ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಶೇ.100ರಷ್ಟು ಸುಂಕ ವಿಧಿಸಿದ ಅಮೆರಿಕ

ನವದೆಹಲಿ : ರಷ್ಯಾ ದೇಶದಿಂದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸುವ ವಿಶ್ವದ ಪ್ರಮುಖ ಐದು ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ ನೀಡುವ ಮಸೂದೆಯನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಭಾರತ ಮತ್ತು ಚೀನಾಗೂ ಕೂಡ ಮಸೂದೆ ಸೇರಿವೆ.

ಈ ಮಸೂದೆಗೆ ಸೆನೆಟ್‌ನಲ್ಲಿ 86–11 ಮತಗಳ ಭರ್ಜರಿ ಬೆಂಬಲ ದೊರೆತಿದೆ. ರಷ್ಯಾ–ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಒತ್ತಾಯಿಸುತ್ತಿದ್ದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಗೌರವಾರ್ಥವಾಗಿ ಮಸೂದೆಗೆ ಅವರ ಹೆಸರನ್ನೇ ಇಡಲಾಗಿದೆ.

ಜುಲೈ 11ರಂದು ನಿಧನರಾದ ಗ್ರಹಾಂ ಅವರು ಉಕ್ರೇನ್‌ನ ಪ್ರಬಲ ಬೆಂಬಲಿಗರಾಗಿದ್ದರು. ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಜಾರಿಗೆ ತರಲು ಅವರು ನಿರಂತರವಾಗಿ ಒತ್ತಾಯಿಸಿದ್ದರು.

ಗ್ರಹಾಂ ಅವರ ಸ್ಥಾನವನ್ನು ಸೆನೆಟ್‌ನಲ್ಲಿ ವಹಿಸಿಕೊಂಡಿರುವ ಅವರ ಸಹೋದರಿ ಡಾರ್ಲಿನ್ ಗ್ರಹಾಂ, ಈ ಮಸೂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ದೊಡ್ಡ ಆರ್ಥಿಕ ಒತ್ತಡವನ್ನು ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಲ್, ಒಂದು ವರ್ಷಕ್ಕೂ ಹೆಚ್ಚು ಕಾಲ ಗ್ರಹಾಂ ಅವರೊಂದಿಗೆ ಮಸೂದೆ ಅಂಗೀಕಾರಕ್ಕಾಗಿ ಪ್ರಯತ್ನಿಸಿದ್ದರು. ಉಕ್ರೇನ್ ಜನರು ಏಕಾಂಗಿಯಾಗಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಇದರಿಂದ ಏನಾಗಬಹುದು?
ಈ ಮಸೂದೆ ಜಾರಿಯಾಗಿ ಅಧ್ಯಕ್ಷ ಟ್ರಂಪ್ ಅದನ್ನು ಬಳಸಿದರೆ, ರಷ್ಯಾದಿಂದ ತೈಲ ಖರೀದಿಸುವ ಭಾರತದಂತಹ ದೇಶಗಳ ಅಮೆರಿಕದ ಮಾರುಕಟ್ಟೆಗೆ ರಫ್ತುಗಳ ಮೇಲೆ ಭಾರೀ ಹೆಚ್ಚುವರಿ ಸುಂಕ ಬೀಳುವ ಸಾಧ್ಯತೆ ಇದೆ. ಇದರಿಂದ ಭಾರತ–ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೆ ಒತ್ತಡ ಹೆಚ್ಚಾಗಬಹುದು.

More articles

Latest article

Most read