ಕರ್ಮ ಸಿದ್ಧಾಂತದ ದುಷ್ಫಲಗಳು ಮತ್ತು ಸಮಾಜ

ಮನುಧರ್ಮ ಶಾಸ್ತ್ರಗಳಂತಹ ಸನಾತನ ಶಾಸ್ತ್ರಗಳು ಕರ್ಮ ಸಿದ್ಧಾಂತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿಪಾದಿಸಿ ಸಮಾಜವನ್ನು ತಮ್ಮ ಮುಷ್ಠಿಯೊಳಗಿಟ್ಟುಕೊಳ್ಳಲು ಹೊಂಚಿ ಯಶಸ್ವಿಯಾಗಿವೆ. ಅದು ಕಾಯಕದಲ್ಲೂ ಭೇದ ಕಂಡು  ಇಂತಹ ಕಾರ್ಯಗಳನ್ನು ಇಂತಹವರೇ ಮಾಡಬೇಕೆಂಬುದನ್ನು ನಿರ್ದೇಶಿಸುತ್ತದೆ. ಹಾಗಾಗಿ ಕೇವಲ ಹುಟ್ಟಿನ ಕಾರಣಕ್ಕೆ ಶೂದ್ರ  ಮತ್ತು ಸ್ತ್ರೀ ಸಮುದಾಯವನ್ನು ಪಾಪಯೋನಿಗಳು, ನಿತ್ಯ ನಾರಕಿಗಳೆಂದು ಬಿಂಬಿಸುವ ಶಾಸ್ತ್ರ  ಹಾಗು ಶಾಸ್ತ್ರಕಾರರ ಸೋಗಿಗೆ ವೈದಿಕ ಶಾಸ್ತ್ರ ಸಾರುವ ಕರ್ಮ ಸಿದ್ಧಾಂತ ಒಂದು ಒಳ್ಳೆಯ ಸಮರ್ಥನೆ ಒದಗಿಸಿರುವುದಂತೂ ಸತ್ಯ – ಶಂಕರ್‌ ಸೂರ್ನಳ್ಳಿ, ಲೇಖಕರು.

ಇತ್ತೀಚೆಗೆ ಜಾಲತಾಣಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಮತ್ತು  ಖಾಸಗಿ ವ್ಯಕ್ತಿಯೊಬ್ಬರ ಸಂಭಾಷಣೆಯೊಂದು ವೈರಲ್ ಆಗಿತ್ತು. ಮನೆ ಮನೆಗೆ ಬಂದು ಕಸವನ್ನು ಸಂಗ್ರಹಿಸಿ ಕೊಂಡೊಯ್ಯುವ ಸ್ವಚ್ಛತಾ ಸಿಬ್ಬಂದಿಯೊಂದಿಗೆ  ಮನೆಯ ಮಡಿವಂತ ಯಜಮಾನ ಒಣಕಸ ಹಸಿ ಕಸ ಅಂತ ಬೇರೆ ಬೇರೆ ಮಾಡಲು ನಮ್ಮನೇಲಿ ನಮಗೆ ಇದೇ  ಕೆಲ್ಸನಾ.. ಅಂತ ಕೇಳುತ್ತಾನೆ 

ಅಲ್ಲದೇ, ಮಾಡಿದ ಕರ್ಮಕ್ಕೆ ಅವರು ಸಫಾಯಿ ಕರ್ಮಚಾರಿಯಾಗಿ ಹುಟ್ಟಿ ಬಂದಿದ್ದಾರೆ, ಅದು ಅವರ ಕರ್ಮ  ಎಂದು ತೀರಾ ಉಡಾಫೆಯಿಂದ ಮಾತನಾಡುತ್ತಾನೆ. ಹುಟ್ಟಿನ ಆಧಾರದಿಂದ ತಾರತಮ್ಯ ಸಾಧಿಸಿ ನೋಡುವ ನಮ್ಮ ಸಮಾಜದಲ್ಲಿನ ಕೊಳಕುತನಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಸ್ವಚ್ಛ ಭಾರತ್ ಪರಿಕಲ್ಪನೆ ಉತ್ತಮವಷ್ಟೇ ಅಲ್ಲ ಇಂದಿನ ಅಗತ್ಯವೂ ಹೌದು.  ಆದರೆ ಹೆಚ್ಚಿನವರಿಗೆ ಸರಕಾರಕ್ಕೆ ನಾವು ದುಡ್ಡು ಕೊಡ್ತೇವೆ ಹಾಗಾಗಿ ಸ್ವಚ್ಛತೆ ಕೇವಲ ಸ್ವಚ್ಛತಾ ಸಿಬ್ಬಂದಿಯ ಜವಾಬ್ದಾರಿಯಷ್ಟೇ ಹೊರತು ನಮ್ಮದಲ್ಲ ಎಂಬ ಭಾವನೆಯಿದೆ.

ಸಣ್ಣ ಸಣ್ಣ ಪೇಟೆಗಳಲ್ಲೇ ದಿನಕ್ಕೆ ಟನ್ ನಷ್ಟು ಪ್ರಮಾಣದ ತ್ಯಾಜ್ಯ  ಉತ್ಪಾದನೆಯಾಗುತ್ತದೆ. ಇನ್ನು ಪ್ಲಾಸ್ಟಿಕ್ ಬಳಕೆಯ ಭರಾಟೆಯಿಂದ ಕೊಳೆಯದ ಕಸಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಲೇ ಇವೆ. ಪರಿಸರದ ಮೇಲೆ ದುಷ್ಪರಿಣಾಮ, ಮನುಷ್ಯನೂ ಸೇರಿ ಜೀವ ಜಂತುಗಳ ಮೇಲಿನ ವಿಪರೀತ ದುಷ್ಪರಿಣಾಮಕ್ಕೆಲ್ಲ ಇವೇ ಮೂಲ ಕಾರಣ. ಜನರಿಗೆ ಸ್ವಚ್ಛತೆಯ ಅರಿವಾದರೂ ಅದರ ವಿಲೇವಾರಿಯ ಕುರಿತ ಅಸಡ್ಡೆತನದಿಂದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಮನೆಯ ಕಸವನ್ನು ಎಲ್ಲೋ ದಾರಿಯ ಪಕ್ಕದಲ್ಲಿ, ಹರಿಯುವ ನದಿಯಲ್ಲಿ ಅಥವಾ ಇನ್ನೆಲ್ಲೋ ಚೆಲ್ಲಿ ಬಿಡುವ ಸಂಗತಿಯನ್ನು ಪ್ರತಿನಿತ್ಯ ನಾವು ನೋಡುತ್ತಿರುತ್ತೇವೆ. ಸ್ವಚ್ಛತಾ ಆಂದೋಲನಕ್ಕಿಂತ ಜನರ ಈ ಅಸಡ್ಡೆತನ  ಮತ್ತು ದೊಡ್ಡಸ್ತಿಕೆಗಳು ಮತ್ತೊಂದು ಬಗೆಯ ಸಾಮಾಜಿಕ ಸಮಸ್ಯೆಯ ರೂಪದಲ್ಲಿ ನಮ್ಮೆದುರು ಈಗ ನಿಂತಿದೆ. ಅದಕ್ಕೆ ನಿದರ್ಶನವೇ ಈ  ಮೇಲಿನ ಉಡಾಫೆತನದ ಘಟನೆ.

ಮನೆ ಬಳಿ ಬಂದ ಸ್ವಚ್ಛತಾ ಸಿಬ್ಬಂದಿಯನ್ನು ಮುಟ್ಟಿಸಿಕೊಳ್ಳದೆ ಅಸ್ಪೃಶ್ಯರಂತೆ  ನೋಡುವುದು, ನೀರು ಕೇಳಿದರೂ ಕೊಡದಿರುವುದು, ಅಗೌರವ ತೋರುವುದೇ ಮೊದಲಾದ ಘಟನೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಒಂದು ಹಾಳಾದ ಟೊಮ್ಯಾಟೋ ಮೂರು ದಿವಸ ಹಾಗೆ ಇಟ್ಟರೆ ಅದರಲ್ಲಿ ಹುಳುಗಳಾಗುತ್ತವೆ. ಇನ್ನು ಮಾಂಸ ಮೂಳೆಗಳ ಕತೆ ಬೇರೇನೆ. ಕಸ ಸಂಗ್ರಹಿಸುವವರಿಗೂ ಸಂಸಾರವಿದೆ. ಅವರಿಗೂ ಮಕ್ಕಳು ಮರಿಗಳಿದ್ದಾರೆ. ಅವರಿಗೆ ನಮ್ಮ  ಕಸವನ್ನು ಕೊಡುವಾಗ ಗೌರವ ಪೂರ್ಣ  ಧನ್ಯತಾ ಭಾವವಿರಬೇಕೇ ಹೊರತು ಅಸಹ್ಯದ ಭಾವವಲ್ಲ. ಅಥವಾ  ಈ ವ್ಯಕ್ತಿ ಅಂದಂತೆ ಅದು ನಿಮ್ಮ ಕರ್ಮ ನಾವೇನು ಮಾಡಬೇಕು ಎಂಬ ಹೊಲಸು ಭಾವವಂತೂ ಖಂಡಿತಾ ಅಲ್ಲ.

ಮನುಷ್ಯನೊಬ್ಬ ಮಾಡುವ ಒಳ್ಳೆಯ ಕಾರ್ಯಗಳಿಂದ  ಅತನಿಗೆ ಒಳ್ಳೇ ಫಲವಿದೆ. ಅದೇ ರೀತಿ ಕೆಟ್ಟ ಕೆಲಸಗಳಿಗೂ ಕೂಡ ಕೆಟ್ಟ ಫಲಗಳು ಇರುತ್ತವೆ ಎನ್ನುವ ಸಿದ್ಧಾಂತ ತಪ್ಪೇನಲ್ಲ. ಆದರೆ ಈ ಕರ್ಮ ಫಲಗಳನ್ನು ಹುಟ್ಟು ಸಾವುಗಳ ಆಚೆಗೂ ವಿಸ್ತರಿಸಿ ನೋಡುವ ಹೀನ ಸಂಸ್ಕೃತಿ ಇಡೀ ಸಮಾಜವನ್ನೇ ಅವನತಿಯೆಡೆಗೆ ದೂಡುತ್ತಿರುವುದಂತೂ ಸತ್ಯ.

ವೈದಿಕ ಶಾಸ್ತ್ರಗಳು, ಶಾಸ್ತ್ರಕಾರರು ಮತ್ತವರ ಮಾತು ಮತ್ತು ವ್ಯಾಖ್ಯಾನಗಳಲ್ಲಿ ಸ್ವರ್ಗ- ನರಕ, ಪಾಪ- ಪುಣ್ಯ, ಮೋಕ್ಷಾದಿಗಳ ಮಾತು ಬಂದಾಗ ಈ ಕರ್ಮ ಸಿದ್ಧಾಂತದ ಮಾತು ಬರುತ್ತದೆ. ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕೆನ್ನುವ ಸದುದ್ದೇಶದ ಬೋಧನೆಗಳಿದ್ದರೆ ಇಂತಹ ವಿಚಾರಗಳು ತಪ್ಪೇನಲ್ಲ. ಆದರೆ ಹುಟ್ಟನ್ನು ಅಥವಾ  ಸಮಾಜದಲ್ಲಿ ನಿಕೃಷ್ಟಕ್ಕೊಳಪಟ್ಟಿರುವ ನಿರ್ದಿಷ್ಟ  ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅದಕ್ಕೆ ಈ ಸಿದ್ಧಾಂತಗಳನ್ನು ಅನ್ವಯಿಸಿ ಬಿಂಬಿಸುವುದು ನಿಜಕ್ಕೂ ಅಕ್ಷಮ್ಯ. ಏಕೆಂದರೆ ಯಾರೂ ಕೂಡ ಇದೇ ತಂದೆ ತಾಯಿಗೆ ಇದೇ ಜಾತಿ ಸಮುದಾಯದಲ್ಲಿ ಹುಟ್ಟಬೇಕೆಂದು ಆಶಿಸಿ ಬರುವವರಲ್ಲ. ಎಲ್ಲವೂ ಕೇವಲ ಆಕಸ್ಮಿಕಗಳಷ್ಟೆ.

ಆದರೆ ಮನುಧರ್ಮ ಶಾಸ್ತ್ರಗಳಂತಹ ಸನಾತನ ಶಾಸ್ತ್ರಗಳು ಕರ್ಮ ಸಿದ್ಧಾಂತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿಪಾದಿಸಿ ಸಮಾಜವನ್ನು ತಮ್ಮ ಮುಷ್ಠಿಯೊಳಗಿಟ್ಟುಕೊಳ್ಳಲು ಹೊಂಚಿ ಯಶಸ್ವಿಯಾಗಿವೆ. ಅದು ಕಾಯಕದಲ್ಲೂ ಭೇದ ಕಂಡು  ಇಂತಹ ಕಾರ್ಯಗಳನ್ನು ಇಂತಹವರೇ ಮಾಡಬೇಕೆಂಬುದನ್ನು ನಿರ್ದೇಶಿಸುತ್ತದೆ. ಹಾಗಾಗಿ ಕೇವಲ ಹುಟ್ಟಿನ ಕಾರಣಕ್ಕೆ ಶೂದ್ರ  ಮತ್ತು ಸ್ತ್ರೀ ಸಮುದಾಯವನ್ನು ಪಾಪಯೋನಿಗಳು, ನಿತ್ಯ ನಾರಕಿಗಳೆಂದು ಬಿಂಬಿಸುವ ಶಾಸ್ತ್ರ  ಹಾಗು ಶಾಸ್ತ್ರಕಾರರ ಸೋಗಿಗೆ ವೈದಿಕ ಶಾಸ್ತ್ರ ಸಾರುವ ಕರ್ಮ ಸಿದ್ಧಾಂತ ಒಂದು ಒಳ್ಳೆಯ ಸಮರ್ಥನೆ ಒದಗಿಸಿರುವುದಂತೂ ಸತ್ಯ.

ವಾಸ್ತವದಲ್ಲಿ ಹುಟ್ಟಿನ ನೆಲೆಯಲ್ಲಿ ನೋಡುವಂತಹ ಇಂತಹ ತಾರತಮ್ಯಗಳೇ ನಮ್ಮ ದೇಶ ಪರಕೀಯರ ದಾಸ್ಯದಡಿಯಲ್ಲಿ ಶತಶತಮಾನಗಳ ಕಾಲ ನಲುಗಲು ಮುಖ್ಯ ಕಾರಣ. ಭಾರತದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್ ತನ್ನ ಬಾಬರ್ ನಾಮ ಗ್ರಂಥದಲ್ಲಿ ಉಲ್ಲೇಖಿಸಿದ ಈ ಮಾತು ನಮ್ಮ ಹಣೆಬರಹಕ್ಕೆ ಹಿಡಿದ ಕೈಗನ್ನಡಿ. ಇಲ್ಲಿನವರನ್ನು ಗೆಲ್ಲುವುದು ಸುಲಭ. ಒಬ್ಬೊಬ್ಬ ರಾಜನ ಸೈನ್ಯದಲ್ಲಿ ಹತ್ತನ್ನೆರಡು  ಒಲೆಗಳು ಉರಿಯುತ್ತವೆ ಎಂಬಂತಹ ಮಾತನ್ನು ಆತ ಅಲ್ಲಿ ಉಲ್ಲೇಖಿಸಿದ್ದ. ಇದಕ್ಕೆ ಕಾರಣರಾರು?

ಪ್ರಜಾಪ್ರಭುತ್ವ ಜಾತ್ಯತೀತತೆ, ಸಂವಿಧಾನ ಇಂಥವೆಲ್ಲ ಮುನ್ನೆಲೆಗೆ ಬಂದ ಬಳಿಕ ವಾಸ್ತವದಲ್ಲಿ ಯಾವುದೇ  ಕಾಯಕಗಳಲ್ಲಿ ಮೇಲು ಕೀಳೆಂಬುದಿರುವುದಿಲ್ಲ. ಅಣ್ಣ ಬಸವಣ್ಣನೇ ಕಾಯಕವೇ ಕೈಲಾಸವೆಂದು ಸಾರಿ ಪೂಜಾರಿ, ಚಮ್ಮಾರ ಎಲ್ಲರನ್ನೂ ಒಂದೇ ಸಮನಾಗಿ ಕಂಡು ಕ್ರಾಂತಿಕಾರಕ ಹೆಜ್ಜೆಯಿಟ್ಟದ್ದರು. ಇದೇ ಕಾರಣಕ್ಕೆ ಎಲ್ಲಾ ಮುಂದುವರೆದ ದೇಶಗಳಲ್ಲಿ ಯಾವ ಕೆಲಸವನ್ನೂ ಕೂಡ ಚಿಕ್ಕದು ದೊಡ್ಡದೆಂದು ಪರಿಗಣಿಸಲಾಗುವುದಿಲ್ಲ. ಎಲ್ಲಾ ಕೆಲಸವನ್ನೂ ಅವರು ಒಂದೇ ಭಾವದಿಂದ ನೋಡುತ್ತಾರೆ. ಇದು ಅವರ ಯಶಸ್ಸಿನ ಗುಟ್ಟೂ ಸಹ.

ಇಂದಿರಾಗಾಂಧಿ, ದೇವರಾಜ ಅರಸ್, ನಂಬೂದರಿಪ್ಪಾಡ್ ರಂತಹ ನಾಯಕರು ತಂದ ತುರ್ತು ಪರಿಸ್ಥಿತಿ, ಭೂ ಸುಧಾರಣೆ ಕಾಯಿದೆಗಳ ಕಾರಣ ಉಚ್ಛಜಾತಿ ಎಂಬ ಕಾರಣಕ್ಕೆ ಊರೂರೇ ಧರ್ಮಾರ್ಥ ಉಂಬಳಿ ಪಡೆದ ಸಮುದಾಯಗಳಿಗೆಲ್ಲ ಬಿಟ್ಟಿ  ಕೂಳು ತಪ್ಪಿ ಕೆಸರು ಗದ್ದೆಗೆ ಇಳಿಯಬೇಕಾಗಿ ಬಂದದ್ದು ಇತಿಹಾಸ.  ಈ ಮೂಲಕ ಧರ್ಮಶಾಸ್ರ ಪ್ರಣೀತ  ನಿಯಮಗಳೆಲ್ಲ ಏರು ಪೇರಾದವು

ಇಂತಹ ಬ್ರಾಹ್ಮಣ್ಯ ವಿರೋಧಿ ಚಿಂತನೆಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಮೇಲ್ವರ್ಗದ ಬ್ರಾಹ್ಮಣ್ಯವಾದಿಗಳು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನೆಹರೂರವರನ್ನು ಇನ್ನಿಲ್ಲದಂತೆ ಇವತ್ತಿಗೂ ದ್ವೇಷಿಸೋದು. ಅದನ್ನು ಬಿಟ್ಟರೆ ಇವರ ಪಾಕಿಸ್ತಾನ, ಮುಸಲ್ಮಾನರು, ದೇಶಭಕ್ತಿಗಳೆಲ್ಲ ಬರಿ ಮಣ್ಣಂಗಟ್ಟಿ. ಗಾಂಧೀಜಿಯನ್ನು ಪಾಕಿಸ್ತಾನಕ್ಕೆ ಕೋಟಿಗಟ್ಟಲೆ ಹಣ ಕೊಡಿಸಿದ್ದಕ್ಕಾಗಿ, ಸಾಬರನ್ನು ಓಲೈಸಿದ್ದಕ್ಕಾಗಿ, ದೇಶ ವಿಭಜಿಸಿದ್ದಕ್ಕಾಗಿ ಗೋಡ್ಸೆ ಕೊಂದ ಎಂದು ಗಾಂಧಿ ಹತ್ಯೆಯನ್ನು ದೇಶ ವಿಭಜನೆಗೆ ಲಿಂಕ್ ಮಾಡಿ ಗೋಡ್ಸೆ ಹುತಾತ್ಮತೆಯನ್ನು ಇದೀಗ ಕಥೆ ಹಬ್ಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಸ್ವಾತಂತ್ರ್ಯ ಘೋಷಣೆಯ ಮತ್ತು ದೇಶ ವಿಭಜನೆಗೂ ಮೊದಲೇ ಇದೇ ತಂಡ ಹಲವು ಭಾರಿ ಗಾಂಧಿ ಹತ್ಯೆಗೆ ವಿಫಲ ಯತ್ನ ನಡೆಸಿದ್ದು ಇತಿಹಾಸ. ಅಂದರೆ ಗಾಂಧಿ ವಿರೋಧಿಗಳಿಗೆ ಕಣ್ಣಿದ್ದದ್ದು ಸಾಬರಿಗೆ ಗಾಂಧಿಯ ಮುತುವರ್ಜಿಯಿಂದ  ಸಿಕ್ಕ ಕೋಟಿಯ ಮೇಲಲ್ಲ. ಬದಲು ಗಾಂಧೀಜಿ ಹರಿಜನೋದ್ಧಾರ, ಸಮಾನತೆ ಮಣ್ಣುಮಸಿ ಎಂದು ಸನಾತನ ಸಿದ್ಧಾಂತವನ್ನು ಕುಲಗೆಡಿಸ ಹೊರಟ ಕಾರಣಕ್ಕೆ ಎಂಬುದು ವಾಸ್ತವ.

ಶಂಕರ್ ಸೂರ್ನಳ್ಳಿ
ಬರಹಗಾರರು

More articles

Latest article

Most read