ಅ.8 ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’

ಬೆಂಗಳೂರು, ಅ.6: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನ್ಯಾಯಕ್ಕೆ ಆಗ್ರಹಿಸಿ ಅ.8 ರಂದು ‘ಜನತಾ ನ್ಯಾಯಾಲಯ’ ಎಂಬ ವಿನೋತನ ಪ್ರತಿಭಟನೆಯನ್ನು ನಗರದ ಫ್ರೀಡಂಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟದ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಮೂಲಕ ಲಕ್ಷಾಂತರ ಶೋಷಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಈ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಈ ವಿನೂತನ ಹೋರಾಟ ರೂಪಿಸಲಾಗಿದೆ ಎಂದರು.

ಈ ಜನತಾ ನ್ಯಾಯಾಲಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆ ಮತ್ತು ಅದರಿಂದಾಗಿರುವ ಅನ್ಯಾಯಗಳನ್ನು ತೆರೆದಿಡುವ ಮಹತ್ವದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಲಾಗುತ್ತದೆ. ದೇಶದ ಹಿರಿಯ ಮತ್ತು ಗಣ್ಯ ನ್ಯಾಯಮೂರ್ತಿಗಳು ಈ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ. ಅಲ್ಲದೆ, ನಟರಾದ ಪ್ರಕಾಶ್ ರಾಜ್, ಕಿಶೋರ್, ಸಿಜೆಪಿ ಪ್ರಮುಖರಾದ ಅಭಿಜಿತ್ ದೀಪ್ಕೆ, ಅಶುತ್ತೋಷ್ ರಾಂಕಾ, ಸೌರವ್ ದಾಸ್, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿ-ಯುವಜನ ಸಂಘಟನೆಗಳ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎಸ್‌ಐಆರ್ ಹಾವಳಿಗೆ ಒಳಗಾಗಿ ಅನ್ಯಾಯಕ್ಕೊಳದ ರಾಜ್ಯದ ಹಲವಾರು ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಜನತಾ ನ್ಯಾಯಾಲಯದ ಮುಂದೆ ತರಲಿದ್ದಾರೆ. ಸಂತ್ರಸ್ತರು ಅಥವಾ ಸಾಮಾಜಿಕ ಕಾರ್ಯಕರ್ತರು ತಕ್ಷಣವೇ ಮೊಬೈಲ್ 96060 87560ಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸುವ ಮೂಲಕ ಎಸ್‌ಐಆರ್ ನಿಂದಾಗಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬಹುದು. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ವಿಶೇಷ ಪ್ರತಿಭಟನೆಯಲ್ಲಿ ರಾಜ್ಯದ ಪ್ರಜ್ಞಾವಂತ ನಾಗರಿಕರು ಪಾಲ್ಗೊಳ್ಳಬೇಕು ಎಂದು ಅಶೋಕ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಸೀತರಾಂ ಗುಂಡಪ್ಪ, ಫಾದರ್ ಅರಣ್ ಲೂಯಿಸ್, ನೂರ್ ಶ್ರೀಧರ್, ಅಮ್ಜದ್ ಪಾಷಾ, ಜೆ.ಎಂ ವೀರಸಂಗಯ್ಯ, ಡಾ. ಮನೋಹರ ಚಂದ್ರ ಪ್ರಸಾದ್, ಕುಮಾರ್ ಸಮತಳ, ಮುಹಮ್ಮದ್ ಯೂಸುಫ್ ಕನ್ನಿ, ಸುಹೇಲ್ ಅಹ್ಮದ್, ಅಡ್ವೊಕೇಟ್ ನೈನಾ, ನಾಗೇಶ್ ಅರಳಕುಪ್ಪೆ, ರಾಜೇಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

More articles

Latest article

Most read