ಈ ಯುಗಾದಿಗೆ ಪವನ್ ಕಲ್ಯಾಣ್ ‘ಉಸ್ತಾದ್ ಭಗತ್ ಸಿಂಗ್’ ಅಬ್ಬರ ಜೋರು

ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ಕಾಂಬಿನೇಷನ್‌ನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಾಳೆ, ಅಂದರೆ ಮಾರ್ಚ್ 19, 2026ರಂದು ಯುಗಾದಿಯ ಅಂಗವಾಗಿ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ ಪವನ್ ಕಲ್ಯಾಣ್ ಅವರ ಖಡಕ್ ಪೊಲೀಸ್ ಆಫೀಸರ್ ಲುಕ್ ಹಾಗೂ ವೈಲೆನ್ಸ್ ಕುರಿತ ಮಾಸ್ ಡೈಲಾಗ್‌ಗಳು ಅಭಿಮಾನಿಗಳಲ್ಲಿ ಭಾರಿ ಹೈಪ್ ಸೃಷ್ಟಿಸಿವೆ. ಚಿತ್ರದ ನಿರ್ಮಾಪಕ ನವೀನ್ ಯೆರ್ನೇನಿ ಅವರು ಈಗಾಗಲೇ ಫೈನಲ್ ಎಡಿಟ್ ನೋಡಿದ್ದು, ಇದೊಂದು ದೊಡ್ಡ ‘ಬ್ಲಾಕ್‌ಬಸ್ಟರ್’ ಆಗಲಿದೆ ಎಂದು ಹೇಳಿದ್ದಾರೆ.

​ಮಾರ್ಚ್ 15ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ನಡೆದಿತ್ತು. ಆಂಧ್ರಪ್ರದೇಶದ ಡಿಸಿಎಂ ಆದ ನಂತರ ಬಿಡುಗಡೆಯಾಗುತ್ತಿರುವ ಚಿತ್ರವಾದ್ದರಿಂದ ರಾಜಕೀಯವಾಗಿಯೂ ಈ ಸಿನಿಮಾ ಹೆಚ್ಚಿನ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತಮ್ಮ ಸಿನಿಮಾ ಮತ್ತು ರಾಜಕೀಯ ಜೀವನ ಎರಡರ ಬಗ್ಗೆಯೂ ಮಾತನಾಡಿ ಅಭಿಮಾನಿಗಳಿಗೆ ಜೋಶ್ ತುಂಬಿದ್ದರು. ಹಾಗೆಯೇ ಆಂಧ್ರಪ್ರದೇಶ ಸರ್ಕಾರವು ಚಿತ್ರಕ್ಕೆ ವಿಶೇಷ ಅನುಮತಿ ನೀಡಿದ್ದು, ಮಾರ್ಚ್ 19ರಂದು ಮುಂಜಾನೆ 4 ಗಂಟೆಯಿಂದಲೇ ಶೋಗಳು ಆರಂಭವಾಗಲಿವೆ.

​ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಮತ್ತು ರಾಶಿ ಖನ್ನಾ ನಾಯಕಿಯರಾಗಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಮತ್ತು ತಮನ್ ಅವರ ಹಿನ್ನೆಲೆ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ. ಒಟ್ಟಾರೆಯಾಗಿ ಈ ಯುಗಾದಿಗೆ ಬಾಕ್ಸ್ ಆಫೀಸ್‌ನಲ್ಲಿ ಪವನ್ ಕಲ್ಯಾಣ್ ‘ಉಸ್ತಾದ್ ಭಗತ್ ಸಿಂಗ್’ ಅಬ್ಬರ ಜೋರಿರಲಿದೆ.

More articles

Latest article

Most read