ಕಾಕ್ರೋಚ್ ಜನತಾ ಪಾರ್ಟಿಯ CJP ಸಂಸ್ಥಾಪಕ ಅಭಿಜಿತ್ ದಿಪ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಯನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದೇವೆ ಎಂದು ಶಾಲೆಯ ಕಿಟಕಿಯ ಬಳಿ “ದೀಪ ಹಚ್ಚಿ” ಘೋಷಿಸಿದ್ದಾರೆ.
“ಪ್ರಧಾನಿಯಾಗಿ ಇದು ನಿಮ್ಮ ಹನ್ನೆರಡು ವರ್ಷಗಳ ಸಾಧನೆ ಆದ್ದರಿಂದ ನಿಮಗೆ ಈ ಶಾಲೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ” ಎಂದಿದ್ದಾರೆ. ಈ ಮೂಲಕ “ಮೋದಿಯವರ ಜನ್ಮದಿನದ ಅಂಗವಾಗಿ ದೀಪ ಹಚ್ಚಿ ಆಶೀರ್ವಾದ ಮಾಡಿ ಎಂದು ಕರೆ ನೀಡಿದ್ದ ಬಿಜೆಪಿಯ ನಾಯಕರು, ಹಾಗೂ ಮೋದಿ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.
ಅಭಿಜಿತ್ ದಿಪ್ಕೆ ಶಾಲೆಯ ಬಳಿ ಬರುತ್ತಿದ್ದಂತೆ ನೂರಾರು ಜನ ಸೇರಿ ಮೋದಿ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
#AdivasiSchoolThikkaro ಎನ್ನುವ ಹ್ಯಾಷ್ ಟ್ಯಾಗ್ ಅಡಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳಲ್ಲಿನ ಪರಿಸ್ಥಿತಿಗಳನ್ನು ಸಮಾಜದ ಗಮನಕ್ಕೆ ತರುವ ಪ್ರಯತ್ನ ಅಭಿಜಿತ್ ದಿಪ್ಕೆ ಮಾಡುತ್ತಿದ್ದಾರೆ

