ಅಮೆರಿಕ ಸೆನೆಟ್‌ನಲ್ಲಿ ಮೊದಲ ಮುಸ್ಲಿಂ ನಾಯಕ ಅಬ್ದುಲ್ ರಹಮಾನ್ ಮೊಹಮ್ಮದ್ ಎಲ್-ಸಯೀದ್ ; ಕರ್ನಾಟಕದ ನಂಟು ಏನು?

ಬೆಂಗಳೂರು: ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾಗಿರುವ ಪ್ರಗತಿಪರ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ರಹಮಾನ್ ಮೊಹಮ್ಮದ್ ಎಲ್-ಸಯೀದ್ (42) ಅವರಿಗೆ ಕರ್ನಾಟಕದೊಂದಿಗೆ ವಿಶೇಷ ನಂಟಿದೆ. ಅವರ ಪತ್ನಿ, ಮನೋವೈದ್ಯೆ ಡಾ. ಸಾರಾ ಜುಕಾಕು ಅವರ ಮೂಲ ಕರ್ನಾಟಕದ ಕರಾವಳಿ ಜಿಲ್ಲೆಯ ಭಟ್ಕಳದಲ್ಲಿದೆ ಎಂಬುದು ವಿಶೇಷ.

ಸಮುದ್ರಯಾನ, ವ್ಯಾಪಾರ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿರುವ ಭಟ್ಕಳದೊಂದಿಗೆ ಈ ಕುಟುಂಬ ಹಲವು ತಲೆಮಾರುಗಳಿಂದ ಸಂಬಂಧ ಹೊಂದಿದೆ. ಸಾರಾ ಅವರ ತಂದೆ ಡಾ. ಜುಕಾಕು ತಯೇಬ್ ಅವರು ಭಟ್ಕಳದಲ್ಲೇ ಹುಟ್ಟಿ ಬೆಳೆದು, 1976ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಅಮೆರಿಕಕ್ಕೆ ವಲಸೆ ಹೋಗಿದ್ದರು. ಸಾರಾ ಅವರ ಅಜ್ಜ ಜುಕಾಕು ಶಮ್ಸುದ್ದೀನ್ ಅವರು ಅಂದಿನ ಬಿ.ಡಿ. ಜತ್ತಿ ಸರ್ಕಾರದಲ್ಲಿ ಉಪ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಈಜಿಪ್ಟ್ ಮೂಲದ ಅಬ್ದುಲ್ ಎಲ್-ಸಯೀದ್ ಅವರು ಮಿಚಿಗನ್‌ನ ಖಾಲಿ ಇದ್ದ ಅಮೆರಿಕ ಸೆನೆಟ್ ಸ್ಥಾನಕ್ಕಾಗಿ ನಡೆದ ತೀವ್ರ ಪೈಪೋಟಿಯಲ್ಲಿ ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಬುಧವಾರ ಮುಂಜಾನೆ ಪ್ರಕಟವಾದ ಫಲಿತಾಂಶದೊಂದಿಗೆ ಅಮೆರಿಕದ ಇತಿಹಾಸದಲ್ಲಿ ಸೆನೆಟರ್ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಅಬ್ದುಲ್ ಗೆಲುವಿಗಾಗಿ ಭಟ್ಕಳದಲ್ಲಿ ಪ್ರಾರ್ಥನೆ!

ಅಬ್ದುಲ್ ಅವರ ಗೆಲುವಿಗಾಗಿ ಭಾರತದಲ್ಲಿರುವ ಕುಟುಂಬಸ್ಥರು, ಸಂಬಂಧಿಕರು ಹಾಗೂ ಹಿತೈಷಿಗಳು ಇಡೀ ರಾತ್ರಿ ಪ್ರಾರ್ಥನೆ ಸಲ್ಲಿಸಿದ್ದರು ಎಂದು ಸಾರಾ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

“ಮಂಗಳವಾರ ರಾತ್ರಿ ಭಾರತದಲ್ಲಿದ್ದ ನಾವೆಲ್ಲರೂ ಅಬ್ದುಲ್ ಗೆಲುವಿಗಾಗಿ ಪ್ರಾರ್ಥಿಸಿದ್ದೆವು. ಕೇವಲ ಕುಟುಂಬದವರಷ್ಟೇ ಅಲ್ಲ, ಭಟ್ಕಳದ ಜನರು ಹಾಗೂ ದೇಶದ ವಿವಿಧ ಭಾಗಗಳಲ್ಲಿರುವ ಹಿತೈಷಿಗಳೂ ಅವರ ಗೆಲುವಿಗಾಗಿ ಹಾರೈಸಿದ್ದರು. ಸ್ಪರ್ಧೆ ಕಠಿಣವಾಗಿದ್ದರೂ ಕೊನೆಗೂ ಅವರು ಗೆಲುವು ಸಾಧಿಸಿದ್ದಾರೆ” ಎಂದು ಬೆಂಗಳೂರಿನಲ್ಲಿರುವ ಸಾರಾ ಅವರ ಸಂಬಂಧಿ ತಿಳಿಸಿದ್ದಾರೆ.

“ಸಾರಾ ನನ್ನ ಸೋದರ ಸಂಬಂಧಿ. ಅವರ ತಂದೆ ಮತ್ತು ನನ್ನ ತಂದೆ ಸಹೋದರರು. ಚುನಾವಣೆಯ ಹಿಂದಿನ ದಿನ ಸಾರಾ ಅವರ ತಂದೆ ಕುಟುಂಬದ ವಾಟ್ಸಾಪ್ ಗ್ರೂಪ್‌ಗೆ ಸಂದೇಶ ಕಳುಹಿಸಿ ಅಬ್ದುಲ್ ಗೆಲುವಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು. ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವುದು ಮತ್ತು ಚುನಾವಣಾ ರಾಜಕೀಯದಿಂದ ಹಣದ ಪ್ರಭಾವವನ್ನು ದೂರ ಮಾಡುವುದು ಅಬ್ದುಲ್ ಅವರ ಪ್ರಮುಖ ಆದ್ಯತೆಗಳಾಗಿವೆ. ಅವರು ಪಾರದರ್ಶಕ ವ್ಯಕ್ತಿ, ಭ್ರಷ್ಟಾಚಾರದಿಂದ ದೂರವಿದ್ದು, ಸತ್ಯವನ್ನು ಹೇಳುವ ಧೈರ್ಯ ಹೊಂದಿದ್ದಾರೆ. ಅವರ ಗೆಲುವಿನಿಂದ ನಮಗೆಲ್ಲರಿಗೂ ಅಪಾರ ಸಂತೋಷ ಮತ್ತು ಹೆಮ್ಮೆ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.

ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಅರಳಿದ ಪ್ರೀತಿ

ಸಾರಾ ಮತ್ತು ಅಬ್ದುಲ್ ಅವರ ಪರಿಚಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಆಗಿತ್ತು. ಸಾರಾ ಅವರಿಗೆ 19 ವರ್ಷ ವಯಸ್ಸಾಗಿದ್ದಾಗಲೇ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಅಬ್ದುಲ್ ಅವರು ಮಿಚಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪ್ರತಿಷ್ಠಿತ ರೋಡ್ಸ್ ವಿದ್ಯಾರ್ಥಿವೇತನ ಪಡೆದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದರು. ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನೂ ಪಡೆದಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಅಬ್ದುಲ್, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದಾದರು. ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಸಾಮಾನ್ಯ ಜನರಿಗೆ ಕೈಗೆಟುಕದಂತಾಗಿದೆ ಎಂಬುದನ್ನು ಅವರು ಅರಿತುಕೊಂಡರು. ಅಲ್ಲಿ ರೋಗ ಗುಣಪಡಿಸುವುದಕ್ಕಿಂತ ಬಿಲ್ಲಿಂಗ್ ಮತ್ತು ಹಣ ವಸೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಿತ್ತು.

ಈ ವ್ಯವಸ್ಥೆಯನ್ನು ಸುಧಾರಿಸಿ, ಎಲ್ಲರಿಗೂ ಕೈಗೆಟುಕುವ ಹಾಗೂ ಸಮಾನ ಆರೋಗ್ಯ ಸೇವೆ ಒದಗಿಸಬೇಕಾದರೆ ರಾಜಕೀಯ ಪ್ರವೇಶ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು.

ಚುನಾವಣಾ ಪ್ರಚಾರದ ವೇಳೆ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದ ‘ಮೆಡಿಕೇರ್ ಫಾರ್ ಆಲ್’ ಯೋಜನೆಯನ್ನು ಅವರು ಪ್ರಮುಖವಾಗಿ ಪ್ರತಿಪಾದಿಸಿದ್ದರು ಎಂದು ಸಾರಾ ಅವರ ಸಂಬಂಧಿ ತಿಳಿಸಿದ್ದಾರೆ.

2018ರಲ್ಲಿ ರಾಜಕೀಯ ಪ್ರವೇಶ

ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರಾಗಿರುವ ಅಬ್ದುಲ್ ಅವರು 2018ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅದೇ ವರ್ಷ ನಡೆದ ರಾಜ್ಯಪಾಲರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಸೆನೆಟ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಭಟ್ಕಳದೊಂದಿಗೆ ಇಂದಿಗೂ ಕುಟುಂಬದ ನಂಟು

ಸಾರಾ ಅವರ ತಂದೆ ಕುಟುಂಬದ ಸದಸ್ಯರು ತಮ್ಮ ಮೂಲ ಊರಿನೊಂದಿಗೆ ಸಂಪರ್ಕ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಆಗಾಗ ಭಟ್ಕಳದಲ್ಲಿ ಕುಟುಂಬದ ಸಭೆಗಳನ್ನು ಆಯೋಜಿಸುತ್ತಿದ್ದರು.

“ಕುಟುಂಬದ ಎಲ್ಲರೂ ತಮ್ಮ ಬೇರುಗಳನ್ನು ಮರೆಯಬಾರದು ಎಂಬುದು ಸಾರಾ ಅವರ ತಂದೆಯ ಆಶಯವಾಗಿತ್ತು. ಆದರೆ ಸಂಬಂಧಿಕರೊಬ್ಬರ ಮದುವೆಗಾಗಿ ಭಟ್ಕಳಕ್ಕೆ ಬಂದ ನಂತರ ಸಾರಾ ಭಾರತಕ್ಕೆ ಬಂದು ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಆದರೂ ಕುಟುಂಬದ ಕರ್ನಾಟಕದ ನಂಟು ಮುಂದುವರಿದಿದೆ. ಭಟ್ಕಳ ಮತ್ತು ಬೆಂಗಳೂರಿನಲ್ಲಿ ಅವರಿಗೆ ಮನೆಗಳಿವೆ” ಎಂದು ಸಂಬಂಧಿ ಮಾಹಿತಿ ನೀಡಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದವರ ಸಾಧನೆ

ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಲ್ವರು ಹಾಲಿ ಸಂಸದರು ಮತ್ತೆ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ಫ್ಲೋರಿಡಾದಲ್ಲಿ ಹೊಸ ಮುಖ ಪಿಯಾ ದಾಂಡಿಯಾ ಗೆಲುವು ಸಾಧಿಸಿದ್ದಾರೆ. ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಅರುಣಾ ಮಿಲ್ಲರ್ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಗಳಿಗೂ ಕೆಲವು ಹಿನ್ನಡೆಗಳು ಎದುರಾಗಿವೆ. ಓಹಿಯೋ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿವೇಕ್ ರಾಮಸ್ವಾಮಿ ಸೋಲು ಅನುಭವಿಸಿದ್ದಾರೆ.

ಒಟ್ಟಾರೆ, ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಭಾರತೀಯ ಮೂಲದ ರಾಜಕೀಯ ನಾಯಕರ ಸಾಧನೆ ಮತ್ತು ಅಬ್ದುಲ್ ಎಲ್-ಸಯೀದ್ ಅವರ ಐತಿಹಾಸಿಕ ಗೆಲುವು ವಿಶೇಷ ಗಮನ ಸೆಳೆದಿದೆ.

More articles

Latest article

Most read