ಯಶವಂತಪುರ–ಮಂಗಳೂರು ರೈಲು 471 ಕಿ.ಮೀ ಹೆಚ್ಚುವರಿ ಸುತ್ತೇಕೆ ?

ನೇರ ಮಾರ್ಗ ಇರುವಾಗ ಇಷ್ಟು ದೀರ್ಘ ಪ್ರಯಾಣದ ಅಗತ್ಯವೇನು?  ಇದು ರೈಲ್ವೆ ಇಲಾಖೆ ಮಾರ್ಗ ಮರುಪರಿಶೀಲಿಸುವ ಸೂಕ್ತ ಸಮಯವಲ್ಲವೇ?

ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಹಾಗೂ ವೇಗದ ರೈಲು ಸೇವೆ ಒದಗಿಸುವುದು ಕೇವಲ ಪ್ರಯಾಣಿಕರ ಬೇಡಿಕೆಯಷ್ಟೇ ಅಲ್ಲ, ಅದು ಕರಾವಳಿ ಕರ್ನಾಟಕದ ಹಕ್ಕು ಮತ್ತು ಆರ್ಥಿಕ ಪ್ರಗತಿಗೆ ಅತ್ಯಗತ್ಯ. ರೈಲ್ವೆ ಇಲಾಖೆ ತಾಂತ್ರಿಕ ಅಧ್ಯಯನ ನಡೆಸಿ, ಈ ಮಾರ್ಗವನ್ನು ತಕ್ಷಣವೇ ಮರುಪರಿಶೀಲಿಸಬೇಕಿದೆ – ಒಲಿವರ್ ಡಿ’ಸೋಜಾ ಕಾರ್ಯಕಾರಿ ಕಾರ್ಯದರ್ಶಿ, ರೈಲು ಯಾತ್ರಿ ಸಂಘ, ಮುಂಬೈ

ಬೆಂಗಳೂರು ಮತ್ತು ಮಂಗಳೂರು ಕರ್ನಾಟಕದ ಎರಡು ಪ್ರಮುಖ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳು. ರಾಜ್ಯದ ರಾಜಧಾನಿ ಮತ್ತು ಕರಾವಳಿಯ ಪ್ರಮುಖ ಬಂದರು, ಶೈಕ್ಷಣಿಕ ಹಾಗೂ ಕೈಗಾರಿಕಾ ನಗರದ ನಡುವೆ ವೇಗವಾದ, ನೇರ ಮತ್ತು ಪರಿಣಾಮಕಾರಿ ರೈಲು ಸಂಪರ್ಕವು ಕರಾವಳಿ ಜನರ ಬಹುಕಾಲದ ಕನಸಾಗಿದೆ.

ಆದರೆ, ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ  ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 16565/16566) ಸಾಗುವ ಮಾರ್ಗವನ್ನು ಗಮನಿಸಿದರೆ ದೊಡ್ಡದೊಂದು ಪ್ರಶ್ನೆ ಮೂಡುತ್ತದೆ:  ಮಂಗಳೂರು ತಲಪಲು ಕೇವಲ 363 ಕಿ.ಮೀ. ನೇರ ಮಾರ್ಗ ಸಾಧ್ಯವಿರುವಾಗ, ಈ ರೈಲು 834 ಕಿ.ಮೀ. ಬಳಸಿ ಸಾಗುವುದೇಕೆ?  ಬರೋಬ್ಬರಿ 471 ಕಿ.ಮೀ. ಹೆಚ್ಚುವರಿ ಪ್ರಯಾಣ!

ಪ್ರಸ್ತುತ ರೈಲು ಸಾಗುವ ಸುದೀರ್ಘ ಮಾರ್ಗ

ಈ ರೈಲು ಯಶವಂತಪುರದಿಂದ ಹೊರಟು ನೇರವಾಗಿ ಮಂಗಳೂರು ಕಡೆಗೆ ಸಾಗದೆ, ತಮಿಳುನಾಡು ಮತ್ತು ಕೇರಳದ ಮೂಲಕ ದೀರ್ಘ ಸುತ್ತು ಹಾಕಿ ಮಂಗಳೂರು ತಲುಪುತ್ತದೆ.

ಮಾರ್ಗ – ಯಶವಂತಪುರ → ಕುಪ್ಪಂ → ಸೇಲಂ → ಈರೋಡ್ → ತಿರುಪ್ಪೂರು → ಕೊಯಮತ್ತೂರು → ಪಾಲಕ್ಕಾಡ್ → ಶೋರನೂರು → ತಿರೂರು → ಕೋಯಿಕ್ಕೋಡ್ → ವಡಕರ → ತಲಶೇರಿ → ಕಣ್ಣೂರು → ಪಯ್ಯನ್ನೂರು → ಕಾಞ್ಹಂಗಾಡ್ → ಕಾಸರಗೋಡು → ಮಂಗಳೂರು ಸೆಂಟ್ರಲ್.

ಒಟ್ಟು ದೂರ: 834 ಕಿ.ಮೀ.

ನಿಲುಗಡೆಗಳು: 18 ನಿಲ್ದಾಣಗಳು

ಕಾಲಾವಧಿ- 16 ರಿಂದ 17 ಗಂಟೆಗಳು

ರೈಲು ಸಂಖ್ಯೆ -16565 (ಯಶವಂತಪುರ→ಮಂಗಳೂರು):

  • ನಿರ್ಗಮನ: ಭಾನುವಾರ ರಾತ್ರಿ 11:55 | ಆಗಮನ: ಸೋಮವಾರ ಸಂಜೆ 4:00
  • ಒಟ್ಟು ಪ್ರಯಾಣ ಸಮಯ: 16 ಗಂಟೆ 05 ನಿಮಿಷ
  • ರೈಲು ಸಂಖ್ಯೆ 16566 (ಮಂಗಳೂರು→ಯಶವಂತಪುರ):
  • ನಿರ್ಗಮನ: ಸೋಮವಾರ ರಾತ್ರಿ 8:00 | ಆಗಮನ: ಮಂಗಳವಾರ ಮಧ್ಯಾಹ್ನ 12:50
  • ಒಟ್ಟು ಪ್ರಯಾಣ ಸಮಯ: 16 ಗಂಟೆ 50 ನಿಮಿಷ

ಬೆಂಗಳೂರು–ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇದು ಅತ್ಯಂತ ದೀರ್ಘ ಮತ್ತು ದಣಿವಿನ ಪ್ರಯಾಣವಾಗಿದೆ.

363 ಕಿ.ಮೀ.ಯ ನೇರ ಮಾರ್ಗದ ಲಭ್ಯತೆ

ಯಶವಂತಪುರದಿಂದ ಹಾಸನ ಮೂಲಕ ಲಭ್ಯವಿರುವ ಪರ್ಯಾಯ ನೇರ ಮಾರ್ಗವನ್ನು ಪರಿಗಣಿಸಿದರೆ-

  • ಮಾರ್ಗ – ಯಶವಂತಪುರ → ಕುಣಿಗಲ್ → ಹಾಸನ → ಸಕಲೇಶಪುರ → ಸುಬ್ರಹ್ಮಣ್ಯ ರೋಡ್ → ಮಂಗಳೂರು ಸೆಂಟ್ರಲ್
  • ಒಟ್ಟು ದೂರ: ಸುಮಾರು 363 ಕಿ.ಮೀ.

ಪ್ರಸ್ತುತ ಮಾರ್ಗಕ್ಕೆ ಹೋಲಿಸಿದರೆ ಈ ನೇರ ಮಾರ್ಗವು 471 ಕಿ.ಮೀ. ಕಡಿಮೆ (ಸುಮಾರು 56% ಕಡಿಮೆ). ಒಂದೇ ಗಮ್ಯಸ್ಥಾನಕ್ಕೆ 834 ಕಿ.ಮೀ. ಮತ್ತು 363 ಕಿ.ಮೀ. ಎಂಬ ಬೃಹತ್ ವ್ಯತ್ಯಾಸವು ಸಹಜವಾಗಿಯೇ ಸಾರ್ವಜನಿಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಾರ್ಗ ಮರುಪರಿಶೀಲನೆ ಏಕಾಗಬೇಕು?

  • ಸಮಯ ಮತ್ತು ಸಂಪನ್ಮೂಲ ಉಳಿತಾಯ: 471 ಕಿ.ಮೀ. ಹೆಚ್ಚುವರಿ ಸುತ್ತು ಹೊಡೆಯುವುದರಿಂದ ಪ್ರಯಾಣಿಕರ ಅತಿಮೌಲ್ಯಯುತ ಸಮಯ ನಷ್ಟವಾಗುವುದಲ್ಲದೆ, ರೈಲ್ವೆಯ ಇಂಧನ ಮತ್ತು ಸಂಪನ್ಮೂಲಗಳೂ ವ್ಯರ್ಥವಾಗುತ್ತವೆ.
  • ಕರಾವಳಿಯ ಅಗತ್ಯ: ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಸಾವಿರಾರು ಜನರು ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ವೈದ್ಯಕೀಯ ಅಗತ್ಯಗಳಿಗಾಗಿ ಬೆಂಗಳೂರನ್ನು ನೆಚ್ಚಿಕೊಂಡಿದ್ದಾರೆ. ಇವರಿಗೆ ವೇಗದ ಸಂಪರ್ಕ ಅತ್ಯಗತ್ಯ.
  • ಟರ್ಮಿನಲ್ ಸಾಮರ್ಥ್ಯದ ಬಳಕೆ: ಮಂಗಳೂರು ಸೆಂಟ್ರಲ್ ನಿಲ್ದಾಣದ ರೈಲು ಸ್ಲಾಟ್‌ಗಳು ಸೀಮಿತವಾಗಿರುವುದರಿಂದ, ಲಭ್ಯವಿರುವ ಪ್ರತಿಯೊಂದು ಸ್ಲಾಟ್ ಅನ್ನು ಗರಿಷ್ಠ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಳಸುವುದು ಮುಖ್ಯ.

ಇದು ಕೇರಳ ವಿರುದ್ಧ ಕರ್ನಾಟಕದ ಪ್ರಶ್ನೆಯಲ್ಲ

ಈ ರೈಲು ಕೇರಳದ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸುವುದರಿಂದ, ಆ ಭಾಗದ ಜನರಿಗೂ ರೈಲು ಸೇವೆ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಇದನ್ನು “ಕೇರಳ vs ಕರ್ನಾಟಕ” ಎಂಬ ದೃಷ್ಟಿಕೋನದಲ್ಲಿ ನೋಡಬೇಕಾಗಿಲ್ಲ.

ಸರಳ ಪರಿಹಾರ : ಕೇರಳದ ಸಂಪರ್ಕಕ್ಕೆ ಧಕ್ಕೆ ಮಾಡದೆ, ಕರ್ನಾಟಕದ ಕರಾವಳಿ ಭಾಗಕ್ಕೆ ಹಾಸನ ಮಾರ್ಗವಾಗಿ ಹೆಚ್ಚುವರಿ ಅಥವಾ ನೇರ ಸೇವೆಯನ್ನು ಕಲ್ಪಿಸುವ ಸಾಧ್ಯತೆಗಳನ್ನು ರೈಲ್ವೆ ಇಲಾಖೆ ಪರಿಶೀಲಿಸಬೇಕಿದೆ.

ನೂತನ ಆಡಳಿತಾತ್ಮಕ ಬದಲಾವಣೆ ಒಂದು ಸುವರ್ಣಾವಕಾಶ!

ಮಂಗಳೂರು ವಿಭಾಗೀಯ ವ್ಯಾಪ್ತಿಯು SWR ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವ ಈ ಸಂದರ್ಭದಲ್ಲಿ ( 2026ರ ಅಕ್ಟೋಬರ್ 1ರಿಂದ) ಬೆಂಗಳೂರು–ಮಂಗಳೂರು ಸಂಪರ್ಕ ಜಾಲವನ್ನು ಸಮಗ್ರವಾಗಿ ಮರುಪರಿಶೀಲಿಸಲು ಇದು ಸೂಕ್ತ ಸಮಯ. ಹಳೆಯ ವ್ಯವಸ್ಥೆಯನ್ನೇ ಮುಂದುವರಿಸುವ ಬದಲು, ಇಂದಿನ ಅಗತ್ಯಕ್ಕೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸಬೇಕಿದೆ.

ಕೊನೆಯ ಮಾತು

ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಹಾಗೂ ವೇಗದ ರೈಲು ಸೇವೆ ಒದಗಿಸುವುದು ಕೇವಲ ಪ್ರಯಾಣಿಕರ ಬೇಡಿಕೆಯಷ್ಟೇ ಅಲ್ಲ, ಅದು ಕರಾವಳಿ ಕರ್ನಾಟಕದ ಹಕ್ಕು ಮತ್ತು ಆರ್ಥಿಕ ಪ್ರಗತಿಗೆ ಅತ್ಯಗತ್ಯ. ರೈಲ್ವೆ ಇಲಾಖೆ ತಾಂತ್ರಿಕ ಅಧ್ಯಯನ ನಡೆಸಿ, ಈ ಮಾರ್ಗವನ್ನು ತಕ್ಷಣವೇ ಮರುಪರಿಶೀಲಿಸಬೇಕಿದೆ.

ಒಲಿವರ್ ಡಿ’ಸೋಜಾ

ಕಾರ್ಯಕಾರಿ ಕಾರ್ಯದರ್ಶಿ, ರೈಲು ಯಾತ್ರಿ ಸಂಘ, ಮುಂಬೈ

ಇದನ್ನೂ ಓದಿ- https://kannadaplanet.com/thats-a-big-story-autobiography-series-30/ ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ – 30 | ನಾನು ಹೈಸ್ಕೂಲ್‌ ಮಾಸ್ತರನಾದೆ

More articles

Latest article

Most read