ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಆರ್.ಅಶೋಕ್‌ ಅವರೇ ಎಲ್ಲಿದ್ದೀರಿ ಎಂದು ಕೇಳಿದ ಟಿ.ಎ.ನಾರಾಯಣ ಗೌಡ

ಬೆಂಗಳೂರು, ನ.13 : ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಐಟಿ ಬಿಟಿ ಕಂಪನಿಗಳ ಮಾಲೀಕರ ಭಯವೇ? ಉದ್ಯಮಿಗಳ ಒತ್ತಡವೇ? ಅಥವಾ ಯಾರನ್ನಾದರೂ ಓಲೈಸಬೇಕಾದ ರಾಜಕೀಯ ಅನಿವಾರ್ಯತೆ ಇದೆಯೇ? ನಿಮ್ಮ ಮೌನಕ್ಕೆ ಕಾರಣವೇನು ಎಂಬುದನ್ನು ಕನ್ನಡಿಗರಿಗೆ ಸ್ಪಷ್ಟಪಡಿಸಿ ಎಂದು ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಅವರನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

ಕನ್ನಡಿಗರ ಉದ್ಯೋಗದ ಪ್ರಶ್ನೆ ಎದುರಾದಾಗ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಧ್ವನಿ ಎಲ್ಲಿಗೆ ಹೋಗುತ್ತದೆ? ರಾಜ್ಯದಲ್ಲಿ ಸರ್ಕಾರವಿದೆ, ವಿರೋಧ ಪಕ್ಷವಿದೆ, ಒಬ್ಬರ ಮೇಲೆ ಮತ್ತೊಬ್ಬರು ಕೆಸರು ಎರಚಾಡುವ ರಾಜಕೀಯ ನಾಯಕರು ಇದ್ದಾರೆ. ಆದರೆ ಕನ್ನಡಿಗರ ಬದುಕು, ಉದ್ಯೋಗ ಮತ್ತು ಭವಿಷ್ಯದ ಪ್ರಶ್ನೆ ಬಂದಾಗ ಮಾತ್ರ ಎಲ್ಲರೂ ಮೌನಕ್ಕೆ ಶರಣಾಗಿರುವುದು ಏಕೆ? ಎಂದಿದ್ಧಾರೆ.

ಕರ್ನಾಟಕದ ಐಟಿ ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಅರ್ಹತೆ ಹೊಂದಿರುವ ಸ್ಥಳೀಯ ಯುವಜನರಿಗೆ ಆದ್ಯತೆ ನೀಡಬೇಕು, ನಮ್ಮ ನೆಲದಲ್ಲಿ ಬೆಳೆದ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೂ ಉದ್ಯೋಗಾವಕಾಶ ಸಿಗಬೇಕು ಎಂಬ ನ್ಯಾಯಯುತ ಕೂಗು ಇಂದು ರಾಜ್ಯದಾದ್ಯಂತ ಕೇಳಿಬರುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ವಿಚಾರವನ್ನು ಮುಂದಿಟ್ಟುಕೊಂಡು ‘ಆಗ್ರಹ ಅಭಿಯಾನ’ ನಡೆಸುತ್ತಿದೆ. ನೂರಾರು ಕಂಪನಿಗಳ ಬಾಗಿಲು ತಟ್ಟಿ ಕನ್ನಡಿಗರ ಉದ್ಯೋಗದ ಪಾಲಿನ ಲೆಕ್ಕ ಕೇಳುತ್ತಿದೆ. ಆದರೆ ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತ್ರ ಈ ವಿಚಾರದಲ್ಲಿ ಇದುವರೆಗೆ ಗಟ್ಟಿಯಾಗಿ ಬಾಯಿ ಬಿಟ್ಟಿಲ್ಲ. ಏಕೆ ಅಶೋಕ್ ಅವರೇ? ಕನ್ನಡಿಗರ ಉದ್ಯೋಗದ ಪ್ರಶ್ನೆ ನಿಮಗೆ ಮುಖ್ಯವೆನಿಸುತ್ತಿಲ್ಲವೇ? ಎಲ್ಲಿದ್ದೀರಿ ನೀವು?

ವಿರೋಧ ಪಕ್ಷದ ನಾಯಕನ ಹುದ್ದೆ ಎನ್ನುವುದು ಕೇವಲ ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸಲು, ಪತ್ರಿಕಾಗೋಷ್ಠಿ ನಡೆಸಲು, ರಾಜಕೀಯ ಆರೋಪಗಳನ್ನು ಮಾಡಲು ಇರುವ ಹುದ್ದೆಯಲ್ಲ. ಸರ್ಕಾರ ಎಲ್ಲಿ ಎಡವುತ್ತದೆಯೋ ಅಲ್ಲಿ ಪ್ರಶ್ನಿಸುವುದು, ಜನರ ಹಕ್ಕುಗಳಿಗೆ ಧಕ್ಕೆಯಾದಾಗ ಧ್ವನಿ ಎತ್ತುವುದು, ಸರ್ಕಾರ ಜಾರಿಗೆ ತರಬೇಕಾದ ಜನಪರ ನೀತಿಗಳಿಗಾಗಿ ಒತ್ತಾಯಿಸುವುದು ವಿರೋಧ ಪಕ್ಷದ ನಾಯಕನ ಜವಾಬ್ದಾರಿ. ಆ ಜವಾಬ್ದಾರಿಯನ್ನು ನೀವು ಮರೆತಿದ್ದೀರಾ? ಅಥವಾ ನಾಡು ನುಡಿ ವಿಷಯ ಬಂದಾಗ ನೀವು ಬಾಯಿ ಹೊಲೆದುಕೊಂಡಿರುವ ತೀರ್ಮಾನ ಮಾಡಿದ್ದೀರಾ?

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಬಿಟಿ ಸಂಸ್ಥೆಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ದೊರೆತಿದೆ? ಎಷ್ಟು ಹೊರರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ? ಯಾವ ಹುದ್ದೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟಿದೆ? ಇಂಥ ಸರಳ ಪ್ರಶ್ನೆಗಳಿಗೆ ಉತ್ತರ ಪಡೆಯುವ ಧೈರ್ಯ ಸರ್ಕಾರಕ್ಕೆ ಇಲ್ಲ. ಕಾರ್ಮಿಕ ಇಲಾಖೆ ನಡೆಸಬೇಕಾದ ಸಮೀಕ್ಷೆಗೂ ಸರ್ಕಾರವೇ ತೊಡರುಗಾಲು ಹಾಕಿ ಕುಳಿತಿದೆ. ಇಂಥ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗಿ ನೀವು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತಲ್ಲವೇ? ಎಲ್ಲಿ ಅಡಗಿಹೋಯಿತು ನಿಮ್ಮ ಧ್ವನಿ? ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸಂಬಂಧ ಉದ್ಯೋಗ ಪ್ರಾತಿನಿಧ್ಯ ಕಾಯ್ದೆಯನ್ನು ಜಾರಿಗೆ ತರಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಸ್ವತಃ ರಾಜ್ಯದ ರಾಜಕೀಯ ಪಕ್ಷಗಳು ಭರವಸೆ ನೀಡಿವೆ. ಆದರೆ ಕಾಯ್ದೆ ಜಾರಿಗೆ ತರುವ ವಿಚಾರ ಬಂದಾಗ ಆಡಳಿತ ಪಕ್ಷ ಹಿಂದೇಟು ಹಾಕುತ್ತಿದೆ. ಈ ಸರ್ಕಾರದ ಮೇಲೆ ಒತ್ತಡ ಹೇರಬೇಕಾದವರು ಯಾರು? ವಿರೋಧ ಪಕ್ಷದ ನಾಯಕರಾದ ನೀವೇ ಅಲ್ಲವೇ ? ಕಾಯ್ದೆ ಜಾರಿಗೆ ತನ್ನಿ ಎಂದು ನೀವು ಸರ್ಕಾರವನ್ನು ಏಕೆ ಒತ್ತಾಯಿಸುತ್ತಿಲ್ಲ?

ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಐಟಿ ಬಿಟಿ ಕಂಪನಿಗಳ ಮಾಲೀಕರ ಭಯವೇ? ಉದ್ಯಮಿಗಳ ಒತ್ತಡವೇ? ಅಥವಾ ಯಾರನ್ನಾದರೂ ಓಲೈಸಬೇಕಾದ ರಾಜಕೀಯ ಅನಿವಾರ್ಯತೆ ಇದೆಯೇ? ನಿಮ್ಮ ಮೌನಕ್ಕೆ ಕಾರಣವೇನು ಎಂಬುದನ್ನು ಕನ್ನಡಿಗರಿಗೆ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.

ನಮ್ಮ ಹೋರಾಟ ಯಾವುದೇ ಒಂದು ಭಾಷೆಯ ಜನರ ವಿರುದ್ಧವಲ್ಲ. ಕರ್ನಾಟಕದಲ್ಲಿ ಅಗತ್ಯ ವಿದ್ಯಾರ್ಹತೆ, ಕೌಶಲ್ಯ ಮತ್ತು ಅರ್ಹತೆ ಹೊಂದಿರುವ ಕನ್ನಡಿಗರಿಗೆ ಅವರದೇ ನೆಲದಲ್ಲಿ ಉದ್ಯೋಗಾವಕಾಶ ಸಿಗಬೇಕು ಎಂಬುದಷ್ಟೇ ನಮ್ಮ ಆಗ್ರಹ. ಸಮಾನ ಅರ್ಹತೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎನ್ನುವುದು ಯಾವ ದೃಷ್ಟಿಯಿಂದ ತಪ್ಪು? ಈ ಪ್ರಶ್ನೆಯನ್ನು ಎತ್ತುವುದಕ್ಕೂ ನೀವು ಹಿಂದೇಟು ಹಾಕುತ್ತಿರುವುದು ಏಕೆ?

ಪದವಿ ಪಡೆದು ಉದ್ಯೋಗಕ್ಕಾಗಿ ಅಲೆಯುತ್ತಿರುವ ನಮ್ಮ ಮಕ್ಕಳ ಪರವಾಗಿ ವಿರೋಧ ಪಕ್ಷದ ನಾಯಕನಾಗಿ ನೀವು ಯಾವ ಪ್ರಶ್ನೆ ಎತ್ತಿದ್ದೀರಿ? ಎಷ್ಟು ಬಾರಿ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೀರಿ? ಎಷ್ಟು ಬಾರಿ ಸರ್ಕಾರದಿಂದ ಉತ್ತರ ಕೇಳಿದ್ದೀರಿ?

ಆರ್. ಅಶೋಕ್ ಅವರೇ, ನೀವು ಕರ್ನಾಟಕದ ವಿರೋಧ ಪಕ್ಷದ ನಾಯಕರು. ಆ ಹುದ್ದೆಗೆ ಒಂದು ಘನತೆ ಇದೆ, ಜವಾಬ್ದಾರಿ ಇದೆ. ಕನ್ನಡಿಗರ ಉದ್ಯೋಗದ ಹಕ್ಕಿನ ವಿಚಾರದಲ್ಲಿ ನೀವು ಮೌನವಾಗಿದ್ದರೆ ನಿಮ್ಮ ಮೌನವನ್ನು ನಾವು ಬೇರೆಯದೇ ರೀತಿ ಅರ್ಥ ಮಾಡಿಕೊಳ್ಳುತ್ತೇವೆ. ಕನ್ನಡಿಗರ ಬದುಕಿನ ಪ್ರಶ್ನೆ ಬಂದಾಗ ನೀವು ಮಾತನಾಡದಿದ್ದರೆ, ನಿಮ್ಮನ್ನು ಬೆಳೆಸಿದ ಕನ್ನಡಿಗರಿಗೆ ಆಗುವ ಪ್ರಯೋಜನವಾದರೂ ಏನು?

ಕನ್ನಡಿಗರ ಪರವಾಗಿ ಧ್ವನಿ ಎತ್ತುವುದು ನಿಮ್ಮ ಕರ್ತವ್ಯ. ಸರ್ಕಾರವನ್ನು ಪ್ರಶ್ನಿಸುವುದು ನಿಮ್ಮ ಜವಾಬ್ದಾರಿ. ಕನ್ನಡಿಗರಿಗೆ ಉದ್ಯೋಗ ಪ್ರಾತಿನಿಧ್ಯ ಕಾಯ್ದೆ ಜಾರಿಗೆ ತನ್ನಿ ಎಂದು ಒತ್ತಾಯಿಸುವುದು ನಿಮ್ಮ ಕೆಲಸ. ಅದನ್ನು ಮಾಡದೆ ಮೌನವಾಗಿರುವುದು ನಿಮ್ಮ ನಿರಭಿಮಾನವನ್ನು ತೋರಿಸುತ್ತದೆ. ಕೊನೆಯ ಪಕ್ಷ ಕನ್ನಡಿಗರ ಉದ್ಯೋಗದ ಹೋರಾಟಕ್ಕೆ ನಿಮ್ಮ ಬೆಂಬಲ ಇದೆಯೇ ಇಲ್ಲವೇ? ಎಂಬುದನ್ನಾದರೂ ಸ್ಪಷ್ಟಪಡಿಸಿ. ಕನ್ನಡಿಗರ ಉದ್ಯೋಗದ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಕನ್ನಡಿಗರ ಮಕ್ಕಳ ಭವಿಷ್ಯದ ಪ್ರಶ್ನೆ ಸುಡುವ ಕೆಂಡದಂತೆ ಎಲ್ಲ ರಾಜಕೀಯ ಪಕ್ಷಗಳನ್ನೂ ಕಾಡಿಸಲಿದೆ. ಯಾಕೆಂದರೆ ನಾಡಿನ ಜನರು ಜಾಗೃತರಾಗುತ್ತಿದ್ದಾರೆ ಎಂದಿದ್ದಾರೆ.

More articles

Latest article

Most read