ಲಂಚದ ಹಣ ಸಮಾನವಾಗಿ ಹಂಚಿ ತಿನ್ನುವುದಾಗಿ ಗಂಗಾಜಲ ಕೈಯಲ್ಲಿ ಇಟ್ಟುಕೊಂಡು ಪ್ರಮಾಣ ಮಾಡಿದ ನಗರಸಭಾ ಸದಸ್ಯರು!

ಉತ್ತರ ಪ್ರದೇಶ ಆ 26: ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ನಗರಸಭಾ ಸದಸ್ಯರೇ ಲಂಚದ ಹಣ ಹಂಚಿಕೊಳ್ಳುವುದಾಗಿ ಗಂಗಾಜಲ ಕೈಯಲ್ಲಿ ಹಿಡಿದು ಪ್ರಮಾಣ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರಸಭೆಯಲ್ಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಜಹಾನ್‌ಪುರ ಮಹಾನಗರ ಪಾಲಿಕೆ ತನಿಖೆಗೆ ಆದೇಶಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಲವು ಮಂದಿ ಕೈಯಲ್ಲಿ ಗಂಗಾಜಲ ಹಿಡಿದು ಒಬ್ಬ ವ್ಯಕ್ತಿ ಹೇಳಿಕೊಡುವ ಪ್ರಮಾಣವನ್ನು ಪುನರಾವರ್ತಿಸುತ್ತಿರುವುದು ಕಾಣಿಸುತ್ತದೆ. ವಿಡಿಯೋದಲ್ಲಿರುವವರನ್ನು ಶಹಜಹಾನ್‌ಪುರ ಮಹಾನಗರ ಪಾಲಿಕೆ ಸದಸ್ಯರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಲಾಗುತ್ತಿದೆ.

ವಿಡಿಯೋದಲ್ಲಿ ಕೇಳಿಬರುವ ಪ್ರಮಾಣದ ಪ್ರಕಾರ, ಮಹಾನಗರ ಪಾಲಿಕೆಗೆ ಬರುವ ಆದಾಯವನ್ನು ಅಥವಾ ಹಣವನ್ನು 60 ಮಂದಿ ನಡುವೆ ಸಮಾನವಾಗಿ ಹಂಚಿಕೊಳ್ಳುವುದಾಗಿ ಹೇಳಲಾಗಿದೆ. ಯಾವುದೇ ಸದಸ್ಯರಿಗೆ ತೊಂದರೆ ಎದುರಾದರೂ ಉಳಿದವರು ಒಗ್ಗಟ್ಟಿನಿಂದ ಆತನ ಪರ ನಿಲ್ಲುವುದಾಗಿ ಪ್ರಮಾಣ ಮಾಡಿರುವ ದೃಶ್ಯವೂ ವಿಡಿಯೋದಲ್ಲಿದೆ. ಈ ಕಾರಣದಿಂದಲೇ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿದೆ.

ಶಹಜಹಾನ್‌ಪುರ ಮಹಾನಗರ ಪಾಲಿಕೆ ಆಯುಕ್ತೆ ಸೌಮ್ಯಾ ಗುರುರಾಣಿ ಅವರ ಪ್ರಕಾರ, ವಿಡಿಯೋವನ್ನು 2025ರ ನವೆಂಬರ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದ್ದು, ಆ ಸಂದರ್ಭದಲ್ಲಿ ಬೇರೆ ಮಹಾನಗರ ಪಾಲಿಕೆ ಆಯುಕ್ತರು ಕರ್ತವ್ಯದಲ್ಲಿದ್ದರು. ಆದರೂ ವಿಡಿಯೋದಲ್ಲಿ ಕೇಳಿಬರುವ ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜನಪ್ರತಿನಿಧಿಗಳು ಜನರ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಬದಲು ಅದನ್ನು ಹಂಚಿಕೊಳ್ಳುವ ಬಗ್ಗೆ ಪ್ರಮಾಣ ಮಾಡುತ್ತಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ವೈರಲ್ ವಿಡಿಯೋ ಕುರಿತು ನಡೆಯುತ್ತಿರುವ ತನಿಖೆ ಮಹತ್ವ ಪಡೆದುಕೊಂಡಿದೆ. ತನಿಖೆಯ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

More articles

Latest article

Most read