ಕಠ್ಮಂಡು : ಇತ್ತೀಚೆಗಷ್ಟೇ ಭಾರೀ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ.
ಬುಧವಾರ ವಾಯುವ್ಯ ನೇಪಾಳದಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಭೂಕಂಪನ ಸಂಶೋಧನಾ ಕೇಂದ್ರದ ಪ್ರಕಾರ, 4.5 ತೀವ್ರತೆಯ ಮೊದಲ ಕಂಪನವು ಬುಧವಾರ ಮಧ್ಯರಾತ್ರಿ 1:51ಕ್ಕೆ ದಾಖಲಾಗಿದ್ದು, 4.2 ತೀವ್ರತೆಯ ಎರಡನೇ ಭೂಕಂಪವು ಬೆಳಿಗ್ಗೆ 4:28ಕ್ಕೆ (ಸ್ಥಳೀಯ ಸಮಯ) ಸಂಭವಿಸಿದ್ದು, ಇದರ ಕೇಂದ್ರಬಿಂದು ಕೂಡ ಮುಗು ಜಿಲ್ಲೆಯ ಕಲೈ ಪ್ರದೇಶದ ಸಮೀಪದಲ್ಲೇ ಇತ್ತು ಎಂದು ಭೂಕಂಪ ಸಂಶೋಧನಾ ಕೇಂದ್ರವು ತಿಳಿಸಿದೆ.
ಸದ್ಯಕ್ಕೆ ಯಾವುದೇ ಸಾವು-ನೋವು ಅಥವಾ ಹಾನಿಯ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.

