ತಮಿಳುನಾಡಲ್ಲಿ ಪರಿವರ್ತನೆಯ ವಿಜಯ ಪರ್ವ

ತಮಿಳುನಾಡಿನಲ್ಲಿ ಸಿನೆಮಾ ಮಾದರಿಯ ರಾಜಕೀಯ ಸನ್ನಿವೇಶ ವಾಸ್ತವ ರೂಪದಲ್ಲಿ ಪ್ರತ್ಯಕ್ಷವಾಗಿದೆ. ರೀಲ್ ನಲ್ಲಿ ಆಗಬೇಕಾದದ್ದು ರೀಯಲ್ ನಲ್ಲಿ ಸಾಧ್ಯವಾಗಿದೆ. ಈಗ ವಿಜಯ್ ತಮ್ಮ ರಾಜಕೀಯ ಬದುಕಿನ ಕಥೆಯನ್ನು ತಾವೇ ಬರೆದು ನಿರ್ದೇಶನವನ್ನೂ ಮಾಡಿ ಜನಮೆಚ್ಚುವಂತೆ ಆಡಳಿತ ಕೊಡಬೇಕಿದೆ. ವಿಜಯ್ ರವರ ಮೇಲೆ ಕೇವಲ ತಮಿಳಿಗರಿಗೆ ಮಾತ್ರವಲ್ಲ ದೇಶವಾಸಿಗಳಿಗೂ ಅಪಾರವಾದ ನಿರೀಕ್ಷೆ ಇದೆ. ರಾಜಕೀಯದ ಅಗ್ನಿ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿ ಇಡೀ ದೇಶಕ್ಕೆ ಮಾದರಿಯಾದ ಆಡಳಿತವನ್ನು ಜೊಸೆಫ್ ವಿಜಯ್ ಕೊಡಲಿ ಎಂಬುದು ಪ್ರಜಾಪ್ರಭುತ್ವವಾದಿಗಳ ಬಯಕೆಯಾಗಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಬದಲಾವಣೆ ಎಂಬುದು ಜಗದ ನಿಯಮ. ಕಾಲ ಕೂಡಿ ಬಂದಾಗ ಅಸಂಭವವೂ ಸಂಭವವಾಗುತ್ತದೆ ಹಾಗೂ ಅದಕ್ಕೆ ಸಾಮಾಜಿಕ ಪರಿಸ್ಥಿತಿ ಮತ್ತು ಜನರ ಮನಸ್ಥಿತಿ ಕಾರಣವಾಗುತ್ತದೆ ಎಂಬುದಕ್ಕೆ ಅತೀ ದೊಡ್ಡ ಉದಾಹರಣೆ ತಮಿಳುನಾಡಿನಲ್ಲಿ ನಡೆದ ವಿಜಯೋತ್ಸವ. ಹೌದು.. ಯಾವುದೇ ರಾಜಕೀಯ ಹಿನ್ನೆಲೆ ಇರದೇ, ಗಾಡ್ ಫಾದರ್ ಗಾಡ್ ಮದರ್ ಗಳಿಲ್ಲದೇ, ರಾಜಕೀಯ ಕ್ಷೇತ್ರದ ಪೂರ್ವಭಾವಿ ಅನುಭವವೂ ಇಲ್ಲದೇ, ಯಾವ ಪ್ರಬಲ ಜಾತಿ ಧರ್ಮಗಳ ಬೆಂಬಲವೂ, ಅದ್ಯಾವ ಅನುಕಂಪದ ಅಲೆಯೂ ಇಲ್ಲದೇ ತಮಿಳುನಾಡಿನಲ್ಲಿ ಹೊಸ ಪಕ್ಷವೊಂದನ್ನು ಕಟ್ಟಿ ಎರಡೇ ವರ್ಷದಲ್ಲಿ ರಾಜ್ಯಾಧಿಕಾರವನ್ನು ಸ್ಥಾಪಿಸಿದ ದಾಖಲೆ ಜೋಸೆಫ್ ವಿಜಯ್ ರವರದ್ದು.

ಈ ದ್ರಾವಿಡ ರಾಜ್ಯದಲ್ಲಿ ಸ್ವಾತಂತ್ರ್ಯಾ ನಂತರದಲ್ಲಿ ಇದ್ದಿದ್ದೇ ಎರಡು ಪ್ರಬಲ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು. ಡಿಎಂಕೆ ತಪ್ಪಿದರೆ ಎಡಿಎಂಕೆ ಪಕ್ಷಗಳು ಒಂದಾದ ಮೇಲೆ ಒಂದರಂತೆ ಬಹುಮತ ಪಡೆದು ತಮಿಳುನಾಡನ್ನು ಸರದಿಯಂತೆ ಆಳುತ್ತಾ ಬಂದಿವೆ. ಆದರೆ ಮೊಟ್ಟಮೊದಲ ಬಾರಿಗೆ ಈ ಎರಡೂ ದ್ರಾವಿಡ ಪಕ್ಷಗಳನ್ನು ಸೋಲಿಸಿ ತಮಿಳು ಅಸ್ಮಿತೆಯ ತಮಿಳು ವೆಟ್ರಿ ಕಳಗಂ (ಟಿವಿಕೆ) ಎನ್ನುವ ಪಕ್ಷ ಉದಯವಾಗಿದೆ. ಜೋಸೆಫ್ ವಿಜಯ್ ಎನ್ನುವ 52 ವರ್ಷದ ಯುವಕ ಹೊಸ ಪಕ್ಷ ಸ್ಥಾಪಿಸಿ ಏಕಾಂಗಿ ಶಕ್ತಿಯಾಗಿ ರಾಜಕೀಯ ರಣರಂಗದಲ್ಲಿ ಹೋರಾಟ ನಡೆಸಿ ಮೊದಲ ಪ್ರಯತ್ನದಲ್ಲಿಯೇ ವಿಸ್ಮಯದ ವಿಜಯ ಸಾಧಿಸಿದ್ದು ಭಾರತದ ರಾಜಕೀಯ ಇತಿಹಾಸದಲ್ಲೇ ಮೊದಲನೆಯದಾಗಿದೆ.

ಇಡೀ ಭಾರತದಲ್ಲಿ ತಮಿಳುನಾಡಿನ ರಾಜಕೀಯ ವಿಭಿನ್ನವಾಗಿರುವಂತಹದ್ದು. ಇಲ್ಲಿ ರಾಜಕೀಯ ಹಾಗೂ ಸಿನೆಮಾ ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡ ಕರುಳುಬಳ್ಳಿಯಂತಹ ಸಂಬಂಧ ಹೊಂದಿವೆ. ತಮಿಳುನಾಡನ್ನು ಆಳಿದ ಅಣ್ಣಾದೊರೈ, ಕರುಣಾನಿಧಿ, ಎಂಜಿಆರ್, ಜಯಲಲಿತಾ ರವರೆಲ್ಲಾ ಸಿನೆಮಾಕ್ಷೇತ್ರದ ಜನಪ್ರಿಯ ಪ್ರತಿಭೆಗಳೇ. 1950 ರ ಆನಂತರದ ನಾಲ್ಕು ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿಗಳನ್ನು ಹೊರತು ಪಡಿಸಿದರೆ ಬಳಿಕದ ಎಲ್ಲರೂ ಎರಡೇ ದ್ರಾವಿಡ ಪಕ್ಷದ ಮುಖ್ಯಮಂತ್ರಿಗಳು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈಗ ತನ್ನ ಸಾಮರ್ಥ್ಯ ಹಾಗೂ ವೈಯಕ್ತಿಕ ಸಿನೆಮಾ ವರ್ಚಸ್ಸಿನಿಂದ ಜೋಸೆಫ್ ವಿಜಯ್ ರವರು ಎರಡೂ ದ್ರಾವಿಡ ಪಕ್ಷಗಳು ಕಟ್ಟಿಕೊಂಡು ಬಂದ ಕೋಟೆಯನ್ನು ಛಿದ್ರಗೊಳಿಸಿ ತಮಿಳಿಗರ ಹೊಸ ಜನನಾಯಕರಾಗಿದ್ದಾರೆ.

ಸಿನೆಮಾರಂಗದಲ್ಲಿ ಪ್ರಸಿದ್ಧರಾದವರೆಲ್ಲ ರಾಜಕೀಯದಲ್ಲೂ ಯಶಸ್ವಿಯಾಗುತ್ತಾರೆಂಬುದು ಸುಳ್ಳು ಎಂಬುದಕ್ಕೆ ಸಾಕ್ಷಿ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಕಮಲ್ ಹಾಸನ್ ರವರು. ರಾಜಕೀಯ ಪಕ್ಷವೊಂದನ್ನು ಕಟ್ಟುವ ಪ್ರಯತ್ನ ಮಾಡಿದ ತಮಿಳಿಗರ ಕಣ್ಮಣಿ ನಟ ರಜನೀಕಾಂತ್ ಧೈರ್ಯ ಸಾಲದೆ ಹಿಂದೆ ಸರಿದರು. ಜನಪ್ರಿಯ ಕಲಾವಿದ ಕಮಲ್ ಹಾಸನ್ ರವರು 2018ರಲ್ಲಿ ಎಂಎನ್ಎಂ ಪಕ್ಷ ಕಟ್ಟಲು ಹೋಗಿ ವಿಫಲರಾಗಿ ಡಿಎಂಕೆ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗುವುದಕ್ಕೆ ತೃಪ್ತರಾದರು. ಡಿಎಂಡಿಕೆ ಪಕ್ಷ ಸ್ಥಾಪಿಸಿದ ನಟ ವಿಜಯಕಾಂತ್ ಯಶಸ್ವಿಯಾಗಲಿಲ್ಲ. AISMK ಪಕ್ಷ ಸ್ಥಾಪಿಸಿದ್ದ ನಟ ಶರತ್ ಕುಮಾರ್ ಬಿಜೆಪಿ ಸೇರಿದರು. ಹೀಗೆ ಸಿನೆಮಾಕ್ಷೇತ್ರದ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತನೆ ಮಾಡಲಾಗದೆ ಇವರೆಲ್ಲಾ ವಿಫಲರಾದರು.

ಜನಪ್ರಿಯ ನಟ ವಿಜಯ್ ರವರು ಹೊಸ ಪಕ್ಷ ಕಟ್ಟಿದಾಗ ಆಡಿಕೊಂಡವರೇ ಹೆಚ್ಚು. ಅವರ ರ್ಯಾಲಿಗಳಿಗೆ ಹೆಚ್ಚೆಚ್ಚು ಜನ ಹುಚ್ಚುಚ್ಚಾಗಿ ಸೇರಿದಾಗಲೂ ಅದು ಸಿನೆಮಾ ಕ್ರೇಜೇ ಹೊರತು ಮತಗಳಲ್ಲ ಎಂದುಕೊಂಡವರೇ ಜಾಸ್ತಿ. 2026 ರ ಚುನಾವಣೆಯಲ್ಲಿ ವಿಜಯ್ ರವರ ಪಕ್ಷ 108 ಸ್ಥಾನಗಳನ್ನು ಗೆಲ್ಲಬಹುದು ಎಂದು ಯಾರೆಂದರೆ ಯಾರೂ ನಂಬಿರಲಿಲ್ಲ. ಇಂಡಿಯಾ ಮೈ ಎಕ್ಸಿಸ್ ಏಜನ್ಸಿಯನ್ನು ಹೊರತು ಪಡಿಸಿ ಎಲ್ಲಾ ಎಕ್ಸಿಟ್ ಪೋಲ್‌ಗಳು ಟಿವಿಕೆ ಪಕ್ಷಕ್ಕೆ ಮೂರರಿಂದ ಇಪ್ಪತ್ತೈದು ಸ್ಥಾನಗಳು ಬರಬಹುದೆಂದು ಅಂದಾಜು ಮಾಡಿದ್ದವು. ಸ್ವತಃ ತಾವೇ ಗೆಲ್ಲುತ್ತೇನೆಂಬ ಭರವಸೆ ಇಲ್ಲದ್ದರಿಂದ ವಿಜಯ್ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗಳನ್ನು ಸುಳ್ಳು ಮಾಡಿ ರಾಜಕೀಯದ ಅಗ್ನಿ ಪರೀಕ್ಷೆಯಲ್ಲಿ ಬಹುಮತದ ಹತ್ತಿರವರೆಗೂ ಬಂದು ನಿಂತ ವಿಜಯ್ ರವರ ಸಾಹಸಕ್ಕಾಗಿ ಹಾಗೂ ಗೆದ್ದೇ ಗೆಲುವೆನೆಂಬ ಛಲಕ್ಕಾಗಿ ಅಭಿನಂದಿಸಲೇಬೇಕಿದೆ.

ವಿಜಯ್ ರವರ ಗೆಲುವು ಸುಲಭವಾಗೇನೂ ಇರಲಿಲ್ಲ. ಡಿಎಂಕೆ ಪಕ್ಷದ ಸ್ಟಾಲಿನ್ ರವರು ಯಾವ ಹಗರಣಗಳಲ್ಲಿ ಸಿಲುಕದೇ ಐದು ವರ್ಷ ಉತ್ತಮ ಆಡಳಿತವನ್ನೇ ಕೊಟ್ಟಿದ್ದರು. ಕೊಟ್ಟ ಭರವಸೆಗಳನ್ನೂ ಈಡೇರಿಸಿದ್ದರು. ಇನ್ನೊಂದು ದ್ರಾವಿಡ ಪಕ್ಷವಾದ ಎಡಿಎಂಕೆ ಹಲವಾರು ಆಶ್ವಾಸನೆಗಳನ್ನು ಕೊಟ್ಟಿತ್ತು ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಪಕ್ಷದ ಜೊತೆಯಾಗಿತ್ತು. ಈ ಎರಡೂ ಪಕ್ಷಗಳೂ ಹಣಬಲ ಮತ್ತು ಜನಬಲಗಳನ್ನು ಹೊಂದಿದ್ದವು. ಚುನಾವಣಾ ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದವು. ಆದರೆ ಜನರ ನಾಡಿಮಿಡಿತ ಅರಿಯುವಲ್ಲಿ ಸೋತುಹೋದವು.

ತಮಿಳುನಾಡಿನ ಜನತೆ ಈ ಎರಡೂ ಪಕ್ಷಗಳ ಆಡಳಿತದಿಂದ ಬೇಸತ್ತು ಹೋಗಿದ್ದರು. ಇಲ್ಲಿವರೆಗೂ ಅವರಿಗೆ ಪ್ರಬಲ ಪರ್ಯಾಯಗಳಿರಲಿಲ್ಲ. ಯಾವಾಗ ವಿಜಯ್ ಹೊಸ ಪಕ್ಷ ಕಟ್ಟಿ, ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದರೋ ಆಗ ಬಹುತೇಕ ತಮಿಳಿಗರಿಗೆ ಪರ್ಯಾಯವೊಂದು ಗೋಚರಿಸಿತು. ಅಷ್ಟೇ ಆಗಿದ್ದರೆ ವಿಜಯ್ ಗೆ ಇಷ್ಟೊಂದು ದೊಡ್ಡ ಗೆಲುವು ಸಿಗುತ್ತಿರಲಿಲ್ಲವೆನೊ?

ಯಾವಾಗ ವಿಜಯ್ ರವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತವಾಗಿ ಜನರು ಸತ್ತರೋ, ಆಗ ಅದನ್ನೇ ನೆಪವಾಗಿಸಿಕೊಂಡು ಸ್ಟಾಲಿನ್ ಸರಕಾರ ಹಾಗೂ ಬಿಜೆಪಿಯ ಕೇಂದ್ರ ಸರಕಾರ ವಿಜಯ್ ಗೆ ತನಿಖೆ ಹೆಸರಲ್ಲಿ ಕಿರುಕುಳ ಕೊಡಲು ಆರಂಭಿಸಿತು. ಹೇಗಾದರೂ ಮಾಡಿ ವಿಜಯ್ ರವರ ಟಿವಿಕೆ ಪಕ್ಷವನ್ನು ತಮ್ಮ NDK ಕೂಟದ ಮೈತ್ರಿ ಪಕ್ಷವಾಗಿ ಮಾಡಿಕೊಳ್ಳಲು ಬಿಜೆಪಿ ಬಯಸಿತ್ತು. ಯಾವಾಗ ವಿಜಯ್ “ಡಿಎಂಕೆ ನಮ್ಮ ರಾಜಕೀಯ ವೈರಿಯಾದರೆ, ಬಿಜೆಪಿ ನಮ್ಮ ಸೈದ್ಧಾಂತಿಕ ಶತ್ರು” ಎಂದು ಘೋಷಿಸಿದರೋ ಆಗ ಈ ಎರಡೂ ಪಕ್ಷಗಳೂ ಕೆರಳಿದವು. ಹೇಗಾದರೂ ಮಾಡಿ ವಿಜಯ್ ರವರ ಆತ್ಮಸ್ಥೈರ್ಯವನ್ನು ಕುಂದಿಸಬೇಕೆಂದು ತಂತ್ರಗಾರಿಕೆ ರೂಪಿಸಿದವು. ವಿಜಯ್ ಕೊಟ್ಟ ಕೊನೆಯ ಸಿನೆಮಾ “ಜನನಾಯಗನ್” ಬಿಡುಗಡೆಯಾಗದಂತೆ ಬಿಜೆಪಿ ನೋಡಿಕೊಂಡಿತು. ಚುನಾವಣಾ ಸಮಯದಲ್ಲು ಆ ಸಿನೆಮಾ ಬಿಡುಗಡೆಯಾದರೆ ವಿಜಯ್ ರವರ ಜನಪ್ರಿಯತೆ ಇನ್ನೂ ಹೆಚ್ಚಬಹುದು ಎನ್ನುವ ಭಯ ಬಿಜೆಪಿ ಯದ್ದಾಗಿತ್ತು.

ಆದರೆ ಎರಡೂ ಪಕ್ಷದವರ ಈ ದ್ವೇಷ ರಾಜಕೀಯ ತಂತ್ರಗಾರಿಕೆ ವಿಜಯ್ ರವರ ಪರವಾಗಿ ಕೆಲಸಮಾಡಿತು. ಜನರಲ್ಲಿ ಅನುಕಂಪ ಮೂಡಲು ಕಾರಣವಾಯ್ತು. ತಮ್ಮ ಜನಪ್ರಿಯ ನಟನಿಗೆ ಕಿರುಕುಳ ಕೊಟ್ಟವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ತಮಿಳು ಜನತೆ ಮತದಾನದ ಮೂಲಕ ಉತ್ತರ ಕೊಟ್ಟರು. ಎರಡೂ ಪಕ್ಷದವರು ಹೀನಾಯವಾಗಿ ಸೋತು ವಿಸ್ಮಯಕಾರಿಯಾಗಿ ವಿಜಯ್ ಪಕ್ಷ ಗೆದ್ದಾಗಿತ್ತು.

ಜೋಸೆಫ್ ವಿಜಯ್ ಗೆಲುವಿಗೆ ಹಲವು ಕಾರಣಗಳೂ ಇದ್ದವು.

*  ಸ್ಟಾಲಿನ್ ರವರ ಡಿಎಂಕೆ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿತ್ತು.

* ಎಡಿಎಂಕೆ ಪಕ್ಷದಲ್ಲಿ ನಾಯಕತ್ವದ ಕೊರತೆ ಇತ್ತು.

* ಎರಡೂ ದ್ರಾವಿಡ ಪಕ್ಷಗಳ ಹೊರತಾಗಿ ಪರ್ಯಾಯ ಪಕ್ಷವೊಂದನ್ನು ಜನ ಬಯಸಿದ್ದರು.

* ವಿಜಯ್ ರವರ ಸಿನೆಮಾ ಜನಪ್ರಿಯತೆಯೂ ಜನರಿಗೆ ಇಷ್ಟವಾಗಿತ್ತು.

* ರಾಜ್ಯಾದ್ಯಂತ ಇರುವ ವಿಜಯ್ ಅಭಿಮಾನಿ ಸಂಘಗಳನ್ನು ಹೊಸ ಪಕ್ಷದ ಕಾರ್ಯಕರ್ತರಾಗಿಸಿ ಸಮರ್ಥವಾಗಿ ಬಳಸಿಕೊಳ್ಳಲಾಯ್ತು.

* ಕೇವಲ ರ್ಯಾಲಿ ಸಮಾವೇಶಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಮಾಧ್ಯಮವಾಗಿ ಹೆಚ್ಚೆಚ್ಚು ಬಳಸಿ ಜನರಿಗೆ ಮನದಟ್ಟು ಮಾಡಲಾಯ್ತು.

* ಜೆನ್ ಜಿ ಅಂತಾ ವರ್ಗ ಇದೆಯಲ್ಲಾ, ಅದೇ ಯುವಜನತೆ, ಅವರ ವ್ಯಾಪಕ ಬೆಂಬಲವೂ ವಿಜಯ್ ರವರ ಪರವಾಗಿತ್ತು.

* ವಿಜಯ್ ರವರಿಗೆ ಕಾನೂನಾತ್ಮಕ ಕಿರುಕುಳ ಕೊಟ್ಟ ಡಿಎಂಕೆ ಹಾಗೂ ಬಿಜೆಪಿ ವಿರುದ್ಧ ಜೆನ್ ಜಿ ಪಡೆ ತಿರುಗಿ ಬಿದ್ದಿತ್ತು.

* ಇದೆಲ್ಲದರ ಜೊತೆಗೆ ವಿಜಯ್ ಮಹಿಳೆಯರಿಗೆ ಆರ್ಥಿಕ ಸಹಾಯ, ಯುವಕರಿಗೆ ಉದ್ಯೋಗದ ಭರವಸೆ, ರೈತರ ಸಾಲ ಮನ್ನಾ, ಉಚಿತ ವಿದ್ಯುತ್, ಮದುಮಗಳಿಗೆ ಚಿನ್ನ, ರೇಶ್ಮೆ ಸೀರೆ ಯಂತಹ ಹಲವಾರು ಭರಪೂರ ಭರವಸೆಗಳನ್ನು ಕೊಟ್ಟಿದ್ದರಿಂದಲೂ ಮತಗಳನ್ನು ಸೆಳೆಯಲು ಸಾಧ್ಯವಾಯ್ತು.

* ಒಟ್ಟಾರೆಯಾಗಿ ತಮಿಳಿಗರು ಬದಲಾವಣೆ ಬಯಸಿದ್ದರು, ವಿಜಯ್ ರವರು ಹೊಸ ಪಕ್ಷ ಕಟ್ಟಿ ಜನರ ನಿರೀಕ್ಷೆಗಳಿಗೆ ಪರ್ಯಾಯವನ್ನು ಕೊಟ್ಟರು. ಸಾಮಾಜಿಕ ಪರಿಸ್ಥಿತಿ ಹಾಗೂ ಜನರ ಮನಸ್ಥಿತಿ ಎರಡೂ ಸೇರಿ ವಿಜಯ್ ರವರ ಹೊಸ ಪಕ್ಷ ಸಂಖ್ಯಾಬಲದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಜೊತೆ ಇನ್ನೂ ನಾಲ್ಕು ಪಕ್ಷಗಳ ಬೆಂಬಲದೊಂದಿಗೆ ವಿಜಯ್ ನೇತೃತ್ವದ ಮೈತ್ರಿ ಪಕ್ಷ ಅಧಿಕಾರಕ್ಕೇರಿತು. ಮೇ 10 ರಂದು ಲಕ್ಷಾಂತರ ಜನರ ಸಮ್ಮುಖದಲ್ಲಿ ಜೋಸೆಫ್ ವಿಜಯ್ ರವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನಲ್ಲಿ ಹೊಸ ಮನ್ವಂತರ ಆರಂಭವಾಯ್ತು.

ಆದರೆ, ಆಡಳಿತ ನಡೆಸುವುದು ಅಷ್ಟೊಂದು ಸುಲಭವೇನಲ್ಲ. ಯಾಕೆಂದರೆ..

* ಟಿವಿಕೆ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲದೆ ಅನ್ಯ ಐದು ಪಕ್ಷಗಳ 12 ಜನ ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸುವ ಅನಿವಾರ್ಯತೆ ಇದೆ.

* ಆ ಪಕ್ಷಗಳ ಆಶೋತ್ತರಗಳನ್ನು ಈಡೇರಿಸುತ್ತಾ ಸರಕಾರ ನಡೆಸಬೇಕಾಗಿದೆ. ಸ್ವಲ್ಪ ಏರು ಪೇರಾದರೂ, ಒಂದೆರಡು ಪಕ್ಷದ ನಾಲ್ಕಾರು ಶಾಸಕರು ಬೆಂಬಲ ಹಿಂದೆ ಪಡೆದರೂ ಸರಕಾರ ಬೀಳುವ ಸಾಧ್ಯತೆ ಇದೆ. ಮಿತ್ರ ಪಕ್ಷಗಳ ಮರ್ಜಿಯಲ್ಲಿ ಸರಕಾರ ನಡೆಸುವುದು ಕಸರತ್ತಿನ ಕೆಲಸವಾಗಿದೆ.

* ಎಡಿಎಂಕೆ ಪಕ್ಷವನ್ನು ಒಡೆದು ಅಲ್ಲಿರುವ ಬಹುಸಂಖ್ಯಾತ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಉಂಟಾಗಬಹುದಾಗಿದೆ. ಅದಕ್ಕೆ ಆಪರೇಶನ್ ಕಮಲದಂತೆ ಆಪರೇಶನ್ ವಿಜಯ್ ಮಾಡಬೇಕಾಗುತ್ತದೆ.

* ರಾಜ್ಯದ ಆರ್ಥಿಕ ಆಯವ್ಯಯಕ್ಕಿಂತಲೂ ಅತಿಯಾದ ಭರವಸೆಗಳನ್ನು ನೀಡಲಾಗಿದೆ. ಹೆಚ್ಚುವರಿ ತೆರಿಗೆ ವಿಧಿಸದೇ ಇರುವ ಆಯವ್ಯಯದಲ್ಲಿ ಕೊಟ್ಟಭರವಸೆಗಳನ್ನು ಈಡೇರಿಸುವುದೇ ವಿಜಯ್ ರವರಿಗೆ ಸವಾಲಾಗಿದೆ.

* ಪ್ರಮಾಣ ವಚನ ಸಂದರ್ಭದಲ್ಲಿ ವಿಜಯ್ ರವರೇ ಹೇಳಿರುವಂತೆ ರಾಜ್ಯದ ಮೇಲೆ ಹತ್ತು ಲಕ್ಷ ಕೋಟಿ ಸಾಲದ ಹೊರೆ ಇದೆಯಂತೆ. ಅದಕ್ಕೆ ಕಟ್ಟಬೇಕಾದ ಬಡ್ಡಿಯೂ ಅಧಿಕವಾಗಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಕೊಟ್ಟ ಭರವಸೆಗಳನ್ನೂ ಈಡೇರಿಸಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದು ಅಂದುಕೊಂಡಷ್ಟು ಸುಲಭವೇನಲ್ಲ.

* ಇದರ ಜೊತೆಗೆ ಕೇಂದ್ರ ಸರಕಾರದ ಅಸಹಕಾರ ವಿಜಯ್ ಗೆ ತೊಂದರೆ ಕೊಡಬಹುದಾಗಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕಾಲಕಾಲಕ್ಕೆ ಕೇಂದ್ರದಿಂದ ಬರುವಂತೆ ಮಾಡುವುದು, ಕೇಂದ್ರ ಸರಕಾರದಿಂದ ಯೋಜನೆಗಳನ್ನು ತರುವುದು ವಿಜಯ್ ರವರಿಗೆ ಚಾಲೆಂಜಿಂಗ್ ಆಗಿದೆ.

ಇವೆಲ್ಲವನ್ನೂ ನಿಭಾಯಿಸುವಷ್ಟು ರಾಜಕೀಯ ಅನುಭವ ವಿಜಯ್ ಗೆ ಸದ್ಯಕ್ಕೆ ಇಲ್ಲವಾಗಿದೆ. ಆದರೂ ಅನುಭವಿಗಳ ಪಡೆಯನ್ನು ಕಟ್ಟಿ, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಸಮರ್ಪಕವಾಗಿ ನಿರ್ವಹಿಸಿದರೆ ಯಾವುದೂ ಅಸಾಧ್ಯವಲ್ಲ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡರೆ ವಿಜಯ್ ರವರಿಗೆ ವಿಜಯ ದಕ್ಕಬಹುದಾಗಿದೆ.

ಏನೇ ಇರಲಿ.. ತಮಿಳುನಾಡಿನಲ್ಲಿ ಸಿನೆಮಾ ಮಾದರಿಯ ರಾಜಕೀಯ ಸನ್ನಿವೇಶ ವಾಸ್ತವ ರೂಪದಲ್ಲಿ ಪ್ರತ್ಯಕ್ಷವಾಗಿದೆ. ರೀಲ್ ನಲ್ಲಿ ಆಗಬೇಕಾದದ್ದು ರೀಯಲ್ ನಲ್ಲಿ ಸಾಧ್ಯವಾಗಿದೆ. ಆದರೆ ಸಿನೆಮಾನೇ ಬೇರೆ, ವಾಸ್ತವವೇ ಬೇರೆ. ಸಿನೆಮಾದಲ್ಲಿರುವಂತೆ ವಾಸ್ತವದಲ್ಲಿ ಕಥೆಗಾರರು, ನಿರ್ದೇಶಕರು ವಾಸ್ತವ ರಾಜಕೀಯದಲ್ಲಿ ಇರುವುದಿಲ್ಲ. ಈಗ ವಿಜಯ್ ತಮ್ಮ ರಾಜಕೀಯ ಬದುಕಿನ ಕಥೆಯನ್ನು ತಾವೇ ಬರೆದು ನಿರ್ದೇಶನವನ್ನೂ ಮಾಡಿ ಜನಮೆಚ್ಚುವಂತೆ ಆಡಳಿತ ಕೊಡಬೇಕಿದೆ. ತಮಿಳುನಾಡಿನ ಜನರ ಹಿತರಕ್ಷಣೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಿದೆ. ವಿಜಯ್ ರವರ ಮೇಲೆ ಕೇವಲ ತಮಿಳಿಗರಿಗೆ ಮಾತ್ರವಲ್ಲ ದೇಶವಾಸಿಗಳಿಗೂ ಅಪಾರವಾದ ನಿರೀಕ್ಷೆ ಇದೆ. ರಾಜಕೀಯದ ಅಗ್ನಿ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿ ಇಡೀ ದೇಶಕ್ಕೆ ಮಾದರಿಯಾದ ಆಡಳಿತವನ್ನು ಜೊಸೆಫ್ ವಿಜಯ್ ರವರು ಕೊಡಲಿ ಎಂಬುದು ಪ್ರಜಾಪ್ರಭುತ್ವವಾದಿಗಳ ಬಯಕೆಯಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read