ಗೃಹಮಂತ್ರಿ ಪ್ರಿಯಾಂಕ್‌ – ಕಂಟಕವಾಗ್ತಾರಾ ಕೋಮುವಾದಿಗಳಿಗೆ?

ಈಗ ಬಂದಿರುವ ಗೃಹ ಸಚಿವರು ದ್ವೇಷ ಭಾಷಣ ಮಾಡುವವರಿಗೆ ಕೋರ್ಟ್‌ ನಿಂದ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಲು ಸರಕಾರಿ ಕಾನೂನು ವಿಭಾಗವನ್ನು ಎಚ್ಚರಿಸಬೇಕಿದೆ. ತಡೆಯಾಜ್ಞೆ ಸಿಕ್ಕ ಪ್ರಕರಣಗಳಲ್ಲಿ ಅದನ್ನು ತೆರವು ಮಾಡಲು ಸುಪ್ರೀಂ ಕೋರ್ಟ್‌ ನಲ್ಲಿ ವಾದ ಮಂಡಿಸಬೇಕಿದೆ. ಪ್ರತಿಯೊಂದು ಮತೀಯ ದ್ವೇಷ ಭಾಷಣ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ ಶಿಕ್ಷೆ ಆಗುವ ಹಾಗೆ ನೋಡಿಕೊಳ್ಳಬೇಕಿದೆ. ಇದನ್ನು ಪರಿಣಾಮಕಾರಿಯಾಗಿ ಮಾಡಿದ್ದೇ ಆದಲ್ಲಿ ಕೋಮುವಾದಿಗಳ ದ್ವೇಷೋತ್ಪಾದನೆಗೆ ಕಡಿವಾಣ ಬೀಳುತ್ತದೆ.   ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮೊದಲಿನಿಂದಲೂ ಹಿಂದುತ್ವವಾದಿ ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸುತ್ತಲೇ ಬಂದಿರುವ ಪ್ರಿಯಾಂಕ ಖರ್ಗೆಯವರು ಈಗ ಜೂನ್ 2026 ರಿಂದ ಕರ್ನಾಟಕದ ಗೃಹಮಂತ್ರಿಯಾಗಿದ್ದಾರೆ. ಈ ರಾಜ್ಯದಲ್ಲಿ ಇನ್ನು ಕೋಮುವಾದಿ ವ್ಯಕ್ತಿಗಳಿಗೆ ಹಾಗೂ ಮತಾಂಧ ಶಕ್ತಿಗಳಿಗೆ ಆಟ ಆಡಲು ಅವಕಾಶ ಕೊಡೋದಿಲ್ಲ ಎಂದೂ ಘೋಷಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಕೂಡಲೇ “ಕೋಮು ಗಲಭೆಗಳು ಹಾಗೂ ಮಹಿಳಾ ದೌರ್ಜನ್ಯ” ಪ್ರಕರಣಗಳಲ್ಲಿ ‘ಝೀರೋ ಟಾಲರನ್ಸ್’ ನೀತಿ ಅಳವಡಿಸಿಕೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಾದ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಯಾವುದೇ ರೀತಿಯ ಅವಕಾಶ ನೀಡಬಾರದು ಎಂದು ಆದೇಶ ಮಾಡಿದ್ದಾರೆ.

ಕೋಮುವಾದವನ್ನೇ ಉಸಿರಾಡಿಸುವ ಸಂಘ ಪರಿವಾರದವರಿಗೆ ಇದು ಅಸಹನೀಯವಾಗಿದೆ. ಕೋಮು ಧ್ರುವೀಕರಣದ ರಾಜಕೀಯಕ್ಕಾಗಿ ದ್ವೇಷ ಭಾಷಣ ಮಾಡುವವರಿಗೆ ಸಂಕಟ ಶುರುವಾಗಿದೆ. ಅದರಲ್ಲೂ ಕರಾವಳಿ ಕರ್ನಾಟಕದ ಮತೀಯ ಶಕ್ತಿ ಸಂಘಟನೆಗಳಿಗೆ ಆತಂಕ ಆರಂಭವಾಗಿದೆ.

ಖರ್ಗೆಯವರ ಮಾತುಗಳು ಹೀಗಿವೆ-

* ಆರೆಸ್ಸೆಸ್ ಒಂದು ನೊಂದಣಿ ರಹಿತ ಅನಧಿಕೃತ ಸಂಸ್ಥೆ. 

* ಆರೆಸ್ಸೆಸ್ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲು ನೋಂದಣಿ ಆಗಲೇ ಬೇಕು.

* ದೇವಾಲಯಗಳು ಅಥವಾ ವ್ಯಾಪಾರಿಗಳಂತೆ ಆರ್ಥಿಕ ವ್ಯವಹಾರಗಳ ಲೆಕ್ಕಪತ್ರಗಳ ದಾಖಲೆಗಳನ್ನು ಕೊಡಬೇಕು.

* ದಾಖಲೆಗಳನ್ನು ತೋರಿಸದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು.

* ಆರೆಸ್ಸೆಸ್ಸಿಗೆ ಸಂಬಂಧಿಸಿದ ಎರಡೂವರೆ ಸಾವಿರಕ್ಕೂ ಹೆಚ್ಚು ಸಂಘಟನೆಗಳ ಮೂಲಕ ಪಡೆಯುತ್ತಿರುವ ವಿದೇಶಿ ಫಂಡಿಂಗ್ ಹಾಗೂ ಹಣಕಾಸು ಲೇವಾದೇವಿಗಳ ವಿವರ ಬೇಕು.

* ಆರೆಸ್ಸೆಸ್ ಒಂದು ದೆವ್ವ. ಬಿಜೆಪಿ ಅದರ ನೆರಳು. ಕೋಮುಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಈ ಹಿಂದೆ ಕೂಡಾ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು. ಈಗ ಅವರೇ ಗೃಹಮಂತ್ರಿಗಳಾಗಿದ್ದು ಕೋಮು ಗಲಭೆಗಳಿಗೆ ಶೂನ್ಯ ಸಹಿಷ್ಣುತತೆ ಹಾಗೂ ಪೊಲೀಸ್ ಕ್ರಮಗಳ ಬಗ್ಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ಅಧಿಕಾರ ಕೊಟ್ಟಿದ್ದಾರೆ. ಆರೆಸ್ಸೆಸ್ ಅನ್ನು ನೇರ ಗುರಿಯಾಗಿರಿಸಿಕೊಂಡು ನೋಂದಣಿ, ಫಂಡಿಂಗ್ ಮತ್ತು ಚಟುವಟಿಕೆಗಳ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿ ರಾಜಕೀಯ ಸಂಚಲನವನ್ನು ಮೂಡಿಸಿದ್ದಾರೆ.

ಗೃಹ ಸಚಿವರು- ಪ್ರಿಯಾಂಕ್‌ ಖರ್ಗೆ

ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರವು Karnataka Hate Speech and Hate Crimes (Prevention) Bill, 2025 ಅನ್ನು ಜಾರಿಗೊಳಿಸುವ ಪ್ರಯತ್ನ ಮಾಡಿದೆ (2025 ಅಂತ್ಯದಲ್ಲಿ ಅಸೆಂಬ್ಲಿಯಲ್ಲಿ ಪಾಸ್ ಆಗಿದೆ). ಇದು ದ್ವೇಷ ಭಾಷಣಕ್ಕೆ ಕಠಿಣ ಶಿಕ್ಷೆ (1-7 ವರ್ಷ ಜೈಲು, ದಂಡ) ವಿಧಿಸಬಹುದಾಗಿದೆ. ಆದರೆ ರಾಜ್ಯಪಾಲರ ಅಸಹಕಾರದಿಂದಾಗಿ ಇದು ಇನ್ನೂ ಕಾಯಿದೆ ಆಗಿಲ್ಲ. ಈ ಕುರಿತು ಕಾನೂನು ಜಾರಿಗೆ ತರಲು ಮಾನ್ಯ ಡಿಕೆ ಶಿವಕುಮಾರರವರು ಮನಸ್ಸು ಮಾಡಬೇಕಿದೆ. ಆರೆಸ್ಸೆಸ್ಸಿನ ಹಿಂದುತ್ವವಾದಿ ಸಿದ್ಧಾಂತದ ಕುರಿತು ಮೃದು ಧೋರಣೆ ಹೊಂದಿರುವ ಡಿಕೆಶಿ ಯವರಿಂದ ಇದು ಸಾಧ್ಯವಾ ಎನ್ನುವ ಸಂದೇಹವೂ ಇದೆ.

ಕರ್ನಾಟಕದಲ್ಲಿ ಆರೆಸ್ಸೆಸ್ ಹಾಗೂ ಅದರ ಸಂಘ ಪರಿವಾರವನ್ನು ಸಾರ್ವಜನಿಕವಾಗಿ ಕಠಿಣ ಮಾತುಗಳಲ್ಲಿ ಠೀಕಿಸುವವರು ಇಬ್ಬರೇ. ಒಬ್ಬರು ಮಾನ್ಯ ಸಿದ್ದರಾಮಯ್ಯನವರು ಹಾಗೂ ಇನ್ನೊಬ್ಬರು ಪ್ರಿಯಾಂಕ ಖರ್ಗೆಯವರು. ಸಿದ್ದರಾಮಯ್ಯನವರು ಈಗ ಸಿಎಂ ಆಗಿ ಉಳಿದಿಲ್ಲ. ಆದರೆ ಪ್ರಿಯಾಂಕ್ ಖರ್ಗೆಯವರು ಹೋಮ್ ಮಿನಿಸ್ಟರ್ ಆಗಿದ್ದಾರೆ. ಹೇಳಿಕೆ, ಭಾಷಣಗಳಾಚೆ, ಕಾನೂನಿನ ಮೂಲಕ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಅವರು ತೋರಬೇಕಾಗಿದೆ. ಕಾನೂನು ಉಲ್ಲಂಘಿಸುವ, ದ್ವೇಷವನ್ನು ಉತ್ಪಾದಿಸುವ, ಮತಾಂಧತೆಯನ್ನು ಬಿತ್ತುವ ಎಲ್ಲಾ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಪೊಲೀಸ್ ತಾಕತ್ತಿನ ಮೂಲಕ ನಿರ್ಬಂಧಿಸಬೇಕಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದಾದ್ಯಂತ ಐವತ್ತಕ್ಕೂ ಹೆಚ್ಚು ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರ ಮುಸ್ಲಿಂ ದ್ವೇಷ ಭಾಷಣ ಪ್ರಕರಣಗಳೂ ಸೇರಿವೆ. ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ “ಮುಸಲ್ಮಾನ ಹೆಂಗಸರಿಗೆ ದಿನಕ್ಕೊಬ್ಬ ಗಂಡ” ಎಂಬ ಅವಮಾನಕಾರಿ ಭಾಷಣ ಮಾಡಿದ್ದು ಕೇಸ್ ದಾಖಲಾಗಿತ್ತು.

ಕೇಸ್ ದಾಖಲಾಗುತ್ತಿದ್ದಂತೆ ಈ ಮತಾಂಧರು ಹೈಕೋರ್ಟಲ್ಲಿ ಸುಲಭವಾಗಿ ತಡೆಯಾಜ್ಞೆ ಪಡೆಯುತ್ತಿದ್ದರು. ನ್ಯಾಯಾಲಯ ಕೊಟ್ಟ  ಸ್ಟೇ ಆರ್ಡರನ್ನು ತೆರವುಗೊಳಿಸಲು ರಾಜ್ಯ ಸರಕಾರ ಯಾವುದೇ ಪ್ರಯತ್ನ ಮಾಡದೇ ಇರುವುದರಿಂದ ಆ ಕೇಸುಗಳು ಕ್ವಾಶ್ ಆಗಿ ಹೋಗುತ್ತಿದ್ದವು. ಆ ಮತಾಂಧರು ತಮ್ಮ ದ್ವೇಷ ಭಾಷಣ ಕಾಯಕವನ್ನು ಕಾನೂನಿನ ಭಯ ಇಲ್ಲದೇ ಮುಂದುವರೆಸುತ್ತಿದ್ದರು. ಪೊಲೀಸರು ಸುಮೋಟೋ ಕೇಸ್ ಹಾಕುತ್ತಾರಾದರೂ ರಾಜಕೀಯ ಒತ್ತಡಕ್ಕೊಳಗಾಗಿ ಪ್ರಕರಣವನ್ನು ದುರ್ಬಲಗೊಳಿಸುತ್ತಿದ್ದರು.

ಒಟ್ಟಿನ ಮೇಲೆ ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದೆ. ದ್ವೇಷೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಮ್ಮ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನೂತನ ಗೃಹ ಸಚಿವರು ಕಾರ್ಯಪ್ರವೃತ್ತರಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕ ಖರ್ಗೆಯವರ ಮೇಲೆ ಪ್ರಜ್ಞಾವಂತರ ನಿರೀಕ್ಷೆ ಅಪಾರವಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ನನ್ನ ಜಾತಿಯ ಕಹಿ ನೆನಪುಗಳು

More articles

Latest article

Most read