ಮಹಿಳೆಯರ ಆಕಾಂಕ್ಷೆಗಳ ವಿರುದ್ಧ ವಿಪಕ್ಷಗಳು ಮಹಾಯಜ್ಞ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಸ್ವಾರ್ಥಪರ ರಾಜಕೀಯಕ್ಕಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎಸ್‌ಪಿ ಮಹಿಳಾ ಹಕ್ಕುಗಳನ್ನು ನಿರ್ಲಕ್ಷಿಸಿದವು ವಿರೋಧ ಪಕ್ಷಗಳು ‘ನಾರಿ ಶಕ್ತಿ’ಯನ್ನು ಲಘುವಾಗಿ ಪರಿಗಣಿಸುತ್ತಿವೆ. ನಾವು ರಾಷ್ಟ್ರದ ಜನರೊಂದಿಗಿದ್ದೇವೆ. ಆದರೆ, ಕೆಲವರು ರಾಜಕೀಯ ಪ್ರಯೋಜನಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಸೂದೆಯನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಭ್ರೂಣ ಹತ್ಯೆ ಮಾಡಿವೆ. ನಾರಿಯರ ಆತ್ಮಸಮ್ಮಾನಕ್ಕೆ ಆದ ಗಾಯ  ಎಂದಿದ್ದಾರೆ.
ಮಹಿಳಾ ಮೀಸಲಾತಿ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ನಿಜವಾದ ಮುಖವನ್ನು ತೋರಿಸಿವೆ.  ಕಾಂಗ್ರೆಸ್ ರಾಷ್ಟ್ರೀಯವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜೀವಂತವಾಗಿರಲು ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿದೆ.

ಕಾಂಗ್ರೆಸ್ ಮಹಿಳಾ ಕೋಟಾ ವಿರುದ್ಧ ಸದಾ ಹೋರಾಡುತ್ತಿದೆ. ಮಹಿಳಾ ಕೋಟಾವನ್ನು ತಡೆಯಲು ಕಾಂಗ್ರೆಸ್ ಸುಳ್ಳು ಹೇಳಿದೆ. ಬಹಳ ದಿನಗಳಿಂದ ಮಹಿಳೆಯರಿಗೆ ನೀಡಬೇಕಾಗಿದ್ದ ಹಕ್ಕನ್ನು ಈ ಮಸೂದೆ ನೀಡುತ್ತಿತ್ತು. ಮಸೂದೆಯು ಎಲ್ಲ ರಾಜ್ಯಗಳಿಗೆ ದೊಡ್ಡ ಧ್ವನಿಯಾಗುತ್ತಿತ್ತು.

ತಿದ್ದುಪಡಿ ಮಸೂದೆಯು ಮಹಿಳಯರಿಗೆ ಹಕ್ಕು ನೀಡುತ್ತಿತ್ತು. ಅವರಿಗಿದ್ದ ಅಡೆತಡೆ ನಿವಾರಿಸುತ್ತಿತ್ತು. ಮಹಿಳೆಯರ ಆಕಾಂಕ್ಷೆಗಳ ವಿರುದ್ಧ ವಿಪಕ್ಷಗಳು ಮಹಾಯಜ್ಞ ನಡೆಸಿದವು. ವಿರೋಧ ಪಕ್ಷವು ಸಂವಿಧಾನದ ಭಾವನೆಗಳನ್ನು ಅವಮಾನಿಸಿದೆ. ಜನರು ವಿರೋಧ ಪಕ್ಷವನ್ನು ಶಿಕ್ಷಿಸುತ್ತಾರೆ, ಅವರು ಜನರ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

More articles

Latest article

Most read