Thursday, December 12, 2024

ಮಗನಿಗಾಗಿ ಯೋಗೇಶ್ವರ್‌ ವಿರುದ್ಧ ಷಡ್ಯಂತ್ರ ಮಾಡಿದ್ದೇ ಕುಮಾರಸ್ವಾಮಿ: ಡಿಕೆ ಸುರೇಶ್ ವಾಗ್ದಾಳಿ

Most read

ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಇದೀಗ ಚುನಾವಣಾ ಕಾವು ಜೋರಾಗಿದೆ. ಎರಡೂ ಪಕ್ಷಗಳು ಗೆಲುವಿಗಾಗಿ ಪಣ ತೊಟ್ಟು ನಿಂದಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (ಅವರನ್ನು ಗೆಲ್ಲಿಸಲೇಬೇಕು ಎಂದು ಡಿಕೆ ಬ್ರದರ್ಸ್ ಪಣ ತೊಟ್ಟಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ಸಿಪಿ ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ಓಡಿಸಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.

ರಾಮನಗರದಂತೆ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್‌ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಚನ್ನಪಟ್ಟಣದ ಸುಳ್ಳೇರಿ ಗ್ರಾಮದಲ್ಲಿ ತಿರುಗೇಟು ನೀಡಿರುವ ಡಿಕೆ ಸುರೇಸ್ ಅವರು, “ಹೆಚ್‌ಡಿ ದೇವೇಗೌಡ, ಕುಮಾರಸ್ವಾಮಿ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡುಬರಬೇಕಿತ್ತು. ಆದರೆ ಅವರು ತಮ್ಮ ಮಗನಿಗೆ ಅವಕಾಶ ಕೊಡಬೇಕು ಎನ್ನುವ ಉದ್ದೇಶದಿಂದ ಸಿಪಿ ಯೋಗೇಶ್ವರ್ ಅವರನ್ನು ಷಡ್ಯಂತ್ರ ಮಾಡಿ ಆಚೆ ಓಡಿಸಿದ್ದಾರೆ. ಈ ರೀತಿ ಷಡ್ಯಂತ್ರ ಮಾಡಿದ್ದು ಅವರು ನಾವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಯೋಗೇಶ್ವರ್‌ಗೆ ಎರಡು ಬಾರಿ ಮೋಸ ಆಗಿದೆ. ಮತ್ತೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಜನರು ಅವರಿನ್ನು ಗೆಲ್ಲಿಸಿತರಬೇಕು. ಯೋಗೇಶ್ವರ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನಮಗೂ ಇದೆ ಎಂದು ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಕಣ್ಣೀರಿಗೆ ಡಿಕೆ ಬ್ರದರ್ಸ್ ಕಾರಣ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಯಾಕೆ ಈ ಹೇಳಿಕೆ ಕೊಟ್ಟರು ಗೊತ್ತಿಲ್ಲ. ಕುಮಾರಸ್ವಾಮಿ ಮಗ, ದೇವೇಗೌಡರ ಮೊಮ್ಮಗ ಅನ್ನೋದಕ್ಕೆ ನಿಖಿಲ್ ನ ರಾಜ್ಯದ ಜನ ಗುರುತಿಸುತ್ತಿದ್ದಾರೆ. ಅದನ್ನ ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರ ಗುರುತು ಅವರಿಗೆ ಎಷ್ಟು ಅನಾನುಕೂಲ ಆಗಿದೆ. ಅನುಕೂಲ ಎಷ್ಟಾಗಿದೆ ಅನ್ನೋದಕ್ಕಿಂತ ಆ ಹೆಸರೇ ನಿಖಿಲ್ ಗೆ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

More articles

Latest article