ಪುಸ್ತಕ ಪರಿಚಯ | ಶಕು ಅಕ್ಕನ `ಚಿತ್ತ ಭಿತ್ತಿಯ ಪತ್ತಾಯ’

ಶಕು ಅಕ್ಕ ( ಶಕುತಳಾ ಟಿ ಶೆಟ್ಟಿ) ನ `ಚಿತ್ತ ಭಿತ್ತಿಯ ಪತ್ತಾಯ’ ಆತ್ಮಕಥನ ಕೈಗೆತ್ತಿಗೊಂಡುದನ್ನು ಕೆಳಗಿಡಲಾಗದೆ ಕಾದಂಬರಿಯಂತೆ ಓದಿಸಿಕೊಂಡು ಹೋದುದು ಅದರ ಭಾಷಾ ಶೈಲಿಯ ಭಾವಪೂರ್ಣತೆಯೊಂದಿಗೆ. ಅದರೊಳಗಿನ ಮುಖ್ಯ ಕೇಂದ್ರವಾಗಿದ್ದ ಹೆಣ್ಣೊಬ್ಬಳ ಜೀವನದ ಅನಾವರಣ ಅಂದರೆ ಶಕುವಕ್ಕನ ವ್ಯಕ್ತಿತ್ವದ ಅನಾವರಣ. ಹಾಗೆಯೇ ನಾನು ಓದುತ್ತಿದ್ದುದು ಹೇಗೆಂದರೆ ದಮ್ಮು ಕಟ್ಟಿ (ಉಸಿರು ಬಿಗಿ ಹಿಡಿದು) ಪುಸ್ತಕದ ನಾಯಕಿ ಶಕು ಅಕ್ಕ ನಿಟ್ಟುಸಿರು ಬಿಟ್ಟು ಒಂದೊಂದು ಘಟನೆಯೂ ಏನೂ ಅಲ್ಲ ಎಂಬಂತೆ ಕೊನೆಗೊಳಿಸುವಾಗ ನಾನೂ ನಿಟ್ಟುಸಿರುಬಿಟ್ಟು ನಿರಾಳವಾಗುತ್ತಿದ್ದೆ. ಶಕು ಅಕ್ಕ ನಮ್ಮ ಜತೆ ಇದ್ದಾರೆ ಎನ್ನುವುದನ್ನು ಮರೆತು ಅಯ್ಯೋ ಮುಂದೇನಾಗುತ್ತದೋ ಎಂಬ ಆತಂಕ ಮನದೊಳಗೆ ಇದ್ದಂತೆಯೇ ಒಳ್ಳೇ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು, ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ‌

ಪೇಟೆಯ ಹುಡುಗಿಯಾಗಿದ್ದರೂ ಹಳ್ಳಿಯ ಜೀವನದೊಂದಿಗೆ ಹಳ್ಳಿಯ ಮಂದಿಯೊಂದಿಗೆ ಬೆರೆತಿರುವುದು ಅವರು ಹುಟ್ಟಿದ ಕುಟುಂಬದವರಲ್ಲಿದ್ದ ಮನುಷ್ಯರ ಬಗೆಗಿನ ರುಚಿ (ಪ್ರೀತಿ). ಇದು ನನ್ನ ಅನುಭವದ ಸತ್ಯವೂ ಹೌದು. ಜತೆಗೆ ಶಕು ಅಕ್ಕನ ತಿಳುವಳಿಕೆಯ ಒಂದು ಮಾತು. ವಿದ್ಯಾವಂತರು, ಅಕ್ಷರಸ್ಥರು ಎನ್ನುವ ಮಂದಿಗಿಂತ ಓದು ಬರಹ ಇಲ್ಲದ ಮಂದಿಯ ಮುಗ್ಧತೆ, ಸರಳತೆ, ಜೀವನಪ್ರೀತಿ, ಮನುಷ್ಯ ವಿಶ್ವಾಸ ನಿಜವಾಗಿಯೂ ಸತ್ಯವಾದುದು ಎಂಬ ಅಭಿಪ್ರಾಯಕ್ಕೆ ನನ್ನದೂ ಒಂದು ಮಾತು ಹಾಕುತ್ತೇನೆ. ಜೊತೆಗೆ ಶಕು ಅಕ್ಕನಿಗೆ ಅತಿವಿನಯ ಮತ್ತು ವಿನಯದ ನಡುವಿನ ಅಂತರ ಚೆನ್ನಾಗಿ ತಿಳಿದಿದೆ. ಅವರ ಸಾತ್ವಿಕ ಧೈರ್ಯ ಸಾಮರ್ಥ್ಯ ಗಳಿಗೆ ಇತರರು ಹೆದರುತ್ತಿರುವುದೂ ಸತ್ಯ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಇಲ್ಲಿ ಇವೆ. ಇನ್ನೂ ಅನೇಕವಿರಬಹುದು. ಅವರೇ ಹೇಳುವಂತೆ ಅದನ್ನೆಲ್ಲಾ ಎಷ್ಟೂಂತ ದಾಖಲಿಸುವುದು?  ಹಾಗೆಯೇ ಅಂತರ ಕಾಪಾಡಿಕೊಳ್ಳುವ ವಿವೇಕವೂ ಇದೆ.

ಶಕ್ಕು ಅಕ್ಕನ ಸಮಾಜ ಸೇವೆ ಎಂದರೆ ತನ್ನಂತೆ ಪರರನ್ನು ಭಾವಿಸುವ ಗುಣ. ಆದ್ದರಿಂದಲೇ ಅವರ ಈ ಉಪಕಾರ ಮನೋಭಾವ ರಾಜಕಾರಣದಲ್ಲಿ ರಾಜಕೀಯವಾಗದೆ, ಅವರು ಎಲ್ಲರ ಶಕು ಅಕ್ಕವಾದುದು. ಜತೆಗೆ ಜಾತಿಯ ಠೀವಿ, ಅಹಂಕಾರಗಳೂ ಇಲ್ಲದ ಮಾನುಷಿಯಾದ್ದರಿಂದಲೇ ಶಾಸಕಿಯಾದರೂ ಆ ಅಹಂ ಅವರ ತಲೆಗೇರಲಿಲ್ಲ. ಹೀಗೆಂದ ಮಾತ್ರಕ್ಕೆ ರಾಜಕೀಯದಲ್ಲಿ ಓಲೈಸುವಿಕೆ ಇದೆ ಎಂದು ಹಲವಾರು ಮಹಿಳಾ ಮಣಿಗಳು ಹೇಳುವುದನ್ನೂ, ಸಾರ್ವಜನಿಕವಾಗಿ ಮಾಡುವುದನ್ನು ಕಂಡಿರುವ ನಮಗೆ ಶಕುಅಕ್ಕ ಯಾರನ್ನೂ ಓಲೈಸದೆಯೇ, ಅವರ ಪ್ರೀತಿಗೆ ಉಳಿದವರು ಮಣಿಯುವುದನ್ನು, ನ್ಯಾಯಪರತೆಗೆ ತಲೆಬಾಗುವುದನ್ನು ನಾವು ಕಾಣುತ್ತೇವೆ. ಅವರು ಮನುಷ್ಯರ ಸ್ವಭಾವವನ್ನು ಅರ್ಥೈಸಿಕೊಳ್ಳುವಲ್ಲಿ ಕಿವಿ ಹಿತ್ತಾಳೆಯವರಲ್ಲ. ಕಣ್ಣಾರೆ ಕಂಡರೂ ಪರಾಂಬರಿಸುವ ವಿವೇಕ ಉಳ್ಳವರು. ಹಾಗೆಯೇ ಯಾರ ಹಂಗಿಗೂ ಒಳಗಾಗದೆ ಬದುಕಬೇಕೆನ್ನುವ ಛಲ ಉಳ್ಳವರೂ ಹೌದು.

5-11-2026 ರಂದು ಮಂಗಳೂರಿನಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಶಕುಂತಳಾ ಟಿ ಶೆಟ್ಟಿ

ಅನೇಕ ಸಾಮಾಜಿಕ ದುರಂತಗಳ ಹಿನ್ನೆಲೆಯಲ್ಲಿ ಶಕು ಅಕ್ಕ ಹೇಳುವ ಈ ಮಾತುಗಳು, “ಜೀವನವೆಂಬ ಯುದ್ಧ ಭೂಮಿಯಲ್ಲಿ ತಪ್ಪುಗಳು ನಡೆಯುತ್ತಲೇ ಇರುತ್ತವೆ. ಈ ತಪ್ಪುಗಳನ್ನು ತಿದ್ದಿಕೊಳ್ಳುವ ವಿವೇಕ ಮತ್ತು ಆತ್ಮಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೇ.’’ ಶಕು ಅಕ್ಕನಲ್ಲಿ ಇವೆರಡೂ ಇರುವುದೇ ಅವರ ಜೀವನ ಸಾಧನೆಯ ಏಣಿಯ ಎರಡು ಹಿಡಿಗಳು. ಉಪಕಾರ ಮಾಡಿದವರನ್ನು ಮರೆತು ಬಿಡುವ ಇಂದಿನವರಿಗಿಂತ ಭಿನ್ನ ನಮ್ಮ ಶಕುವಕ್ಕ. ಏರಿದ ಏಣಿಯನ್ನೇ ದೂಡುವ ಈ ಕಾಲದಲ್ಲಿ ಶಕುವಕ್ಕನಿಗೆ ತಾನು ಎಷ್ಟು ಜನಪ್ರಿಯಳಾದರೂ ತನಗೆ ಮಾಡಿದ ಸಣ್ಣ ಸಣ್ಣ ಉಪಕಾರ ಮಾಡಿದವರು, ಉಳಿದವರಿಗೆ ಸಣ್ಣವರು ಅನ್ನಿಸಿದವರನ್ನೂ ಮರೆಯದ ಕೃತಜ್ಞತಾಭಾವ. ಆದ್ದರಿಂದ ಪಟೇಲರ ಮಗಳಾದರೂ, ಮಾಸ್ಟ್ರ ಹೆಂಡತಿಯಾದರೂ, ಎಲ್ಲರಿಗೂ ಶಕು ಅಕ್ಕನಾಗಲು ಸಾಧ್ಯವಾದುದು. ಇಂತಹ ಇವರ ಜನಪ್ರಿಯತೆಯನ್ನು ಒಂದು ರಾಜಕೀಯ ಪಕ್ಷ ಉಪಾಯವಾಗಿ ಬಳಸಿಕೊಂಡಿತು ಎಂದರೆ ಅದು ಹೆಚ್ಚು ಸರಿ.

ಆ ಪಕ್ಷವು ಸ್ವಂತಿಕೆ ಇದ್ದವರನ್ನು ಇಟ್ಟುಕೊಳ್ಳುವುದಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಶಕುವಕ್ಕನೇ. ಆದ್ದರಿಂದಲೇ ಧರ್ಮಾತೀತವಾಗಿ, ಜಾತ್ಯಾತೀತವಾಗಿ ಕೇವಲ ಸ್ತ್ರೀವಾದಿ, ಮಾನವತಾವಾದಿಯಾದ ಶಕುವಕ್ಕ `ನೆರೆಕರೆ, ಬಂಧುತ್ವ ಬಿಡಲಾರೆನು, ರಾಜಕೀಯ ಬಿಟ್ಟೇನೂ’ ಎನ್ನುವ ಮಾತು ಹೇಳುವ ಸತ್ಯದೊಂದಿಗೆ ಒಂದು ರಾಜಕೀಯ ಪಕ್ಷದ ಮೂಲಭೂತ ಸಿದ್ಧಾಂತವು ದ್ವೇಷ, ಅಸೂಯೆ, ಸೇಡು ಎನ್ನುವುದೂ ಕೂಡಾ ತಿಳಿಯುತ್ತದೆ. ಜತೆಗೆ ಕಾರ್ಯಕರ್ತರು ನಾಯಕರನ್ನು ಹಿಡಿತದಲ್ಲಿಡಲು ಪ್ರಯತ್ನಿಸುತ್ತಾರೆ ಎನ್ನುವಾಗ, ರಾಜಕೀಯದ ಒಳ ಸುಳಿಗಳ ಪರಿಚಯ ನಿಚ್ಚಳವಾಗಿ ಇಲ್ಲಿ ಕಾಣುತ್ತದೆ.

ಹೆಣ್ಣಿಗೆ ಇಂದಿಗೂ ಈ ಕಾಲದಲ್ಲೂ ಬದುಕು ಮುಚ್ಚಿದ ಕದವೇ ಆಗಿ ಉಳಿಯುವ ಸಂದರ್ಭಗಳಿರುವಾಗ ಆ ಕದಗಳನ್ನು ತಾನಾಗಿ ತೆರೆದೆನೋ ಅಥವಾ ಅವುಗಳೇ ತೆರೆಯಲ್ಪಟ್ಟಿತೋ ಎನ್ನುವ ಜೀವನ ಮೀಮಾಂಸೆಯಲ್ಲಿ ಶಕು ಅಕ್ಕನ ಖಾಸಗಿ ಬದುಕು, ಸಾರ್ವಜನಿಕ ಬದುಕು ಮತ್ತು ರಾಜಕೀಯ ಬದುಕು ಒಂದನ್ನೊಂದು ಬೆಸೆದುಕೊಂಡಿರುವುದು ಸಹಜವಾದರೂ ಅಪೂರ್ವವಾದುದು. ಪ್ರತಿಯೊಂದನ್ನೂ ಇದು ನನ್ನ ಬದುಕು ಮತ್ತು ಪರರಿಗಾಗಿಯೇ ಇರುವ ಬದುಕು ಎಂಬುದನ್ನು ಪ್ರಾಮಾಣಿಕವಾಗಿ ಬದುಕಿ ಬಾಳಿದ ಶಕುಂತಳಾ ಟಿ. ಶೆಟ್ಟಿ ಅವರ `ಚಿತ್ತ ಭಿತ್ತಿಯ ಪತ್ತಾಯ’ ಅವರು ಎಲ್ಲರಿಗೂ ಶಕು ಅಕ್ಕನಾದುದು, ಮಾತ್ರವಲ್ಲ ನಮ್ಮ ಕಾಲದ ನಮ್ಮ ಜಿಲ್ಲೆಯ ಮಹಿಳಾ ರಾಜಕೀಯ ಮುತ್ಸದ್ದಿ ಎಂದು ಹೇಳುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಅವರ ಸಾಮಾಜಿಕ ಸೇವೆ ಇನ್ನು ಮುಂದೆಯೂ ನಡೆಯುತ್ತಾ ಸಂತಸ, ನೆಮ್ಮದಿಯಲ್ಲಿರುವಂತೆ ಅವರಿಗೆ ಆರೋಗ್ಯ ಆಯುಷ್ಯಗಳು ಜನರ ಆಶೀರ್ವಾದದಿಂದ ದೊರೆಯುತ್ತಿರಲಿ ಎಂದು ಹಾರೈಸುತ್ತೇನೆ.

ಚಂದ್ರಕಲಾ ನಂದಾವರ
ಹಿರಿಯ ಲೇಖಕಿ, ಕವಯಿತ್ರಿ, ಶಿಕ್ಷಣ ತಜ್ಞೆ ಮತ್ತು ಸಂಘಟಕಿ, ಮಂಗಳೂರು.

ಇದನ್ನೂ ಓದಿ- ಗಾಂಧಿ ತತ್ತ್ವದ ಪ್ರಸ್ತುತತೆ ತಿಳಿಸಿದ ʼಮಸಿʼ ಪ್ರಕರಣ

More articles

Latest article

Most read