ಇರಾನ್ : ಸುಮಾರು ಎರಡು ಮಿಲಿಯನ್ ಬ್ಯಾರೆಲ್ ಇರಾಕಿ ತೈಲವನ್ನು ಸಾಗಿಸುತ್ತಿದ್ದ ದೊಡ್ಡ ಕಚ್ಚಾ ತೈಲ ಟ್ಯಾಂಕರ್ ಸೇರಿದಂತೆ ಎರಡು ಭಾರತೀಯ ಹಡಗುಗಳ ಮೇಲೆ ಶನಿವಾರ ಓಮನ್ನ ಉತ್ತರಕ್ಕೆ ಇರಾನ್ ನೌಕಾಪಡೆ ಗುಂಡು ಹಾರಿಸಿದೆ ಎನ್ನಲಾಗಿದೆ. ಹೀಗಾಗಿ, ಭಾರತೀಯ ಟ್ಯಾಂಕರ್ಗಳು ವಾಪಸ್ ಪಶ್ಚಿಮಕ್ಕೆ ತೆರಳಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಗುಂಡು ಹಾರಿಸಲಾಯಿತು. ಒಂದು ಹಡಗು 2 ಮಿಲಿಯನ್ ಬ್ಯಾರೆಲ್ ಇರಾಕಿ ತೈಲವನ್ನು ಸಾಗಿಸುವ ಭಾರತೀಯ ಧ್ವಜ ಹೊಂದಿರುವ VLCC ಸೂಪರ್ ಟ್ಯಾಂಕರ್ ಆಗಿದೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ. ಈ ಹಡಗುಗಳನ್ನು ಸನ್ಮಾರ್ ಹೆರಾಲ್ಡ್ ಮತ್ತು ಜಗ್ ಅರ್ನಾವ್ ಎಂದು ಗುರುತಿಸಲಾಗಿದೆ.
ಇರಾನ್ನ ರೆವಲ್ಯೂಷನರಿ ಗಾರ್ಡ್ನ ಎರಡು ಗನ್ಬೋಟ್ಗಳು ಹಾರ್ಮುಜ್ ಟ್ಯಾಂಕರ್ ಮೇಲೆ ಗುಂಡು ಹಾರಿಸಿದ್ದು, ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್ ವರದಿ ಮಾಡಿದೆ.

