ಭಾರತೀಯ ಕ್ರಿಕೆಟ್‌ನ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾಗೆ 39ನೇ ಹುಟ್ಟುಹಬ್ಬದ ಶುಭಾಷಯ ತಿಳಿಸಿದ  BCCI

ಬೆಂಗಳೂರು ಏ.30: ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್, ಯಶಸ್ವಿ ನಾಯಕ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಇಂದು ತಮ್ಮ 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

BCCI ಗೌರವ

ರೋಹಿತ್ ಶರ್ಮಾ ಅವರ ಅಮೋಘ ಸಾಧನೆಯನ್ನು ಸ್ಮರಿಸಿರುವ ಬಿಸಿಸಿಐ ತನ್ನ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದೆ. “508 ಅಂತರಾಷ್ಟ್ರೀಯ ಪಂದ್ಯಗಳು, 20,000ಕ್ಕೂ ಹೆಚ್ಚು ರನ್‌ಗಳು, 2007ರ ಟಿ20 ವಿಶ್ವಕಪ್ ವಿಜೇತ ಆಟಗಾರ ಹಾಗೂ 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕ ರೋಹಿತ್ ಶರ್ಮಾಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬಣ್ಣಿಸಿದೆ.

ದಾಖಲೆಗಳ ಸರದಾರನ ಪಯಣ

1987ರಲ್ಲಿ ಜನಿಸಿದ ರೋಹಿತ್, 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಒಬ್ಬ ಸಾಮಾನ್ಯ ಪ್ರತಿಭೆಯಿಂದ ವಿಶ್ವದ ಶ್ರೇಷ್ಠ ಆರಂಭಿಕ ಆಟಗಾರನಾಗಿ ಬೆಳೆದು ನಿಂತಿದ್ದಾರೆ.

 ಪ್ರಸ್ತುತ ಏಕದಿನ ಮಾದರಿಯಲ್ಲಿ ಸಕ್ರಿಯರಾಗಿರುವ ರೋಹಿತ್, 282 ಪಂದ್ಯಗಳಿಂದ 11,577 ರನ್ ಗಳಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (264 ರನ್) ಮತ್ತು ಮೂರು ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

 2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಭಾಗವಾಗಿದ್ದ ಇವರು, 2024ರಲ್ಲಿ ನಾಯಕನಾಗಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. 159 ಪಂದ್ಯಗಳಲ್ಲಿ 5 ಶತಕಗಳ ಸಹಿತ 4,231 ರನ್ ಗಳಿಸಿರುವ ಇವರು ವಿಶ್ವಕಪ್ ಗೆಲುವಿನ ಬಳಿಕ ಈ ಮಾದರಿಗೆ ವಿದಾಯ ಹೇಳಿದ್ದಾರೆ.

 ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೋಹಿತ್, 67 ಪಂದ್ಯಗಳಲ್ಲಿ 12 ಶತಕಗಳ ಸಹಿತ 4,301 ರನ್ ಕಲೆಹಾಕಿದ್ದಾರೆ.

ನಾಯಕತ್ವದ ಸುವರ್ಣ ಯುಗ

ರೋಹಿತ್ ಶರ್ಮಾ ಅವರ ನಾಯಕತ್ವ ಭಾರತೀಯ ಕ್ರಿಕೆಟ್‌ಗೆ ಹೊಸ ಕಳೆ ತಂದಿದೆ. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್ ತಲುಪುವ ಮೂಲಕ ಭರವಸೆ ಮೂಡಿಸಿದ್ದ ಭಾರತ ತಂಡ, ಇವರ ನೇತೃತ್ವದಲ್ಲಿ 2024ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆಯಿತು. ಅಲ್ಲದೆ, ಇತ್ತೀಚೆಗೆ 2025ರಲ್ಲಿ ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಜಯಿಸುವ ಮೂಲಕ ಭಾರತದ ಐಸಿಸಿ ಟ್ರೋಫಿಗಳ ಬರವನ್ನು ಸಂಪೂರ್ಣವಾಗಿ ನೀಗಿಸಿದ್ದಾರೆ.

ಐಪಿಎಲ್‌ನಲ್ಲಿ 6 ಬಾರಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ, ಇಂದು ಮೈದಾನದ ಒಳಗೆ ಮತ್ತು ಹೊರಗೆ ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ.

More articles

Latest article

Most read