ನವದೆಹಲಿ : ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ತನ್ನ ಕ್ಷೇತ್ರವನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದು ಮೂವರು ವಕ್ತಾರರನ್ನು ನೇಮಕ ಮಾಡಿದೆ.
ಶಿಕ್ಷಣ ಕ್ಷೇತ್ರದಲ್ಲಿನ ಕೇಂದ್ರ ಸರ್ಕಾರದ ವೈ ಫಲ್ಯಗಳನ್ನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯ ಹೊತ್ತಿನಲ್ಲೇ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಬಗ್ಗೆ ಸಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ತನಿಖಾ ಪತ್ರಕರ್ತ ಸೌರವ್ ದಾಸ್ ಸಂಘಟನೆಯ ಮುಖ್ಯ ವಕ್ತಾರರಾಗಿ ಕೆಲಸ ನಿರ್ವಹಿಸಿದರೆ ರಾಜಕೀಯ ಸಂಶೋಧಕ ಹಾಗೂ ಚಿತ್ರ ನಿರ್ಮಾಪಕ ವಿಜೇತ ದಹಿಯಾ, ಪಕ್ಷದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಅಶುತೋಷ್ ರಂಕಾ ಅವರು ಸಾರ್ವಜನಿಕರು ಮತ್ತು ಮಾಧ್ಯಮಗಳ ಮುಂದೆ ಸಂಘಟನೆಯನ್ನು ಪ್ರತಿನಿಧಿಸಲಿದ್ದಾರೆ’ ಎಂದು ಪಕ್ಷ ಎಕ್ಸ್‌ನಲ್ಲಿ ಅಧಿಕೃತವಾಗಿ ತಿಳಿಸಿದೆ.
ಕಾಕ್ರೋಚ್ ಜನತಾ ಪಾಟಿ ಭಾರತದ ರಾಜಕೀಯ ದಿಕ್ಕನ್ನು ಬದಲಾಯಿಸಲು ಸಿದ್ಧವಾಗಿದೆ. ನೀಟ್ ಹಾಗೂ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್ಇ ಪರೀಕ್ಷಾ ವ್ಯವಸ್ಥೆಯ ಲೋಪಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಶಾಂ ತಿಯುತ ಪ್ರತಿಭಟನೆ ಪ್ರಾರಂ ಭಿಸುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಘೋಷಿಸಿದ್ದಾರೆ.
ಜೆಇಇ ದತ್ತಾಂಶ ಸೋರಿಕೆ: ಧರ್ಮೇಂದ್ರ ವಜಾಗೊಳಿಸಿ
ಜೆಇಇ ಅಡ್ವಾನ್ಸ್ಡ್–2026ರ ಪರೀಕ್ಷೆಯ ಅಭ್ಯರ್ಥಿಗಳ ದತ್ತಾಂಶ ಸೋರಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗುರುವಾರವಾಗ್ದಾಳಿ ನಡೆಸಿದೆ.
ಸುದ್ದಿಗೋ ಷ್ಠಿ ಉದ್ದೇ ಶಿಸಿಮಾತನಾಡಿದ ಸಿಜೆಪಿ ಪ್ರತಿನಿಧಿಗಳು, ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಡಿಜಿಟಲ್ ಮೂಲಸೌಕರ್ಯದ ನಿರ್ವಹಣೆ ಎಂತಹ ಅಸಮರ್ಥರ ಕೈಯಲ್ಲಿದೆ ಎಂಬುದಕ್ಕೆ ಇದುವೇ ಸಾಕ್ಷಿ. ತಕ್ಷಣವೇ ಪ್ರಧಾನಿ ಮೋದಿ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆಯು ವಿದ್ಯಾರ್ಥಿಗಳ ದತ್ತಾಂಶದ ಸುರಕ್ಷತೆ ಹಾಗೂ ಪರೀಕ್ಷೆಯ ನಿರ್ವಹಣೆ ಬಗ್ಗೆ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ಹೆಸರುಗಳು, ಫೋನ್ ನಂಬರ್ ಹಾಗೂ ಚಿತ್ರಗಳು ಸೋರಿಕೆಯಾಗಿವೆ. ಜಗತ್ತಿನಾದ್ಯಂತ ಉನ್ನತ ತಂತ್ರಜ್ಞಾನ ಕಂಪನಿಗಳನ್ನು ಮುನ್ನಡೆಸುವ ದೇಶದಲ್ಲಿಮೂಲಭೂತ ವ್ಯವಸ್ಥೆಗಳನ್ನು ಸುರಕ್ಷಿತವಾಗಿ ಮುನ್ನಡೆಸಲು ಶಿಕ್ಷಣ ಸಚಿವರು ಹಾಗೂ ಕೇಂದ್ರ ಸರ್ಕಾರವು ಅಸಮರ್ಥವಾಗಿದೆ. ಈ ಘಟನೆಯಿಂದಾಗಿ ವಿದ್ಯಾರ್ಥಿ ಗಳ ಭವಿಷ್ಯ ಅತಂತ್ರವಾಗಿದೆ ಎಂದು ಆರೋ ಪಿಸಿದ್ದಾರೆ.

