ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ – ಆದಿತ್ಯ ಚಟರ್ಜಿ

ಬೆಂಗಳೂರು : ವಿಶ್ವದಲ್ಲಿಯೇ ಬಹು ದೊಡ್ಡದಾದ ಭಾರತದ ಲಿಖಿತ ಸಂವಿಧಾನದ ಪೀಠಿಕೆಯು ದೇಶದ ಆತ್ಮವಿದ್ದಂತೆ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಆದಿತ್ಯ ಚಟರ್ಜಿ ಅವರು ಅಭಿಪ್ರಾಯಪಟ್ಟರು.

ಸಂವಿಧಾನ ಓದು ಅಭಿಯಾನ ಕರ್ನಾಟಕವು ಕ್ರೈಸ್ಟ್ ಅಕಾಡಮಿ ಆಫ್ ಲಾ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನ ಏಕೆ ಓದಬೇಕು ಎಂಬ ಪ್ರಶ್ನೆಗೆ ಅವರು ಸಂವಿಧಾನ ದೇಶದ ಸಮಸ್ತ ಪ್ರಜೆಗಳನ್ನು ಒಂದು ತೆಕ್ಕೆಗೆ ತಂದಿದೆ. ದೇಶದ ಎಲ್ಲಾ ಪ್ರಜೆಗಳೂ ಸಮಾನರರಾಗಿದ್ದಾರೆ ಎಂದು ಹೇಳಿದರು. ನಂಬೂದಿರಿ ಪಾಡ್ ಅವರ ಕೇಸನ್ನು ಉಲ್ಲೇಖಿಸಿ ನ್ಯಾಯಾಂಗದಲ್ಲಿ ಸಂವಿಧಾನ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದರು.

ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಪೌರತ್ವ ತಿದ್ದುಪಡಿ ಮಸೂದೆಯ ಸಂದರ್ಭದಲ್ಲಿ ದೇಶದ ಜನತೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂವಿಧಾನ ಉಳಿಸಿ ಹೋರಾಟ ನಡೆಸಿದರು ಎಂದು ಉಲ್ಲೇಖಿಸಿದರು. ನಮ್ಮ ದೇಶದ ಸಂವಿಧಾನಕ್ಕೆ ಹಲವು ಬಾರಿ ದಾಳಿ ನಡೆದಿದೆ. ಅದರ ರಕ್ಷಣೆ ಎಂದರೆ ದೇಶದ ರಕ್ಷಣೆ. ನಮ್ಮ ಮತ್ತು ನಮ್ಮ ದೇಶದ ರಕ್ಷಣೆಗಾಗಿ ಸಂವಿಧಾನ ಓದಬೇಕು. ನಮಗೆ ಸಲ್ಲಬೇಕಾದ ನ್ಯಾಯ ಪಡೆಯಲು ಓದಬೇಕೆಂದು ಹೇಳಿದರು.

ಕ್ರೈಸ್ಟ್ ಲಾ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಪಿ ವಿ ಡೇವಿಸ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂವಿಧಾನ ದೇಶದ ಹೃದಯ. ಹೃದಯದ ಕವಾಟದಿಂದ ರಕ್ತ ಪರಿಚಲನೆ ಮಾಡಿದಂತೆ ಸಂವಿಧಾನದ ಮೂಲಕ ದೇಶದ ಪರಿಚಲನೆ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಂವಿಧಾನ ದೇಶದ ಕಟ್ಟಕಡೆಯ ಪ್ರಜೆಗೂ ನ್ಯಾಯ ನೀಡುತ್ತದೆ. ಇದರ ಆಶಯದಲ್ಲಿ ಕ್ರೈಸ್ಟ್ ಕಾಲೇಜು ನ್ಯಾಯ ಶ್ರದ್ಧಾ ಕಾರ್ಯಕ್ರಮದ ಮೂಲಕ ಜನರ ಬಳಿಗೆ ಸಂವಿಧಾನ ಮತ್ತು ನ್ಯಾಯ ಸಲ್ಲಿಸುವ ಆಶಯ ಹೊಂದಿದೆ. ಇದರ ಆಶಯದ ಹಿನ್ನೆಲೆಯಲ್ಲಿ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ಸಿನಿ ಜಾನ್, ಸಂವಿಧಾನ ಓದು ಅಭಿಯಾನ ಕರ್ನಾಟಕದ ಸಂಚಾಲಕರಾದ ಬಿ ರಾಜಶೇಖರಮೂರ್ತಿ, ಹೈಕೋರ್ಟ್ ವಕೀಲರಾದ ಶ್ರೀಹರಿ, ಕ್ರೈಸ್ಟ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ ಮಹೇಶ್ ಹಾಗೂ ಇತರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಕಾನೂನು ಕಾಲೇಜಿನ ಇನ್ನೂರ ಐವತ್ತು ವಿದ್ಯಾರ್ಥಿಗಳು ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಬಂಧ ಬರೆದರು. ಈ ತಿಂಗಳ ಕೊನೆಯ ವಾರದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

More articles

Latest article

Most read