣವಾಗಿದೆ. ಈಗ ಮೋದಿಯವರ ತಪ್ಪು ನಿರ್ಧಾರದಿಂದಾದ ಆರ್ಥಿಕ ಸಂಕಷ್ಟಗಳ ಭಾರವನ್ನು ಭಾರತೀಯರ ಮೇಲೆ ಹೊರಿಸಲು ರಾಷ್ಟ್ರೀಯ ಹಿತಾಸಕ್ತಿ ಹಾಗೂ ದೇಶಪ್ರೇಮದ ಟ್ರಂಪ್ ಕಾರ್ಡನ್ನು ಪ್ರಧಾನಿಗಳು ಬಳಸುತ್ತಿದ್ದಾರೆ.

ಮದುವೆ ಸಮಾರಂಭಗಳಿದ್ದರೂ ಚಿನ್ನ ಖರೀದಿಸಬೇಡಿ, ವಾಹನಗಳಿಗೆ ಡೀಸೆಲ್ ಪೆಟ್ರೋಲ್ ಹಾಕಿಸಬೇಡಿ, ರೈತರು ರಸಗೊಬ್ಬರ ಹೆಚ್ಚು ಉಪಯೋಗಿಸಬೇಡಿ ಎಂತೆಲ್ಲಾ ಅತ್ಯಗತ್ಯವಾದವುಗಳನ್ನೆಲ್ಲಾ ಬಳಸಲು ಮಿತಿ ಹೇರುತ್ತಿದ್ದಾರೆ. ಆ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಪರೋಕ್ಷವಾಗಿ ಸಾರುತ್ತಿದ್ದಾರೆ.

ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಪ್ರಧಾನಿಗಳು ಏನು ಮಾಡ್ತಿದ್ದಾರೆ? ಆತ್ಮ ನಿರ್ಭರ್ ಇಂಡಿಯಾ ಮಾಡ್ತೀನಿ ಅಂದ್ರು, ಮಾಡಿದ್ರಾ? ರಫ್ತು ಯಾಕೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗ್ತಿದೆ? ಆಮದು ಪ್ರಮಾಣ ಯಾಕೆ ಹೆಚ್ಚಾಗ್ತಿದೆ? ವಿದೇಶಿ ನೇರ ಬಂಡವಾಳ ಹೂಡಿಕೆ ಯಾಕೆ ದೇಶದಿಂದ ಆಚೆ ಹೋಗ್ತಿದೆ? ಆದಾನಿ ಅಂಬಾನಿಗಳ ಮೂಲಕ ಲಕ್ಷಾಂತರ ಕೋಟಿ ದೇಶಿ ಬಂಡವಾಳ ವಿದೇಶಗಳಲ್ಲಿ ಹೂಡಿಕೆ ಆಗ್ತಿದೆ. ಇದೆಲ್ಲದರಿಂದಾಗಿ  forex ಖಾಲಿ ಆಗಿ ರೂಪಾಯಿ ಮೌಲ್ಯ ಡಾಲರ್ ಎದುರು ಬೀಳ್ತಾನೇ ಇದೆ. ಈ ಮೋದಿ ಪಟಾಲಂ ದಶಕದಿಂದ ಕೇವಲ ಚುನಾವಣೆಗಳಲ್ಲಿ ತೊಡಗುವುದನ್ನು ಬಿಟ್ಟು, ವಿದೇಶಗಳನ್ನು ಸುತ್ತುವುದನ್ನು ಬಿಟ್ಟು, ದ್ವೇಷ ಭಾಷಣ ಸುಳ್ಳು ಆಶ್ವಾಸನೆಗಳನ್ನು ಕೊಡುವುದನ್ನು ಬಿಟ್ಟು ಚೀನಾ ದೇಶದ ರೀತಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪ್ರಯತ್ನ ಪಟ್ಟಿದ್ದೇ ಆಗಿದ್ದರೆ ನಮ್ಮ ದೇಶದ ವಿದೇಶಿ ವಿನಿಮಯ ಮೀಸಲು ಬೇಕಾದಷ್ಟಿರುತ್ತಿತ್ತು. ಹಾಗೂ ಕೊಲ್ಲಿ ಯುದ್ಧದ ಏಟನ್ನು ನಿಭಾಯಿಸಬಹುದಾಗಿತ್ತು.

ಆದರೆ ಅಂಧಭಕ್ತರು ಮೋದಿಯವರ ವೈಫಲ್ಯಗಳನ್ನು ಮರೆಮಾಚಿ ದೇಶಕ್ಕಾಗಿ ತ್ಯಾಗದ ಪಾಠ ಮಾಡುತ್ತಿದ್ದಾರೆ. ಬಿಜೆಪಿಯ ಐಟಿ ಸೆಲ್ಲೋ ಇಲ್ಲವೇ ಅದ್ಯಾರೋ ಅಂಧಭಕ್ತರೋ 1967 ರಲ್ಲಿ ಹಿಂದೂ ಪತ್ರಿಕೆಯ ಮುಖಪುಟದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ತಮ್ಮ ಮೋದಿ ಭಕ್ತಿಯನ್ನು ಸಾಬೀತು ಪಡಿಸಿದ್ದಾರೆ. “1967 ರಲ್ಲಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ ಚಿನ್ನ ಖರೀದಿಸಬೇಡಿ ಎಂದು ಹೇಳಿದ್ದರು ಅದಕ್ಕೆ ಪುರಾವೆ ದಿ ಹಿಂದೂ ಪತ್ರಿಕೆ” ಎನ್ನುವ ಚಿತ್ರ ಶರವೇಗದಲ್ಲಿ ಜಾಲತಾಣಗಳಲ್ಲಿ ಹರಿದಾಡತೊಡಗಿತು. ಅಂಧಭಕ್ತರಲ್ಲದವರೂ ಇದನ್ನು ನಂಬಿದ್ದರು. ಹಾಗೂ ಇಂದಿರಾರವರ ಸಮರ್ಥನೆಗೂ ಇಳಿದರು. ಆದರೆ ಇದೊಂದು ಫೇಕ್ ನ್ಯೂಜ್ ಎಂದು “ದಿ ಹಿಂದೂ” ಪತ್ರಿಕೆಯವರೇ ಹೇಳಿಕೆ ನೀಡಿ ಅಂಧಭಕ್ತರ ಆವೇಶಕ್ಕೆೇ ತಣ್ಣೀರೆರಚಿದರು. ಅಂಧಭಕ್ತ ಫೇಕುಗಳ ಮುಖವಾಡ ಕಳಚಿತು. ಯಾವುದನ್ನೋ ಎಲ್ಲಿಗೋ ತಳಕು ಹಾಕಿ ಕಳೆದುಹೋದ ಮೋದಿ ಮಾನವನ್ನು ಕಾಪಾಡಲು ಪರದಾಡುವ ಈ ಗುಲಾಮಿ ಭಕ್ತರ ದುಸ್ಥಿತಿ ಶೋಚನೀಯ.

ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗಿದೆ, ಐದು ಟ್ರಿಲಿಯನ್ ಡಾಲರ್ ಎಕಾನಮಿ ಆಗುತ್ತದೆ ಎಂದೆಲ್ಲಾ ಬುರುಡೆ ಬಿಡುತ್ತಿದ್ದ ಗೋದಿ ಮಾಧ್ಯಮಗಳು ಈಗ ದೇಶದ ಆರ್ಥಿಕತೆಯ ಬಿಕ್ಕಟ್ಟಿನ ಬಗ್ಗೆ, ಅದಕ್ಕೆ ಕಾರಣಗಳ ಬಗ್ಗೆ ಬಾಯಿ ಬಿಡುತ್ತಿಲ್ಲ. ಯುದ್ಧದಿಂದಾಗಿ ದೇಶ ಸಂಕಷ್ಟದಲ್ಲಿದೆ, ಎಲ್ಲವನ್ನೂ ತ್ಯಾಗ ಮಾಡಿ ದೇಶಪ್ರೇಮವನ್ನು ಭಾರತೀಯರು ತೋರಿಸಬೇಕಾಗಿದೆ ಎಂದು ಮೋದಿ ಉಪದೇಶವನ್ನು ಪ್ರಚಾರ ಮಾಡಲಾಗುತ್ತಿದೆ.

ಮೋದಿಯವರ ಸಮಸ್ತ ಅಂಧಭಕ್ತರು ಹಾಗೂ ಸಂಘ ಪರಿವಾರದ ಅಂಗಾಂಗಗಳು ಬೇಕಾದರೆ ತ್ಯಾಗ ಮಾಡಲಿ, ಕಡಿಮೆ ತಿನ್ನಲಿ, ಖಾಸಗಿ ವಾಹನಗಳನ್ನು ಬಳಸದೇ ಇರಲಿ, ಚಿನ್ನ ಕೊಳ್ಳುವುದನ್ನು ನಿಲ್ಲಿಸಲಿ ಬೇಡ ಅಂದವರು ಯಾರು? ಆದರೆ ಚೌಕೀದಾರರ ವೈಫಲ್ಯಗಳ ದುಷ್ಪರಿಣಾಮಗಳನ್ನು ದೇಶಪ್ರೇಮದ ಹೆಸರಲ್ಲಿ ಭಾರತೀಯರ ಮೇಲೆ ಹೇರದೇ ಇರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read