ದೇವರು ದಿಂಡರ ಹುಗಿದ ಮೇಲೆ ಮತ್ತೆ ಹುಟ್ಟೋಣ
ಧರ್ಮ ಗಿರ್ಮಗಳು ಮುಗಿದ ಮೇಲೆ ಮತ್ತೆ ಹುಟ್ಟೋಣ
ಏಸೊಂದು ಲೆಕ್ಕ ಬರಿಯುವ ದೂತರು ಇಲ್ಲಿ?
ಸ್ವರ್ಗ ನರಕಗಳ ದಿಡ್ಡಿ ಬಾಗಿಲು ಮುಚ್ಚಿದ ಮೇಲೆ ಮತ್ತೆ ಹುಟ್ಟೋಣ
ಇತಿಹಾಸದ ಉದ್ದಕ್ಕೂ ಪ್ರೇಮಿಗಳ ಹತ್ಯೆ ಹೊಸದಲ್ಲ ನೋಡು
ಜಾತಿ -ಗೀತಿಗಳ ಅಳಿಸಿದ ಮೇಲೆ ಮತ್ತೆ ಹುಟ್ಟೋಣ
ದ್ವೇಷದ ಬೀಜ ಬಿತ್ತಿ ಬೆಳೆದು ಬಜಾರು ನಡೆಸುವ ದಂಡಿ ಜನರಿಲ್ಲಿ
ಪ್ರೀತಿಯ ಹಾದಿಗೆ ಮುಳ್ಳು ಹಾಸುವವರು ತೀರಿದ ಮೇಲೆ ಮತ್ತೆ ಹುಟ್ಟೋಣ
ದೇವಾ ನರರು ನರಕ ಮಾಡಲಾರರು ಎಲ್ಲವನ್ನು ಅಲ್ಲವೇ?
ತುಸು ಎದೆಯ ಬಂಜರಿಗೆ ನೀರು ಹರಿದ ಮೇಲೆ ಹುಟ್ಟೋಣ.
ದೇವರಾಜ್ ಹುಣಸಿಕಟ್ಟಿ


