ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ, ಮೇ 30ರಂದು ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು :  ಕೇಂದ್ರದ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯಿಂದ ಎಸ್ ಐ ಆರ್  ಪರಿಶೀಲನೆ ಯ ಮೂಲಕ ಸಾರ್ವಜನಿಕರ ಹೆಸರನ್ನು ಕೈಬಿಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಗಂಭೀರ ಆರೋಪ ಮಾಡಿದ್ದಾರೆ

“ದಶಕಗಳಿಂದ ಮತ ಚಲಾಯಿಸುತ್ತಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕಾರ್ಯಕ್ರಮ ಅನ್ಯಾಯಯುತವಾದುದು. ಇದು ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹ,” ಎಂದು ಕಿಡಿಕಾರಿದರು. ಈ ಅಕ್ರಮಗಳ ವಿರುದ್ಧ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ, ಮೇ 30ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 

ಪಕ್ಷದ ಉನ್ನತ ನಾಯಕರ ಮಾರ್ಗದರ್ಶನದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತದಾರರ ಪಟ್ಟಿ ಪರಿಶೀಲನೆ ಮತ್ತು ಜನಜಾಗೃತಿ ಅಭಿಯಾನ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ನಡೆಸುತ್ತಿರುವ ಇಂತಹ ವ್ಯವಹಾರ ನಮಗೆಲ್ಲಾ ತುಂಬಾ ಬೇಸರ ತಂದಿದೆ ಇಡೀ ಭಾರತ ದೇಶದ ಜನರಿಗೆ ಇದು ಅನ್ಯಾಯ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ಗ್ರಾಮದಲ್ಲಿ ಅಥವಾ ತನ್ನ ನಗರದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡ್ತಾ ಇದ್ದಾರೆ, ಹತ್ತಾರು ಎಲೆಕ್ಷನ್‌ನಲ್ಲಿ ಮತ ಕೊಟ್ಟಿದ್ದಾರೆ. ಅಂತವರ ಮತವನ್ನು ಕಸಿಯುವಂತಹ ಕಾರ್ಯಕ್ರಮವನ್ನು ಮಾಡಿದ್ದಾರೆ ಅಂದ್ರೆ, ಇದು ನಮ್ಮ ದೇಶದ ದುರದೃಷ್ಟ. 

ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಮತ್ತು ಸಂವಿಧಾನವನ್ನು ಅವರು ಕಗ್ಗೊಲೆ ಮಾಡಿದ್ದಾರೆ. ಇದಕ್ಕೆ ನಾವು ಕಾಂಗ್ರೆಸ್ ಪಾರ್ಟಿ, ನಮ್ಮ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರ ನೇತೃತ್ವದಲ್ಲಿ ಇವತ್ತು ಎಲ್ಲಾ ಸೆಕ್ರೆಟರಿಸ್ ಜೊತೆ ಎರಡು ದಿನಗಳ ಕಾರ್ಯಗಾರ ಮಾಡಿದ್ದೇವೆ ಎಂ.ಎಲ್.ಎ ಕ್ಯಾಂಡಿಡೇಟ್ಸ್, ಎಂ.ಎಲ್.ಎ, ಮಿನಿಸ್ಟರ್ಸ್ ಎಲ್ಲರೂ ಸೇರಿ. ಈ ದಿನ ಎಲ್ಲಾ ಆರ್ಗನೈಸೇಶನ್, ಡಿಸ್ಟ್ರಿಕ್ಟ್ ಕಾಂಗ್ರೆಸ್ ಪ್ರೆಸಿಡೆಂಟ್, ಕೆಪಿಸಿಸಿ ಆಫೀಸ್ ಬೇರರ್ಸ್, ಗ್ಯಾರಂಟಿ ಅಧ್ಯಕ್ಷರು, ಉಪಾಧ್ಯಕ್ಷರು ಅದೇ ರೀತಿ ಬೂತ್ಸ್, ಕಾರ್ಪೊರೇಷನ್ ಚೇರ್ಮನ್ ಎಲ್ಲರ ಒಟ್ಟಿಗೆ ಸೇರಿ ನಾವು  ಇದೆ ತಿಂಗಳ 30 ರಂದು ಪ್ರತಿಭಟನೆಯನ್ನು ಎಲ್ಲಾ ಜಿಲ್ಲಾ ಹೆಡ್‌ಕ್ವಾರ್ಟರ್‌ನಲ್ಲಿ ಪ್ರೈಸ್ ರೈಸ್ (ಬೆಲೆ ಏರಿಕೆ) ಬಗ್ಗೆ  ಮಾಡಲಿದ್ದೇವೆ 

ಎಸ್ ಐ ಆರ್ ಕುರಿತು ನಾವು ಎರಡು ದಿನಗಳ ಸವಿಸ್ತಾರವಾಗಿ ವಿಚಾರ ವಿನಿಮಯ ಮಾಡಿದ್ದೀವಿ. ಯಾವ ರೀತಿ ಮತ ರಕ್ಷಣೆ ಮಾಡ್ಕೊಬೇಕು ಅನ್ನೋದರ ಬಗ್ಗೆ ನಾವು ಮಾರ್ಗದರ್ಶನ ಎಲ್ಲ ಕಾರ್ಯಕರ್ತರಿಗೆ ಹೇಳಿದ್ದೀವಿ. ಇಂಟರ್ನ್ ಅವರು ಬಿ.ಎಲ್.ಒ ಟೂ ಅಂತ ಇರ್ತಾರೆ, ನಾವೇ ಅಪಾಯಿಂಟ್ ಮಾಡಿರೋರು. ಅವರ ಮುಖಾಂತರ ಎಲ್ಲಾ ಹಳ್ಳಿಯಲ್ಲಿ ಇರುವ ಜನರಿಗೂ ಕೂಡ ಮನವರಿಕೆ ಮಾಡುವಂತಹದನ್ನ ಮಾಡ್ತೀವಿ.

ನಿಮ್ಮ ವೋಟ್ ಕದ್ದು ಬಿಡ್ತಾರೆ. ನೀವೇನಾದ್ರೂ ಬಿಜೆಪಿ ವಿರುದ್ಧವಾಗಿ ಮಾಡಿದ್ರೆ,ಮಾಧ್ಯಮ ಮಿತ್ರರು ಬಿಜೆಪಿ ವಿರುದ್ದ ಮಾತಾಡಿದರೆ ನಿಮ್ಮ ಓಟು ತೆಗೆದು ಬಿಡ್ತಾರೆ ಎಂದರು.

More articles

Latest article

Most read