ಸಿನಿಮಾ | ಜಯ ಜಯ ಜಯ ಜಯ ಹೇ : ಪಿತೃಪ್ರಭುತ್ವಕ್ಕೆ ಜಯಾಳ ‘ಕರಾಟೆ’ ಕಿಕ್!

‘ಆಕೆಗೊಂದು ತರ, ಅವನಿಗೊಂದು ತರ, ಯಾರು ಮಾಡಿದರು ಕಾಣೆ’ -ಜನಾರ್ಧನ್ ಕೆಸರಗದ್ದೆ ಅವರ ಹಾಡಿನ ಈ ಸಾಲು ‘ಜಯ ಜಯ ಜಯ ಜಯ ಹೇ’ ಸಿನಿಮಾ ನೋಡುತ್ತಿದ್ದಂತೆ ಮತ್ತೆ ಮತ್ತೆ ನೆನಪಾಗುತ್ತದೆ. ಒಂದೇ ಮನೆಯಲ್ಲಿ ಹುಟ್ಟಿದ ಮಕ್ಕಳಿಗೂ ಬದುಕಿನ ನಿಯಮಗಳು ಒಂದೇ ಆಗಿರುವುದಿಲ್ಲ ಎನ್ನುವುದನ್ನು ಸಿನಿಮಾ ಆರಂಭದಲ್ಲೇ ತೋರಿಸುತ್ತದೆ. ಹೆಣ್ಣುಮಕ್ಕಳನ್ನು ಕಟ್ಟುಪಾಡುಗಳಿಂದ ಕಟ್ಟಿಹಾಕುವ ಕುಟುಂಬದಿಂದ ಹಿಡಿದು, ತನ್ನನ್ನು ಫೆಮಿನಿಸ್ಟ್ ಎಂದುಕೊಳ್ಳುವ ಪುರುಷನೊಳಗಿನ ಪುರುಷಪ್ರಧಾನ ಮನಸ್ಥಿತಿಯವರೆಗೆ ಸಿನಿಮಾ ಹಾಸ್ಯ, ವ್ಯಂಗ್ಯ ಮತ್ತು ಗಂಭೀರತೆಯನ್ನು ಬೆರೆಸಿ ನೋಡಿಸುತ್ತದೆ.

ಸಿನಿಮಾದ ಆರಂಭದಲ್ಲೇ ಕೆಲವು ಮಕ್ಕಳು ಮರ ಹತ್ತಿ ಆಟವಾಡುತ್ತಿರುತ್ತಾರೆ. ಅವರ ಜೊತೆ ಜಯಾಳೂ ಇರುತ್ತಾಳೆ. ತಂದೆ ಬಂದು ತನ್ನ ಮಗಳನ್ನು ಮಾತ್ರ ಕರೆದುಕೊಂಡು ಹೋಗಿ, ‘ನೀನು ಮನೆಯೊಳಗೆ ಆಟ ಆಡು’ ಎಂದು ಹೇಳುತ್ತಾನೆ. ಇಲ್ಲಿ ಯಾವ ದೊಡ್ಡ ಉಪದೇಶವೂ ಇಲ್ಲ. ಆದರೆ ಒಂದೇ ಮಾತು ಸಾಕಾಗುತ್ತದೆ. ಮರ ಹತ್ತುವ ಸ್ವಾತಂತ್ರ್ಯವೂ ಹೆಣ್ಣುಮಕ್ಕಳಿಗೆ ಪ್ರಶ್ನೆಯಾಗುತ್ತದೆ.

ಮನೆಯೊಳಗೆ ಅಣ್ಣ-ತಂಗಿ ಆಟವಾಡುತ್ತಿದ್ದಾಗ, ಓದುವುದನ್ನು ಬಿಟ್ಟು ಆಟವಾಡುತ್ತಿದ್ದಾನೆ ಎಂದು ತಂದೆ ಮಗನಿಗೆ ಹೊಡೆಯುತ್ತಾನೆ. ಆಗ ‘ತಂಗಿಯೂ ಆಟ ಆಡುತ್ತಿದ್ದಾಳಲ್ಲ, ಅವಳಿಗೆ ಯಾಕೆ ಹೊಡೆಯಲ್ಲ?’ ಎನ್ನುವ ಪ್ರಶ್ನೆಗೆ, ‘ಅವಳು ಓದಿ ಏನು ಮಾಡುವುದು?’ ಎನ್ನುವುದು ತಂದೆಯ ಉತ್ತರ. ‘ನೀನು, ಅವಳು ಒಂದೇನಾ?’ ಎನ್ನುವ ತಾಯಿಯ ಮಾತು ಇನ್ನೂ ಚುಚ್ಚುತ್ತದೆ.

ಇದು ಕೇವಲ ಒಂದು ಮನೆಯ ಮಾತಲ್ಲ. ಹೆಣ್ಣುಮಗು ಓದಿ ಏನು ಮಾಡಬೇಕು, ಕೊನೆಗೆ ಮದುವೆಯಾಗಿ ಹೋಗಬೇಕಲ್ಲ ಎನ್ನುವ ಯೋಚನೆ ಇನ್ನೂ ಹಲವು ಕುಟುಂಬಗಳಲ್ಲಿ ಇದೆ. ಗಂಡುಮಕ್ಕಳಿಗೆ ಹೊರಗಿನ ಜಗತ್ತು ತೆರೆದಿದ್ದರೆ, ಹೆಣ್ಣುಮಕ್ಕಳಿಗೆ ಅದೇ ಜಗತ್ತಿನ ಸುತ್ತ ಬೇಲಿ ಹಾಕಲಾಗುತ್ತದೆ. ಸಿನಿಮಾ ಈ ಬೇಲಿಯನ್ನು ಒಂದೇ ಸಲ ತೋರಿಸುವುದಿಲ್ಲ. ಜಯಾಳ ಬದುಕಿನ ವಿವಿಧ ಹಂತಗಳಲ್ಲಿ ಅದನ್ನು ಮತ್ತೆ ಮತ್ತೆ ಎದುರು ತರುತ್ತದೆ.

ಜಯಾ ಉನ್ನತ ಶಿಕ್ಷಣದಲ್ಲಿ ಮಾನವಶಾಸ್ತ್ರ ಓದಲು ಬಯಸುತ್ತಾಳೆ. ಆದರೆ ಕುಟುಂಬ ಅವಳ ಆಸೆಯನ್ನು ಒಪ್ಪುವುದಿಲ್ಲ. ಹತ್ತಿರದ ಕಾಲೇಜಿನಲ್ಲಿ ಬಿಎ ಓದಲು ಕಳುಹಿಸುತ್ತಾರೆ. ಅವಳಿಗೆ ಓದಲು ಅವಕಾಶ ಸಿಕ್ಕಿದೆ ಎನ್ನಬಹುದು. ಆದರೆ ಏನು ಓದಬೇಕು ಎನ್ನುವ ಆಯ್ಕೆ ಅವಳದ್ದಲ್ಲ. ಸಿನಿಮಾ ಇಲ್ಲಿಯೇ ಸ್ವಾತಂತ್ರ್ಯ ಎಂದರೆ ಅವಕಾಶ ಸಿಕ್ಕಿರುವುದು ಮಾತ್ರವಲ್ಲ, ಆಯ್ಕೆ ಮಾಡುವ ಹಕ್ಕು ಕೂಡ ಎನ್ನುವುದನ್ನು ಸೂಚಿಸುತ್ತದೆ.

ಕಾಲೇಜಿನಲ್ಲಿ ಮಹಿಳೆಯರ ಹಕ್ಕು ಮತ್ತು ಸಮಾನತೆಯ ಬಗ್ಗೆ ಮಾತನಾಡುವ ಪ್ರಾಧ್ಯಾಪಕನನ್ನು ಜಯಾ ಇಷ್ಟಪಡುತ್ತಾಳೆ. ಮಹಿಳೆಯರಿಗೆ ಸಮಾನ ಅವಕಾಶಗಳಿರಬೇಕು ಎನ್ನುವ ಜಯಾಳಿಗೂ ಅವನ ಮೇಲೆ ಮನಸ್ಸಾಗುತ್ತದೆ. ಆದರೆ ಸಂಬಂಧದಲ್ಲಿದ್ದಾಗ ಅವನ ಮತ್ತೊಂದು ಮುಖ ಕಾಣಿಸುತ್ತದೆ. ಜಯಾ ಯಾವ ಬಟ್ಟೆ ಹಾಕಬೇಕು, ಯಾರೊಂದಿಗೆ ಮಾತನಾಡಬೇಕು ಎನ್ನುವುದನ್ನೂ ಅವನು ನಿಯಂತ್ರಿಸಲು ನೋಡುತ್ತಾನೆ. ಕೊನೆಗೆ ಅವಳಿಗೆ ಹೊಡೆಯುತ್ತಾನೆ.

ಇಲ್ಲಿರುವ ವ್ಯಂಗ್ಯ ಬಹಳ ಸೂಕ್ಷ್ಮವಾಗಿದೆ. ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವವನೇ ತನ್ನ ಪ್ರೀತಿಯ ಮಹಿಳೆಗೆ ಸ್ವಾತಂತ್ರ್ಯ ಕೊಡಲು ಸಿದ್ಧನಿಲ್ಲ. ಸಮಾಜದ ಮುಂದೆ ಸಮಾನತೆಯ ಮಾತು ಆಡುವುದು ಸುಲಭ. ಆದರೆ ತನ್ನ ಜೊತೆಯಲ್ಲಿರುವ ಮಹಿಳೆ ತನ್ನ ಮಾತು ಕೇಳದೆ ತನ್ನದೇ ನಿರ್ಧಾರ ತೆಗೆದುಕೊಂಡಾಗ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಜಯಾಳಿಗೆ ಎದುರಾಗುವ ಈ ಅನುಭವ ಮುಂದೆ ರಾಜೇಶ್‌ನೊಂದಿಗಿನ ಬದುಕಿಗೂ ಒಂದು ಮುನ್ನುಡಿಯಂತಾಗುತ್ತದೆ.

ಈ ಘಟನೆ ಮನೆಯಲ್ಲಿ ಗೊತ್ತಾದ ನಂತರ ಜಯಾಳ ಓದನ್ನು ನಿಲ್ಲಿಸಿ ಮದುವೆ ಮಾಡಲು ಕುಟುಂಬ ನಿರ್ಧರಿಸುತ್ತದೆ. ಅವಳ ಇಷ್ಟವನ್ನು ಕೇಳದೆ ರಾಜೇಶ್ ಜೊತೆ ಮದುವೆ ಮಾಡಲಾಗುತ್ತದೆ. ಹುಡುಗಿ ಯಾರನ್ನಾದರೂ ಇಷ್ಟಪಟ್ಟರೆ, ‘ಇನ್ನು ಮದುವೆ ಮಾಡಿಬಿಡಬೇಕು’ ಎನ್ನುವ ಆತುರ ಹಲವು ಕುಟುಂಬಗಳಲ್ಲಿರುತ್ತದೆ. ಆದರೆ ಆಕೆಯ ಆಯ್ಕೆಯನ್ನು ತಪ್ಪು ಎಂದುಕೊಂಡ ಕುಟುಂಬವೇ ಮುಂದೆ ಆಕೆಯನ್ನು ತನ್ನ ಆಯ್ಕೆಯಿಲ್ಲದ ಮದುವೆಗೆ ತಳ್ಳುತ್ತದೆ. ಜಯಾಳ ಕಥೆಯಲ್ಲಿ ಈ ವಿರೋಧಾಭಾಸ ಎದ್ದು ಕಾಣುತ್ತದೆ.

ಮದುವೆಯ ನಂತರ ಜಯಾಗೆ ‘ಗಂಡನಿಗೆ ಹೊಂದಿಕೊಂಡು ಹೋಗಬೇಕು’ ಎನ್ನುವ ಸಲಹೆ ಸಿಗುತ್ತದೆ. ಆದರೆ ಹೊಂದಿಕೊಳ್ಳಬೇಕಾದವಳು ಯಾವಾಗಲೂ ಮಹಿಳೆಯೇ ಏಕೆ ಎನ್ನುವ ಪ್ರಶ್ನೆಯನ್ನು ಸಿನಿಮಾ ನೇರವಾಗಿ ಕೇಳುವುದಿಲ್ಲ. ರಾಜೇಶ್‌ನ ವರ್ತನೆಯ ಮೂಲಕ ಕೇಳಿಸುತ್ತದೆ. ಅವನ ಇಷ್ಟದಂತೆ ಊಟ, ಅವನ ಅಭ್ಯಾಸಗಳಂತೆ ಮನೆ, ಅವನ ಮಾತಿನಂತೆ ಬದುಕು. ಜಯಾ ಸಣ್ಣ ಬದಲಾವಣೆ ಮಾಡಲು ಪ್ರಯತ್ನಿಸಿದರೂ ಅದನ್ನು ಸಹಿಸದೆ ಅವಳಿಗೆ ಹೊಡೆಯುತ್ತಾನೆ.

ಇಲ್ಲಿ ಹೊಡೆತ ಕೇವಲ ಕೋಪವಲ್ಲ. ಜಯಾ ತನ್ನ ಇಷ್ಟವನ್ನು ಹೇಳಿದ್ದೇ ರಾಜೇಶ್‌ಗೆ ಸಮಸ್ಯೆ. ಅಂದರೆ ಸಮಸ್ಯೆ ಊಟದಲ್ಲಿಲ್ಲ. ತನ್ನ ಮಾತನ್ನು ಪ್ರಶ್ನಿಸುವ ಮಹಿಳೆಯನ್ನು ಒಪ್ಪಿಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ದಾಂಪತ್ಯದಲ್ಲಿ ‘ನನ್ನ ಮಾತೇ ನಡೆಯಬೇಕು’ ಎನ್ನುವ ಮನಸ್ಥಿತಿ ಹಿಂಸೆಯಾಗಿ ಹೊರಬರುತ್ತದೆ.

ಜಯಾ ಆರಂಭದಲ್ಲಿ ಮೌನವಾಗಿರುತ್ತಾಳೆ. ಆದರೆ ಆ ಮೌನವನ್ನು ಅವಳ ಒಪ್ಪಿಗೆ ಎಂದು ಸಿನಿಮಾ ಪರಿಗಣಿಸುವುದಿಲ್ಲ. ಒಳಗೆ ಏನೋ ಬದಲಾಗುತ್ತಿರುತ್ತದೆ. ತನ್ನನ್ನು ರಕ್ಷಿಸಿಕೊಳ್ಳಲು ಯೂಟ್ಯೂಬ್ ಮೂಲಕ ಕರಾಟೆ ಕಲಿಯಲು ಆರಂಭಿಸುತ್ತಾಳೆ.

ಒಂದು ದಿನ ರಾಜೇಶ್ ಮತ್ತೆ ಅವಳಿಗೆ ಹೊಡೆಯಲು ಬಂದಾಗ, ಜಯಾ ಆ ಹೊಡೆತವನ್ನು ತಡೆದು ತಿರುಗಿ ಹೊಡೆಯುತ್ತಾಳೆ. ಈ ದೃಶ್ಯದಲ್ಲಿ ಜಯಾ ಮೊದಲ ಬಾರಿಗೆ ಕೇವಲ ಹೊಡೆತಕ್ಕೆ ಉತ್ತರ ಕೊಡುವುದಿಲ್ಲ. ತನ್ನ ಮೇಲೆ ನಡೆಯುತ್ತಿರುವ ನಿಯಂತ್ರಣಕ್ಕೆ ಉತ್ತರ ಕೊಡುತ್ತಾಳೆ. ಇಷ್ಟು ದಿನ ಇತರರು ನಿರ್ಧರಿಸುತ್ತಿದ್ದ ಅವಳ ದೇಹ, ಈಗ ಅವಳ ಪ್ರತಿರೋಧದ ಜಾಗವಾಗುತ್ತದೆ.

ಆದರೆ ರಾಜೇಶ್ ಇದನ್ನು ಸಮಾನತೆಯಾಗಿ ನೋಡುವುದಿಲ್ಲ. ತನ್ನ ಅಧಿಕಾರಕ್ಕೆ ಬಂದ ಸವಾಲಾಗಿ ನೋಡುತ್ತಾನೆ. ಜಯಾ ಕರಾಟೆ ಕಲಿತಿರುವುದನ್ನು ತಿಳಿದು ಅವನೂ ಯೂಟ್ಯೂಬ್ ಮೂಲಕ ಕರಾಟೆ ಕಲಿಯಲು ಶುರುಮಾಡುತ್ತಾನೆ. ಇಬ್ಬರೂ ಒಂದೇ ಕಲೆ ಕಲಿತರೂ ಕಾರಣ ಬೇರೆ. ಜಯಾ ತನ್ನನ್ನು ರಕ್ಷಿಸಿಕೊಳ್ಳಲು ಕಲಿತರೆ, ರಾಜೇಶ್ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಕಲಿಯುತ್ತಾನೆ.

ಇಲ್ಲಿಯೇ ಸಿನಿಮಾದ ಹಾಸ್ಯವೂ ಅದರ ಗಂಭೀರತೆಯೂ ಒಂದಾಗುತ್ತವೆ. ಹೆಂಡತಿ ತನ್ನನ್ನು ಕಾಪಾಡಿಕೊಳ್ಳಲು ಕಲಿತಿದ್ದಾಳೆ ಎಂಬುದನ್ನು ಒಪ್ಪಿಕೊಳ್ಳುವ ಬದಲು, ಗಂಡ ‘ನಾನು ಮತ್ತೆ ಅವಳಿಗಿಂತ ಬಲಶಾಲಿಯಾಗಬೇಕು’ ಎಂದು ಕೊಳ್ಳುತ್ತಾನೆ. ಅಂದರೆ ದೈಹಿಕ ಬಲದ ಸ್ಪರ್ಧೆಯ ಹಿಂದೆ ಕೂಡ ಅಧಿಕಾರದ ಪ್ರಶ್ನೆಯೇ ಇದೆ.

ಮುಂದೆ ಜಯಾಳ ಧೈರ್ಯವನ್ನು ಕುಗ್ಗಿಸಲು ರಾಜೇಶ್ ಮತ್ತು ಅವನ ಸಹೋದರ ಮತ್ತೊಂದು ಉಪಾಯ ಮಾಡುತ್ತಾರೆ. ಜಯಾಳನ್ನು ಪ್ರೀತಿಸುವಂತೆ ನಟಿಸಿ, ಅವಳನ್ನು ಗರ್ಭಿಣಿ ಮಾಡುವ ಯೋಜನೆ ರೂಪಿಸುತ್ತಾರೆ. ಮಹಿಳೆಯ ದೇಹ ಮತ್ತು ತಾಯ್ತನವನ್ನೂ ನಿಯಂತ್ರಣದ ಸಾಧನವಾಗಿ ಬಳಸುವ ಮನಸ್ಥಿತಿ ಇಲ್ಲಿ ಇನ್ನೊಂದು ಹಂತಕ್ಕೆ ಹೋಗುತ್ತದೆ. ಮಹಿಳೆಯ ಬದುಕಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದಾಗ, ಅವಳ ದೇಹದ ಮೂಲಕವೇ ಹಿಡಿತ ಸಾಧಿಸುವ ಪ್ರಯತ್ನ ಇದು.

ದರ್ಶನಾ ರಾಜೇಂದ್ರನ್ ಜಯಾ ಪಾತ್ರದ ಬದಲಾವಣೆಯನ್ನು ಬಹಳ ಸಹಜವಾಗಿ ಹಿಡಿದಿಟ್ಟಿದ್ದಾರೆ. ಆರಂಭದಲ್ಲಿ ತನ್ನ ಬದುಕಿನ ನಿರ್ಧಾರಗಳನ್ನು ಇತರರಿಗೆ ಬಿಟ್ಟುಕೊಡುವ ಜಯಾ, ನಿಧಾನವಾಗಿ ಪ್ರಶ್ನಿಸಲು, ಪ್ರತಿರೋಧಿಸಲು ಮತ್ತು ಕೊನೆಗೆ ತನ್ನದೇ ನಿರ್ಧಾರ ತೆಗೆದುಕೊಳ್ಳಲು ಕಲಿಯುತ್ತಾಳೆ. ಬೇಸಿಲ್ ಜೋಸೆಫ್ ಅವರ ರಾಜೇಶ್ ಪಾತ್ರವೂ ತನ್ನ ಅಧಿಕಾರವನ್ನು ಕಳೆದುಕೊಳ್ಳುವಾಗ ಅಸಹನೆಗೊಳ್ಳುವ ಪುರುಷನ ಮನಸ್ಥಿತಿಯನ್ನು ಚೆನ್ನಾಗಿ ಕಟ್ಟಿಕೊಡುತ್ತದೆ.

‘ಜಯ ಜಯ ಜಯ ಜಯ ಹೇ’ ಕೇವಲ ಗಂಡ-ಹೆಂಡತಿಯ ಜಗಳದ ಕಥೆಯಲ್ಲ. ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಬೇರೆಬೇರೆ ನಿಯಮಗಳನ್ನು ಕಲಿಸುವ ಕುಟುಂಬದಿಂದ ಆರಂಭವಾಗಿ, ಶಿಕ್ಷಣ, ಪ್ರೀತಿ, ಮದುವೆ, ದೇಹ ಮತ್ತು ಬದುಕಿನ ಆಯ್ಕೆಯವರೆಗೂ ಮಹಿಳೆಯ ಸ್ವಾತಂತ್ರ್ಯ ಹೇಗೆ ನಿಧಾನವಾಗಿ ಕಸಿದುಕೊಳ್ಳಲ್ಪಡುತ್ತದೆ ಎನ್ನುವುದನ್ನು ಸಿನಿಮಾ ತೋರಿಸುತ್ತದೆ.

ಜಯಾ ಕೊನೆಯಲ್ಲಿ ಗೆಲ್ಲುವುದು ರಾಜೇಶ್‌ನ ಮೇಲೆ ಮಾತ್ರವಲ್ಲ. ತನ್ನ ಬದುಕಿನ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವಳಿಗಾಗಿ ಬರೆದಿಟ್ಟಿದ್ದ ನಿಯಮಗಳ ಮೇಲೂ.

ಭೀಮಣ್ಣ ಹತ್ತಿಕುಣಿ

ಪತ್ರಿಕೋದ್ಯಮ ವಿದ್ಯಾರ್ಥಿ

More articles

Latest article

Most read