ಬೆಂಗಳೂರು: ಬ್ರದರ್ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಲೇವಡಿ ಮಾಡಿದೆ.
ಲೈಂಗಿಕ ಹಗರಣ ನಡೆಸಿ ಪರಾರಿಯಾಗಿರುವ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ...
ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಅಧಿಕಾರಕ್ಕೆ ಬಂದರೆ, ದೇಶದ ಹೆಣ್ಣುಮಕ್ಕಳ ಮಾಂಗಲ್ಯವನ್ನೂ ಬಿಡದೇ ಕಿತ್ತುಕೊಳ್ಳುತ್ತಾರೆ ಎಂದು ಇತ್ತೀಚಿಗಷ್ಟೇ ಭಾಷಣವೊಂದರಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಹಂತ ಕೆಳಗೆ ಇಳಿದು,...
ಬಿಜೆಪಿಯು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಏನು ಬೇಕಾದರೂ ಸೃಷ್ಟಿಸಬಲ್ಲುದು, ಮಹಿಳೆಯರನ್ನೂ ಬಳಸಿಕೊಳ್ಳಬಲ್ಲುದು, ಧರ್ಮದ್ವೇಷವನ್ನು ಹರಡಬಲ್ಲುದು, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳ ಬಹುದು, ನ್ಯಾಯಾಲಯದ ಹಾದಿ ತಪ್ಪಿಸಬಲ್ಲುದು ಎನ್ನುವುದಕ್ಕೆ ಸಂದೇಶಖಾಲಿ ಪ್ರಕರಣವೇ ಸಾಕ್ಷಿಯಾಗಿದೆ...
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರನೆ ಹಂತದ ಮತದಾನದ ದಿನವಾದ ಇಂದು ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.41.59 ಮತದಾನ ರಷ್ಟು ಮತದಾನವಾಗಿದೆ.
ಶಿವಮೊಗ್ಗದಲ್ಲಿ ಅತಿಹೆಚ್ಚು ಪ್ರಮಾಣದ ಮತದಾನವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ....
ಹೊಸದಿಲ್ಲಿ: ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಭರದಿಂದ ನಡೆಯುತ್ತಿದ್ದು, 11 ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನವಾಗಿದೆ.
ಘಟಾನುಘಟಿ ನಾಯಕರುಗಳಾದ ಅಮಿತ್ ಶಾ, ಶಿವರಾಜ್ ಚೌಹಾಣ್, ಡಿಂಪಲ್ ಯಾದವ್, ದಿಗ್ವಿಜಯ...
ಖಾನಾಪುರ (ಬೆಳಗಾವಿ): ಖಾನಾಪುರದ ನಿಟ್ಟೂರು ಮತಗಟ್ಟೆ ಬಳಿ ಬಿಜೆಪಿ ಶಾಲು, ಬಾವುಟಗಳನ್ನು ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದುದನ್ನು ಗಮನಿಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಪ್ರಾಮಾಣಿಕವಾಗಿ ಚುನಾವಣೆ...
ಹೊಸದಿಲ್ಲಿ: 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 93 ಲೋಕಸಭಾ ಸ್ಥಾನಗಳಿಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯ ಒಳಗೆ 10.5% ಮತದಾನ ದಾಖಲಾಗಿದೆ.
ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಯಲ್ಲಿ ಇಂದು ಮೂರನೇ...
ಬೆಂಗಳೂರು: ಕರ್ನಾಟಕದ ಎಲ್ಲ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದು, ಪತ್ರದ ಪೂರ್ಣಪಾಠ ಈ ಕೆಳಕಂಡಂತಿದೆ.
ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ,
ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ...
ಮೋದಿಯಂತಹ ಚೂರು ಪಾರು ಓದಿದವರು ಈ ದೇಶದ ಪ್ರಧಾನಿ ಆಗಿರಬೇಕಾದರೆ ಬಹುಮತ ಹಾಗೂ ಅವಕಾಶ ಸಿಕ್ಕರೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ವಿದ್ಯಾವಂತರು ಬೇಕಾದಷ್ಟಿದ್ದಾರೆ. ಅನುಭವದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದರೆ, ವಿದ್ಯಾರ್ಹತೆ ಹಾಗೂ...
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂವರು ಕಾಂಗ್ರೆಸ್ ಶಾಸಕರೂ ಇರುವುದರಿಂದ, ಸಿದ್ದರಾಮಯ್ಯನವರ ಬೆಂಬಲವೂ ಇರುವುದರಿಂದ, 3.5 ಲಕ್ಷದಷ್ಟಿರುವ ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಗಳ ಸಂಪೂರ್ಣ ಸಹಕಾರವೂ ಸಿಕ್ಕುವುದರಿಂದ ಗೀತಾ ಶಿವರಾಜಕುಮಾರರವರು ಗೆಲ್ಲಬಹುದಾದ ಸಾಧ್ಯತೆಗಳನ್ನು ನಿರ್ಲಕ್ಷಿಸುವಂತಿಲ್ಲ...