ಬೆಂಗಳೂರು ನಾಗರಿಕರಿಗೆ ಭೂ ಗ್ಯಾರಂಟಿ ಘೋಷಿಸಿದ ಡಿ.ಕೆ.ಶಿವಕುಮಾರ್

ನನ್ನ ಖಾತೆ, ನನ್ನ ಹಕ್ಕು' ಅಭಿಯಾನಕ್ಕೆ ಮೇ 15ರಂದು ಚಾಲನೆ

ಬೆಂಗಳೂರು : ಬೆಂಗಳೂರು ನಗರದ ‘ಬಿ’ ಖಾತಾ ಆಸ್ತಿ ಹೊಂದಿರುವವರಿಗೆ ‘ಎ’ ಖಾತಾ ಮಾಡಿಸಿಕೊಳ್ಳಲು 100 ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಶೇ.60ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಬೆಂಗಳೂರು ಅನೇಕ ನಾಗರಿಕಸ್ನೇಹಿಯಾಗಿ ಹಲವು ಘೋಷಣೆಗಳನ್ನು ಮಾಡಿದರು. ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ ಮೂಲಕ ಬೆಂಗಳೂರು ನಾಗರಿಕರಿಗೆ ‘ಇ’ ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ ‘ಎ’ ಯಿಂದ ‘ಬಿ’ ಖಾತಾ ಶುಲ್ಕ ಪಾವತಿಸಿದರೆ ಶೇ. 60 ರಷ್ಟು ರಿಯಾಯಿತಿ, ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ, ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ, ಬಿಡಿಎ ಮನೆಗಳ ಮಾರಾಟ ಸೇರಿದಂತೆ ಬೆಂಗಳೂರಿನ ನಾಗರಿಕರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಂಪರ್ ಕೊಡುಗೆಯಾಗಿ ಘೋಷಿಸಿದ್ದಾರೆ.

‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನ ಮೂರು ತಿಂಗಳ ಕಾಲ ಶನಿವಾರ ನಡೆಯಲಿದೆ. ಪ್ರತಿ ಶನಿವಾರ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10 ರಂತೆ 50 ಸ್ಥಳಗಳಲ್ಲಿ ಈ ಅಭಿಯಾನ (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ. ಮೇ 16 ರಿಂದ ಇದಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗಿ ಸಂಜೆವರೆಗೆ ನಡೆಯುವ ಈ ಅಭಿಯಾನದ ಸ್ಥಳಗಳನ್ನು ಮುಂಚಿತವಾಗಿ ತಿಳಿಸಲಾಗುವುದು” ಎಂದರು.

ʼಭೂ ಗ್ಯಾರಂಟಿ: ಡಿಜಿಟಲ್ ಆಸ್ತಿ ಹಕ್ಕು : ನಾವು ಜಾರಿಗೆ ತಂದಿರುವ ‘ಇ’ ಖಾತಾ ಆಂದೋಲನ ಭಾರತದ ಅತಿದೊಡ್ಡ ಸಮಗ್ರ ಡಿಜಿಟಲ್ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿದ್ದು , 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನುhttps://BBMPeAasthi.karnataka.gov.in ರಲ್ಲಿ ಪಡೆದುಕೊಳ್ಳಬಹುದು” ಎಂದರು.

ನಗರದಲ್ಲಿ ದಾಖಲೆಗಳು ಸರಿ ಇರುವ ಸುಮಾರು 16 ಲಕ್ಷ ‘ಎ’ ಖಾತೆಗಳಿವೆ. 7 ಲಕ್ಷ ‘ಬಿ’ ಖಾತೆಗಳಿವೆ. ‘ಭೂ ಗ್ಯಾರಂಟಿ’ ಮೂಲಕ ಬೆಂಗಳೂರಿನ ಪ್ರತಿಯೊಬ್ಬ ನೈಜ ಆಸ್ತಿ ಮಾಲೀಕರಿಗೂ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಎಲ್ಲೆಡೆಯೂ ಲಭ್ಯವಾಗುವ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಇದನ್ನು ಪಾರದರ್ಶಕ, ಸುರಕ್ಷಿತ ಹಾಗೂ ನಾಗರಿಕ ಕೇಂದ್ರಿತ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗಿದೆ” ಎಂದರು.

ಶೇ.60ರಷ್ಟು ರಿಯಾಯಿತಿ:

‘ಬಿ’ ಖಾತೆಯಿಂದ ‘ಎ’ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದವರು ದಾಖಲೆಗಳನ್ನು ಸರಿಯಾಗಿ ನೀಡಿದ್ದರೆ ಈಗ ಗೈಡೆನ್ಸ್ ವ್ಯಾಲ್ಯೂನ ಶೇ. 5 ರಷ್ಟನ್ನು ಕಟ್ಟಬೇಕಿದೆ. ಆದರೆ 100 ದಿನಗಳ ಒಳಗಾಗಿ ಶುಲ್ಕ ಪಾವತಿಸಿದರೆ ಶೇ. 2 ರಷ್ಟು ಕಟ್ಟಿದರೆ ಸಾಕು. ಅಂದರೆ ಶೇ.60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ 1 ಕೋಟಿ ಆಸ್ತಿಯ ಬೆಲೆ ಇದ್ದರೆ 5  ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ಈಗ 2 ಲಕ್ಷ ಕಟ್ಟಿದರೆ ಸಾಕು. ಇದರಿಂದ 7 ಲಕ್ಷ ಆಸ್ತಿ ಮಾಲೀಕರಿಗೆ ಉಪಯೋಗವಾಗಲಿದೆ ಎಂದರು.

100 ದಿನಗಳಲ್ಲಿ ಇದರ ಉಪಯೋಗ ಪಡೆಯಲಿಲ್ಲ ಎಂದರೆ ನಂತರ ಶೇ.5 ರಷ್ಟೇ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪ್ರತಿಯೊಂದು ಆಸ್ತಿ ದಾಖಲೆಗಳಲ್ಲಿ ಜಿಪಿಎಸ್, ಮಾಲೀಕರ ಫೋಟೋ ಇರುತ್ತದೆ. ಒಂದೇ ಒಂದು ರೂಪಾಯಿ ಲಂಚ ಇಲ್ಲದಂತೆ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತಿರುತ್ತಾರೆ. ಜೊತೆಗೆ ಆನ್ ಲೈನ್ ಅಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದರು.

More articles

Latest article

Most read