ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಯಿಯೊಳಗೆ ಚಿನ್ನ ಅಡಗಸಿಟ್ಟಿದ್ದ ವ್ಯಕ್ತಿಯ ಬಂಧನ

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ಬಾಯಿಯೊಳಗೆ ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸುಮಾರು 82 ಗ್ರಾಂ ತೂಕದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಭಾರತೀಯ ಪ್ರಯಾಣಿಕನೊಬ್ಬನನ್ನು ಬುಧವಾರ ಸಿಐಎಸ್‌ಎಫ್   ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ 

ಗಾಜಿಯಾಬಾದ್‌ಗೆ ತೆರಳುವ ವಿಮಾನವನ್ನು ಹತ್ತಲು ಭದ್ರತಾ ತಪಾಸಣೆಗೆ ಒಳಗಾಗುತ್ತಿದ್ದಾಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ಈ ಘಟನೆ ನಡೆದಿದೆ. ಆತ ದುಬೈನಿಂದ ಮುಂಜಾನೆ ಆಗಮಿಸಿದ್ದ ಎಂದು ಅಧಿಕಾರಿ ಹೇಳಿದರು.

 ಪ್ರಯಾಣಿಕರ ಸಾಮಾನ್ಯ ಭದ್ರತಾ ತಪಾಸಣೆಯ ಸಮಯದಲ್ಲಿ ಆ ವ್ಯಕ್ತಿಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಮತ್ತು ತಪಾಸಣಾ ಪ್ರಕ್ರಿಯೆಯಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲದಿರುವುದನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದರು  ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಅಧಿಕಾರಿ ತಿಳಿಸಿದರು.

ಪ್ರಯಾಣಿಕನ ಬಾಯಿಯೊಳಗೆ ಅಡಗಿಸಿಟ್ಟಿದ್ದ, ಸುಮಾರು 82 ಗ್ರಾಂ ತೂಕದ ಚಿನ್ನವಿದ್ದ ಎರಡು ಕ್ಯಾಪ್ಸುಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದರು. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಆ ವ್ಯಕ್ತಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಚಿನ್ನವನ್ನು ಅದರ ಶುದ್ಧತೆಯನ್ನು ಪರಿಶೀಲಿಸಲು ಕಳುಹಿಸಲಾಗಿದೆ.  

More articles

Latest article

Most read