ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ : ಭಾವಚಿತ್ರ ದಹಿಸಿದ ಶಿವಮೊಗ್ಗ ಕಾಂಗ್ರೆಸ್ ಕಾರ್ಯಕರ್ತರು!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಏಕವಚನದಲ್ಲಿ ನಿಂದಿಸಿದ್ದ ಅಅನಂತಕುಮಾರ್ ಹೆಗಡೆಯ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಗರದ ಮಹಾವೀರ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಸಂಸದ ಅನಂತಕುಮಾರ್ ಹೆಗಡೆ ಅವರ ಪ್ರತಿಕೃತಿ ದಹಿಸಿದರು

ಪ್ರತಿಭಟನೆಯಲ್ಲಿ ಮಾತಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್, “ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತಕುಮಾರ್ ಹೆಗಡೆ ಬಚ್ಚಾ. ಕಾಂಗ್ರೆಸ್ ಕಾರ್ಯಕರ್ತರು ಮನಸ್ಸು ಮಾಡಿದರೆ ಅವರು ಓಡಾಡಲು ಆಗುವುದಿಲ್ಲ. ಹೆಗಡೆ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಾ ಜನರಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರ ಕುಟುಂಬಸ್ಥರಾಗಲೀ ಅಥವಾ ಈಶ್ವರಪ್ಪನವರ ಕುಟುಂಬದವರಾಗಲೀ ಎಂದೂ ಹೋರಾಟಕ್ಕೆ ಇಳಿದವರಲ್ಲ. ದಲಿತ ಹಿಂದುಳಿದ ಯುವಕರ ಕೈಯಲ್ಲಿ ಮಚ್ಚುಲಾಂಗು ಹಿಡಿಯುವಂತೆ ಪ್ರಚೋದಿಸಿ ಅವರ ಹತ್ಯೆ ಆದರೆ, ಅದರಿಂದ ರಾಜಕೀಯ ಲಾಭ ಪಡೆಯುವ ದುರುದ್ದೇಶ ಸಂಸದರ ಹೇಳಿಕೆಯಲ್ಲಿದೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎನ್ ರಮೇಶ್, ಎಸ್ ಪಿ ಶೇಷಾದ್ರಿ, ಎಸ್ ಟಿ ಚಂದ್ರಶೇಖರ್, ಚಂದ್ರಭೂಪಾಲ್, ಕೆ ರಂಗನಾಥ್, ಕಲೀಂ ಪಾಶ, ಶಿವಕುಮಾರ್, ಜಿ.ಡಿ.ಮಂಜುನಾಥ್, ಹೆಚ್ ಬಿ ಗಿರೀಶ್, ಮಧು, ಆಸೀಫ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ನಯಾಜ್ ಅಹಮದ್, ರವಿಕುಮಾರ್, ನಾಜಿಮಾ, ಪ್ರೇಮಾ, ಎನ್ ಡಿ ಪ್ರವೀಣ್ ಕುಮಾರ್, ಸ್ಟೆಲ್ ಮಾರ್ಟಿನ್ ಭಾಗವಹಿಸಿದ್ದರು.

More articles

Latest article

Most read