ಬೆಂಗಳೂರು : ಜೈಲಿನಲ್ಲಿದ್ದರೂ ಹಳೇ ಚಾಳಿಯನ್ನು ಬಿಡದೆ ಮತ್ತೆ ಮುಂದುವರೆಸಿರುವ ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್ನಲ್ಲಿ ವಿಡಿಯೋಗಳನ್ನು ಇಟ್ಟುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ಬಳಸಿದ್ದ ಮೊಬೈಲ್ನಲ್ಲಿ 173 ಫೈಲ್ಗಳು ಪತ್ತೆಯಾಗಿದ್ದು, ಪೆನ್ಡ್ರೈವ್ನಲ್ಲಿ 100ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕನ್ನಡ, ಹಿಂದಿ, ಇಂಗ್ಲಿಷ್ ಸಿನಿಮಾಗಳು, ವೆಬ್ಸೀರಿಸ್ಗಳು ಸೇರಿದಂತೆ ವಿವಿಧ ವಿಡಿಯೋಗಳು ಮೊಬೈಲ್ನಲ್ಲಿ ಇದ್ದವು ಎಂದು ಎಫ್ಎಸ್ಎಲ್ ವರದಿಯಲ್ಲಿ ತಿಳಿಸಲಾಗಿದೆ. ಜೈಲು ವಾರ್ಡರ್ ಮೂಲಕ ಮೊಬೈಲ್ ಪ್ರಜ್ವಲ್ ರೇವಣ್ಣ ಅವರ ಕೈ ಸೇರಿತ್ತು ಎಂದು ಆರೋಪಿಸಲಾಗಿದ್ದು, ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್ ಎಂಬಾತ ಮೊಬೈಲ್ನ್ನು ಜೈಲು ವಾರ್ಡರ್ಗೆ ತಂದುಕೊಟ್ಟಿದ್ದ ಎನ್ನಲಾಗಿದೆ. ಮೊಬೈಲ್ ಪೂರೈಕೆ ಮಾಡಿದ ವ್ಯಕ್ತಿ ಹಾಗೂ ಜೈಲಿನೊಳಗೆ ತಲುಪಿಸಿದ ರೀತಿಯ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜೈಲು ಸೆಲ್ನಲ್ಲಿದ್ದ ಟಿವಿ ಮೂಲಕ ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು ಎನ್ನಲಾಗಿದ್ದು, ಮೊಬೈಲ್ ಹಾಗೂ ಪೆನ್ಡ್ರೈವ್ನಲ್ಲಿದ್ದ ವಿಡಿಯೋಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪೆನ್ಡ್ರೈವ್ನಲ್ಲಿರುವ ಅಶ್ಲೀಲ ವಿಡಿಯೋಗಳನ್ನು ಪರಿಶೀಲನೆಗಾಗಿ ಎಸ್ಐಟಿಗೆ ನೀಡಲು ಪೊಲೀಸರು ಮುಂದಾಗಿದ್ದಾರೆ.
ಪ್ರಜ್ವಲ್ ಬಳಸಿದ್ದ ಮೊಬೈಲ್ನಲ್ಲಿ 173 ಫೈಲ್, 100 ಕ್ಕೂ ಹೆಚ್ಚು ವಿಡಿಯೋ ಪತ್ತೆ