ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯದಾದ್ಯಂತ ಸ್ಫೋಟಕದ ಸದ್ದು ಕೇಳಿಬರುತ್ತಿದೆ. ಇರಾನ್ ಸಹ ಪ್ರತಿಯಾಗಿ ಸಾವಿರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಅಮೇರಿಕ ದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಶನಿವಾರದಿಂದ ಇರಾನ್ನಲ್ಲಿ 3,000 ಕ್ಕೂ ಹೆಚ್ಚು ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪ್ರತಿಯಾಗಿ ಇರಾನ್ ಅಮೇರಿಕದ ನೆಲೆಗಳಿರುವ 9 ದೇಶಗಳ ಮೇಲೆ ದಾಳಿ ಮಾಡಿದೆ.
ಬಹ್ರೇನ್, ಇರಾಕ್, ಜೋರ್ಡಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಸೈಪ್ರಸ್ನಲ್ಲಿರುವ ಬ್ರಿಟನ್ ಸೇನಾ ನೆಲೆ.
ದಾಳಿಗೆ ಒಳಗಾದ 12 ದೇಶಗಳಲ್ಲಿನ ಸಾವು-ನೋವುಗಳ ಪಟ್ಟಿ

ಇರಾನ್ ನಲ್ಲಿ 1,255 ಜನ ಮೃತಪಟ್ಟವರೇ 12,000 ಜನ ಗಾಯಗೊಂಡಿದ್ದಾರೆ. ಅತಿ ಹೆಚ್ಚು ಹಾನಿಗೊಳಗಾದ ದೇಶ ಇದು.
ಲೆಬನಾನ್ನಲ್ಲಿ 394 ಜನಮೃತಪಟ್ಟರೇ 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ದಾಳಿಗೆ 83 ಮಕ್ಕಳು ಬಲಿಯಾಗಿದ್ದಾರೆ 5 ಲಕ್ಷ ಜನ ಸ್ಥಳಾಂತರವಾಗಿದ್ದಾರೆ.
ಇಸ್ರೇಲ್ನಲ್ಲಿ 13 ಮೃತಪಟ್ಟರೆ 1,929 ಗಾಯಗೊಂಡವರು. ಬೀಟ್ ಶೆಮೇಶ್ ಮೇಲೆ ನಡೆದ ದಾಳಿಯಲ್ಲಿ 9 ಜನ ಸಾವು.
ಅಮೆರಿಕ ಸೈನಿಕರು 8 ಮೃತಪಟ್ಟರೆ 18 ಗಾಯಗೊಂಡಿದ್ದಾರೆ. ಗಲ್ಫ್ ವಲಯದಲ್ಲಿ 8ನೇ ಸೈನಿಕನ ಸಾವು ದೃಢಪಟ್ಟಿದೆ.
ಕುವೈತ್ 6 ಜನ ಮೃತಪಟ್ಟವರು ಅದರಲ್ಲಿ ಇಬ್ಬರು ಅಗ್ನಿಶಾಮಕ ಅಧಿಕಾರಿಗಳು ಮತ್ತು ಒಬ್ಬ ಬಾಲಕಿ ಸಾವು.
ಇರಾಕ್ 6 ಜನ ಮೃತಪಟ್ಟವರು ಹಲವರು ಶಿಯಾ ಹೋರಾಟಗಾರರು ಮತ್ತು ಅಮೆರಿಕದ ರಾಯಭಾರ ಕಚೇರಿ ಬಳಿ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಯುಎಇನಲ್ಲಿ 4 ಜನ ಮೃತಪಟ್ಟರೆ 112 ಗಾಯಗೊಂಡಿದ್ದಾರೆ. ಮೃತರ ಪೈಕಿ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದವರಿದ್ದಾರೆ.
ಬಹ್ರೇನ್ 1 ಜನ ಮೃತಪಟ್ಟರೆ 36 ಗಾಯಗೊಂಡಿದ್ದಾರೆ. ಅಮೇರಿಕ ದ 5ನೇ ನೌಕಾಪಡೆಯ ಕೇಂದ್ರದ ಮೇಲೆ ದಾಳಿ.
ಸೌದಿ ಅರೇಬಿಯಾ 2 ಜನ ಮೃತಪಟ್ಟರೆ 12 ಗಾಯಗೊಂಡಿದ್ದಾರೆ. ವಸತಿ ಪ್ರದೇಶದ ಮೇಲೆ ಕ್ಷಿಪಣಿ ಬಿದ್ದು ಸಾವು.
ಓಮನ್ 1 ಜನ ಮೃತಪಟ್ಟರೆ 5 ಪಾಲಾವ್ ಧ್ವಜದ ತೈಲ ಟ್ಯಾಂಕರ್ ಮೇಲೆ ದಾಳಿ.
ಕತಾರ್ನಲ್ಲಿ ಯಾವುದೆ ಸಾವು ನೊವು ಆಗದೆ 16 ಜನ ಗಾಯಗೊಂಡಿದ್ದಾರೆ. ಅಲ್ ಉದೈದ್ ಸೇನಾ ನೆಲೆ ಗುರಿ; ವಿಮಾನಯಾನ ಸಂಪೂರ್ಣ ರದ್ದು.
ಜೋರ್ಡಾನ್ ಯಾವುದೆ ಸಾವು ನೊವುಗಳು ಆಗಿಲ್ಲ ಆದರೆ 14 ಜನ ಗಾಯಗೊಂಡಿದ್ದಾರೆ. 119 ಇರಾನ್ ಕ್ಷಿಪಣಿ ಮತ್ತು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಅಮೇರಿಕ ದ ಸೇನಾ ಬಲ:
ಅಮೇರಿಕ ವು ಈ ವಲಯದ 19 ಕಡೆಗಳಲ್ಲಿ ತನ್ನ ಸೇನಾ ನೆಲೆಗಳನ್ನು ಹೊಂದಿದೆ.
ಬಹ್ರೇನ್, ಈಜಿಪ್ಟ್, ಇರಾಕ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಕಾಯಂ ನೆಲೆಗಳಿವೆ. ಪ್ರಸ್ತುತ ಸುಮಾರು 40,000 ದಿಂದ 50,000 ಅಮೇರಿಕ ನ್ ಸೈನಿಕರು ಈ ಭಾಗದಲ್ಲಿ ನಿಯೋಜನೆಗೊಂಡಿದ್ದಾರೆ.
ಜಾಗತಿಕ ಪರಿಣಾಮ:
ಕತಾರ್ ತನ್ನ ಎಲ್ಲಾ ಶಾಲೆಗಳನ್ನು ಆನ್ಲೈನ್ ಶಿಕ್ಷಣಕ್ಕೆ ಬದಲಾಯಿಸಿದೆ ಮತ್ತು ರಂಜಾನ್ ಪ್ರಯುಕ್ತ ನಡೆಯುವ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದೆ. ಕತಾರ್ ಏರ್ವೇಸ್ ತನ್ನ ಎಲ್ಲಾ ಹಾರಾಟಗಳನ್ನು ಸ್ಥಗಿತಗೊಳಿಸಿದೆ.

