ಡೆವಿಡ್ ಡಿಸೋಜ ಶೂಟೌಟ್ ಪ್ರಕರಣ: ಹಂತಕರ ಕಾಲಿಗೆ ಗುಂಡು ಮೂವರು ಆರೋಪಿಗಳ ಬಂಧನ

ಬೈಂದೂರು: ಬೆಳ್ಳಂಬೆಳಗ್ಗೆ ಬೈಂದೂರಿನ ಒತ್ತಿನೆಣೆ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಪೋಲೀಸರು ಹಾಗೂ ಹಂತಕರ ನಡುವೆ ನಡೆದ ಫೈರಿಂಗ್‌ನಲ್ಲಿ ಯುಪಿ ಮೂಲದ ಶೂಟರ್ ಗಾಯಗೊಂಡಿದ್ದಾನೆ.

ಕಾರ್ಯಾಚರಣೆ ವೇಳೆ ಗಾಯಗೊಂಡ ಪೊಲೀಸ್ ಅಧಿಕಾರಿ ತೇಜಸ್ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುದರಂಗಡಿ ಚರ್ಚ್ ಬಳಿ ಹಂತಕರು ಡೇವಿಡ್ ಡಿಸೋಜ ಅವರನ್ನು ಹತ್ಯೆಗೈದಿದ್ದರು.

More articles

Latest article

Most read