ಸ್ಮರಣೆ | ಮರಳಿ ಹುಟ್ಟಿ ಬನ್ನಿ ಅಂಬೇಡ್ಕರ್…. ನಮ್ಮೆಲ್ಲರಿಗಾಗಿ..

ಇಂದು ಅಂಬೇಡ್ಕರ್ ಜಯಂತಿ.

ಬಹುಶಃ ಅಂಬೇಡ್ಕರ್ ಎಂಬ ಮಹಾನ್ ಮಾನವತಾವಾದಿ ಹುಟ್ಟಿರದಿದ್ದರೆ, ದಲಿತ ಸಮುದಾಯದ ಇವರು ಭಾರತದ ರಾಜಕಾರಣದೊಳಗೆ ಬಂದಿರದೇ ಇದ್ದಿದ್ದರೆ ಮತ್ತು ಅವರ ಬದಲು ಹಿಂದೂ ಮೇಲ್ಜಾತಿಯ ಯಾವನೇ ಒಬ್ಬ ಸಂವಿಧಾನ ಬರೆದಿದ್ದಿದ್ರೆ ಇಂದು ಈ ಭಾರತದ ನೆಲದಲ್ಲಿ ಹಿಂದೂ ಸಮುದಾಯದವರೇ ಆದ ದಲಿತ, ಆದಿವಾಸಿ, ಬುಡಕಟ್ಟು, ಶೂದ್ರ ಸಮುದಾಯಾದಿ ಹಿಂದುಳಿದವರಿಗೆ ಮತ್ತು ಕ್ರಿಶ್ಚಿಯನ್ ಮುಸಲ್ಮಾನ್ ಸಹಿತ  ಅನ್ಯಧರ್ಮೀಯರಿಗೆ ಬದುಕುವ ಹಕ್ಕೇ ಇರುತ್ತಿರಲಿಲ್ಲ…

1947 ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊದಲ ಸಂಪುಟದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾದವರು ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಜಗ ಕಂಡ ವಿಶ್ವಮಾನವ. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅವರು ಸ್ಥಾನವನ್ನಲಂಕರಿಸಿದ್ದರಿಂದಲೇ ಸಂವಿಧಾನ ಬರೆಯುವ ಅತ್ಯಂತ ಶ್ರೇಷ್ಠ ಮತ್ತು ಮಹದವಕಾಶ ಅವರಿಗೆ ಲಭಿಸಿತ್ತು. ಒಂದು ವೇಳೆ ಅವರು ಇರದಿದ್ದಿದ್ದರೆ, ಆ ಜವಾಬ್ದಾರಿ ಮುಖ್ಯವಾಗಿ ನಮ್ಮ ಕರ್ನಾಟಕದ ಮಂಗಳೂರು ಮತ್ತು ಕಾರ್ಕಳ ನಡುವೆ ಇರುವ ಪುಟ್ಟ ಹಳ್ಳಿ ಬೆನೆಗಲ್ ನ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಬಿ.ಎನ್. ರಾವ್ (ಬೆನೆಗಲ್ ನರಸಿಂಗ್ ರಾವ್) ಅವರಿಗೆ ಲಭಿಸುತ್ತಿತ್ತು. ಹಾಗೆಂದು ಬಿ.ಎನ್. ರಾವ್ ಅವರನ್ನು ಸಾಮಾನ್ಯ ವ್ಯಕ್ತಿ ಎಂದು ನಾನು ಪರಿಗಣಿಸಿದೆ ಎಂದು ತಿಳಿಯಬೇಡಿ .

ಹೌದು. ಇದು ಕೇವಲ ಹಿಂದೂ ಮೇಲ್ಜಾತಿಯವರಿಗೆ, ಬಿಜೆಪಿ ಪಕ್ಷದ ರಾಜಕೀಯ ಪ್ರಭಾವಿಗಳಿಗೆ, ಆರ್ ಎಸ್ ಎಸ್ ಮತ್ತದರ ಕೃಪಾಕಟಾಕ್ಷದಲ್ಲಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತಿತರ ಹಿಂದೂ ಸಂಘಟನೆಗಳಲ್ಲಿನ ಮೇಲ್‌ ಸ್ತರದಲ್ಲಿರುವ ಮುಖಂಡರಿಗೆ ಮತ್ತು ಅದರ ಧಾರ್ಮಿಕ ನಾಯಕರಿಗೆ, ಅದಾನಿ ಅಂಬಾನಿಯಂತಹ ಸಿರಿವಂತರಿಗೆ ಮಾತ್ರ ಸೇರಿದ ಭಾರತವಲ್ಲ. 

ಅಂಬೇಡ್ಕರ್

ಅವರುಗಳ ಸಂಖ್ಯೆ 145 ಕೋಟಿಯಲ್ಲಿ ಹೆಚ್ಚೆಂದರೆ 45 ಕೋಟಿ ಅಂತಲೇ ಇಟ್ಟುಕೊಳ್ಳೋಣ…. ಉಳಿದ 100 ಕೋಟಿ ಜನರು ಬದುಕಬೇಕು ಈ ಭಾರತದ ನೆಲದಲ್ಲಿ.  ದಲಿತ ಆದಿವಾಸಿ ಬುಡಕಟ್ಟು ಜನಾಂಗದವರು, ಬಹುಸಂಖ್ಯೆಯ ಹಿಂದೂ ಶೂದ್ರ ಸಮುದಾಯದ ಜನರು, ಹಿಂದೂ ಧರ್ಮದಲ್ಲಿನ ಇನ್ನಿತರ ಹಿಂದುಳಿದ ವರ್ಗದವರು, ಕ್ರಿಶ್ಚಿಯನ್, ಮುಸ್ಲಿಮ್, ಬೌದ್ಧ, ಜೈನ, ಸಿಖ್ ಪಾರಸಿಕ ಸಮುದಾಯದವರು ಬದುಕಿ ಬಾಳಬೇಕು.

ಇದು ಬಹುತ್ವದ ಭಾರತ…. ಕೇವಲ ಉಳ್ಳವರ ಹಿಂದುತ್ವದ ಭಾರತವಲ್ಲ.

ಅಂಬೇಡ್ಕರ್ ಅವರು ಸಾಮಾನ್ಯರೇ…???

ನೋ  ಅವರು  ಭೂತ ವರ್ತಮಾನ ಭವಿಷ್ಯತ್ ಎಲ್ಲವನ್ನೂ ತಿಳಿದ ತ್ರಿಕಾಲ ಜ್ಞಾನಿಗಳು. ಇದು ಕೇವಲ  ನನ್ನ ಅನಿಸಿಕೆಯಲ್ಲ. ಅದು ಅಂಬೇಡ್ಕರ್ ಅವರ ವ್ಯಕ್ತಿತ್ವದ  ಅನಾವರಣ..

ಅವರಿಗೆ ತಿಳಿದಿತ್ತು ಒಂದಲ್ಲ ಒಂದು ದಿನ ಭಾರತದಲ್ಲಿ ಜಾತಿ ಸಂಘರ್ಷಗಳು, ಧರ್ಮ ದ್ವೇಷಗಳು ಉಚ್ಛ್ರಾಯ ಸ್ಥಿತಿಗೆ ತಲುಪುತ್ತವೆ ಎಂದು. ಹಿಂದೂ ಮೇಲ್ವರ್ಗದವರು ದಲಿತ ಮತ್ತಿತರ ಕೆಳವರ್ಗದವರನ್ನು ಜಾತಿಯ ಸಂಘರ್ಷದಲ್ಲಿ ಕೊಲ್ಲುತ್ತಾರೆ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರು ಧರ್ಮದ ಹೆಸರಿನಲ್ಲಿ ಒಬ್ಬರನ್ನೊಬ್ಬರು ಕೊಲ್ಲುತ್ತಾರೆ ಎಂದು.

ಅವರು 60ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ಆಯಾ ದೇಶಗಳ ಸಂವಿಧಾನದ ಅತ್ಯುತ್ತಮ ಅಂಶಗಳನ್ನು ಭಾರತದ ರಾಜಕೀಯ, ಆರ್ಥಿಕ ಮಾತ್ರವಲ್ಲ, ಸಾಮಾಜಿಕ,  ಮತ್ತು ಧಾರ್ಮಿಕ ಸ್ಥಿತಿಗೆ ತಕ್ಕಂತೆ ಅಳವಡಿಸಿಕೊಂಡು, ವ್ಯಾಪಕವಾದ ಸಂಶೋಧನೆ ನಡೆಸಿ 3 ವರ್ಷಗಳ ಕಾಲಾವಧಿ ತೆಗೆದುಕೊಂಡು  ಸಂವಿಧಾನ ರಚಿಸಿದರು. ಯಾವ ದೇಶದ ಸಂವಿಧಾನವೂ ನಮ್ಮ ಭಾರತದ ಸಂವಿಧಾನಕ್ಕೆ ಸಮಾನವಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಸಿದ್ಧಪಡಿಸಿದ  ಪೀಠಿಕೆ…  ಪ್ರಿಯಾಂಬಲ್ ನ್ನೇ ಸಂವಿಧಾನಕ್ಕೆ ನೀಡಿದ್ದಾರೆ. ಈ ಪ್ರಿಯಾಂಬಲ್ ದೇಶದ ಮೂಲಭೂತ ಆಶಯಗಳು, ತತ್ವಗಳು ಮತ್ತು ಉದ್ದೇಶಗಳನ್ನು ಪ್ರತಿಬಿಂಬಿಸುವ ಸಂಕ್ಷಿಪ್ತ ಪೀಠಿಕೆಯಾಗಿದೆ. ಇದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯವಾಗಿ ಘೋಷಿಸುತ್ತದೆ ಮತ್ತು ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಖಾತರಿಪಡಿಸುತ್ತದೆ. ಜಾತ್ಯತೀತ ಎಂಬ ಶಬ್ದವನ್ನು ಇಂದಿರಾ ಗಾಂಧಿ ಸೇರಿಸಿದ್ದಾಗಿದೆ.

ಅಂಬೇಡ್ಕರ್ ಅವರೊಂದಿಗೆ ಈ ಮೂವರು…. ಬಿ ಎನ್ ರಾವ್, ಜವಾಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿಯವರು ಭಾರತ ಇಂದು ಜಾತಿ ಸಂಘರ್ಷಗಳಿಗೆ, ಧರ್ಮದ್ವೇಷಗಳಿಗೆ ಮತ್ತಷ್ಟು ಬಲಿಯಾಗದಂತೆ ರಕ್ಷಿಸಿದ್ದಾರೆ.

ಅಂಬೇಡ್ಕರ್ ಅವರನ್ನು ಪ್ರೀತಿಸಿದಂತೆ, ಗೌರವ ಕೊಡುವಂತೆ  ಸಮಾಜದೆದುರು ನಾಟಕ ಮಾಡುವ ಆರ್ ಎಸ್ ಎಸ್ ಮತ್ತು ಬಿಜೆಪಿಗಳು ತೆರೆಮರೆಯಲ್ಲಿ ಅಂಬೇಡ್ಕರ್ ಅವರನ್ನು ಹೇಗೆ ಗಾಂಧೀಜಿ ನೆಹರು ಇಂದಿರಾಗಾಂಧಿ ಅವರನ್ನು ದ್ವೇಷಿಸುತ್ತಾರೋ, ಅಂತೆಯೇ ಬಹುವಾಗಿ ದ್ವೇಷಿಸುತ್ತಾರೆ. ಅವಮಾನ ಮಾಡುತ್ತಾರೆ, ಅವರ ಪ್ರತಿಮೆಗಳನ್ನು ನಾಶ ಮಾಡುತ್ತಾರೆ. ಅವರ ಫೋಟೋ ಇಡುವುದನ್ನೂ ಸಹಿಸದವರು ಇವರು. ಕಾಂಗ್ರೆಸ್ ಕೂಡಾ ಅಂಬೇಡ್ಕರ್ ಅವರಿಗೆ ಮುಂದಿನಿಂದ  ಗೌರವ ಕೊಡುವಂತೆ ಮಾಡುತ್ತಾ, ಹಿಂದಿನಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ಗಳಿಗೆ ಹೆದರುತ್ತಾ ಅಂಬೇಡ್ಕರ್ ಅವರಿಗೆ ಮಾನ್ಯತೆ ಕೊಡದ ಹಲವು ಉದಾಹರಣೆಗಳಿವೆ ಈ ದೇಶದ ಇತಿಹಾಸದಲ್ಲಿ. ಇಂದಿನ ರಾಜಕೀಯದಲ್ಲಿ ಇದು ಇನ್ನೂ ಹೆಚ್ಚಾಗಿದೆ.

ಅಂಬೇಡ್ಕರ್‌, ನೆಹರು

ಲೇಖನ ಮುಗಿಸುವ ಮೊದಲು ದಲಿತ ಸಮುದಾಯಕ್ಕೊಂದು ಮಾತು….

ತ್ರಿಕಾಲಜ್ಞಾನಿ  ಅಂಬೇಡ್ಕರ್ ಅವರು ಒಂದು ವಿಷಯ ತಿಳಿದಿದ್ದರು ಮತ್ತು ಸ್ವತಃ ಹೇಳಿದ್ದರು…. ಶತಶತಮಾನಗಳು ಕಳೆದರೂ ತನ್ನ ದಲಿತ ಸಮುದಾಯ ಎಂದೂ ಬದಲಾಗುವುದಿಲ್ಲ, ಮೇಲೆ ಬರುವುದಿಲ್ಲ ಎಂದು.

ಅವರು ಬಹುವಾಗಿ ಆಶಿಸಿದ್ದರು….

ದಲಿತರು ತಮಗೆ ಮೇಲ್ಜಾತಿಯವರು ಮಾಡಿದ ಶೋಷಣೆಗಳ ಇತಿಹಾಸಗಳನ್ನು ನೆನಪಿಟ್ಟುಕೊಂಡು ಹಕ್ಕುಗಳಿಗಾಗಿ ಹೋರಾಡಬೇಕು. ದಲಿತೇತರರು ದಲಿತರ ಐಕ್ಯತೆಯನ್ನು ಮುರಿಯಲು ಪ್ರಯತ್ನಿಸಿದರೂ ಅದಕ್ಕೆ ಅವಕಾಶ ನೀಡದೆ, ದಲಿತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ತೊರೆದು, ಐಕ್ಯತೆಯಿಂದ ಇರಬೇಕು ಎಂದು. ದಲಿತರು ತಮ್ಮ ಹಕ್ಕುಗಳಿಗಾಗಿ ರಾಜಕೀಯವಾಗಿ ಸಂಘಟಿತರಾಗಿ ಅಧಿಕಾರದ ಪಾಲು ಪಡೆಯಬೇಕು ಎಂದು ಕೂಡಾ ಅವರು ಬಯಸಿದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು 1956 ರಲ್ಲಿ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಆಪ್ತ ಸಹಾಯಕ ನಾನಕ್ ಚಂದ್ ರಟ್ಟು ಅವರೊಂದಿಗೆ “ನನ್ನ  ದಲಿತ ಸಮುದಾಯದ ಜನರಿಗೆ ಹೇಳು, ನಾನು ಅವರಿಗಾಗಿ ಏಕಾಂಗಿಯಾಗಿ ಅಪಾರ ಸಂಕಷ್ಟಗಳ ನಡುವೆ ಎಷ್ಟೋ ಕಷ್ಟಪಟ್ಟು, ಅಪಮಾನ ಅವಮಾನಗಳನ್ನು ಸಹಿಸಿ   ಚಳುವಳಿ ತಂದಿದ್ದೇನೆ. ಎಷ್ಟೇ ಅಡೆತಡೆಗಳು ಬಂದರೂ ಈ ಚಳುವಳಿ ಮುಂದಕ್ಕೆ ಹೋಗಬೇಕು. ಒಂದು ವೇಳೆ ಅದನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ, ತಲುಪಿದ ಜಾಗದಲ್ಲೇ ಉಳಿಸಿಕೊಳ್ಳಲಿ. ಆದರೆ ಎಂದಿಗೂ ಹಿಂದೆ ಸರಿಸದಿರಲಿ ” ಎಂದು ಭಾವುಕರಾಗಿ ನುಡಿದಿದ್ದರು.

ಸಮಾಜದ ಪರಿವರ್ತನೆಗಾಗಿ ಬಂದ ಯೇಸುಕ್ರಿಸ್ತ ತನ್ನ ಸಾವಿನ ಮುನ್ನ ಅಂತಿಮ ಭೋಜನದ ವೇಳೆ ತನ್ನ ಧರ್ಮದೂತರಿಗೆ “ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ” ಎಂದು ಹೇಳಿದ್ದರು.

ಬೈಬಲ್ ಬರೆಯಲ್ಪಟ್ಟಿರದ ಕಾಲವದು. ಯೇಸುವಿನ ಮಾತು ಬೈಬಲನ್ನು ಪ್ರಕಟಪಡಿಸಿ ಎಂಬುದಾಗಿರಲಿಲ್ಲ…. ಪಾತಕ ಕೃತ್ಯಗಳಲ್ಲಿ ಮುಳುಗಿ ಹೋದ ಮನುಕುಲವನ್ನು ಮರಳಿ ಪ್ರೀತಿ ಶಾಂತಿ ಕರುಣೆ ಸಹನೆ ಸಹಾನುಭೂತಿಯ ಸನ್ನಡೆಯುತ್ತ ಮುನ್ನಡೆಸಿ ಬದುಕಿನ ಸನ್ಮಾರ್ಗವನ್ನು ತೋರಿ ಎಂಬ ಆದೇಶವಾಗಿತ್ತು. ಯಹೂದಿ ಪರಂಪರೆಯ ಯೇಸುವಿನ ಕಾಲದಲ್ಲಿ ಯೇಸುಕ್ರಿಸ್ತನ ನಂತರವೇ ಕ್ರಿಶ್ಚಿಯನ್ ಧರ್ಮ ಅವತರಿಸಿತು. ಯೇಸುವಿನ ನೀತಿಬೋಧೆಗಳನ್ನು ತಿಳಿಸಿ ಜನರನ್ನು ಒಂದು ಪಂಥದಲ್ಲಿ ಒಗ್ಗೂಡಿಸಲು ಒಂದು ಧರ್ಮದ ಅವಶ್ಯಕತೆ ಧರ್ಮದೂತರಿಗಿತ್ತು.

ಮನುಕುಲದ ಜನರಿಗಾಗಿ ಪರಿತಪಿಸಿದ ಯೇಸುಕ್ರಿಸ್ತನಂತೇ ಅಂಬೇಡ್ಕರ್ ಅವರು ಭಾರತದ ಜನರಿಗಾಗಿ ಪರಿತಪಿಸಿದ್ದರು…. ಅದರಲ್ಲೂ ಬಹು ಮುಖ್ಯವಾಗಿ ತಮ್ಮ ಸಮುದಾಯದ ದಲಿತರಿಗಾಗಿ. ತಮ್ಮ ಆಪ್ತ ಸಹಾಯಕ ನಾನಕ್ ಚಂದ್ ರಟ್ಟು ಅವರಲ್ಲಿ ತಮ್ಮ ಈ ಮೇಲಿನ ಅಂತಿಮ ಸಂದೇಶವನ್ನು ದಲಿತರಿಗಾಗಿ ಹೇಳುವಾಗ 3 ಬಾರಿ ಅದನ್ನು ಪುನರುಚ್ಚರಿಸಿ “Go and tell them” ಎಂದಿದ್ದರು. ಇದು ಮೇಲ್ಜಾತಿಯವರ ದೌರ್ಜನ್ಯದ ಭಾರತದ ಈ ನೆಲದಲ್ಲಿ ದಲಿತರ ಭವಿಷ್ಯದ ಬಗ್ಗೆ ಅವರಿಗಿದ್ದ  ಗಂಭೀರತೆಯನ್ನು ತೋರಿಸುತ್ತದೆ.

ಇಂದು ಅನ್ಯ ಧರ್ಮಗಳ ವಿರುದ್ಧ ಮೇಲ್ಜಾತಿಯವರು ತಂದು ಹಾಕುವ ಧರ್ಮದ್ವೇಷಗಳ ಕಾಲಾಳುಗಳಾಗಿ ಅಂಬೇಡ್ಕರ್ ಅವರ ಅದೇ ದಲಿತ ಸಮುದಾಯ ಮುಖ್ಯವಾಗಿ ಬಳಸಲ್ಪಡುವುದು ಅತ್ಯಂತ ಅತ್ಯಂತ ಅತ್ಯಂತ ವಿಷಾದನೀಯ.

ಈ ರೌರವ ನರಕದಿಂದ ದಲಿತರನ್ನು ಮೇಲೆತ್ತಲು, ಹಿಂದೂ ಧರ್ಮದ ಹಿಂದುಳಿದವರನ್ನು ರಕ್ಷಿಸಲು, ಅನ್ಯ ಧರ್ಮೀಯರನ್ನು ಕಾಪಾಡಲು ಮರಳಿ ಹುಟ್ಟಿ ಬನ್ನಿ ಅಂಬೇಡ್ಕರ್ ಸರ್.

ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ

ಹವ್ಯಾಸಿ ಬರಹಗಾರ್ತಿ

More articles

Latest article

Most read