Saturday, September 14, 2024

ಅನಂತಕುಮಾರ್ ಹೆಗಡೆ ಅವರೇ ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ : ಶಾಸಕ ಬೇಳೂರು ಗೋಪಾಲಕೃಷ್ಣ

Most read

ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ. ಬೇಳೂರಿಗೆ ಕೆಟ್ಟದಾಗಿ ಬೈಯುವುದು ಹೇಳಿಕೊಡುವುದು ಬೇಡ ಎಂದು ಅನಂತಕುಮಾರ್ ಹೆಗಡೆ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಿರುಗೇಟು ನೀಡಿದ್ದಾರೆ.

ಸಿಎಂ ವಿರುದ್ಧ ಅನಂತಕುಮಾರ್ ಏಕವಚನ ಪದಬಳಕೆ ವಿಚಾರಕ್ಕೆ ಸಾಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಅನಂತಕುಮಾರ್ ಹೆಗಡೆ ಆರೋಗ್ಯದಲ್ಲಿ ಸ್ವಲ್ಪ ಸರಿ ಇಲ್ಲ. ಹೀಗಾಗಿ ನಾನು ಏನೂ ಮಾತನಾಡಲ್ಲ. ಅವರಿಗೆ ಮಾನಸಿಕವಾಗಿ ಏನಾಗಿದೆ ಗೊತ್ತಿಲ್ಲ. ಮುಂಚಿನಿಂದ ಫೈರ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡವರು. ಗೊಂದಲ ಮಾಡುವುದು, ಗೊಂದಲ ಸೃಷ್ಟಿಸುವುದು ಅವರ ಗುಣ ಎಂದು ಹೇಳಿದ್ದಾರೆ.

ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ. ಬೇಳೂರಿಗೆ ಕೆಟ್ಟದಾಗಿ ಬೈಯುವುದು ಹೇಳಿಕೊಡುವುದು ಬೇಡ. ಸಿಎಂ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚಿಸಬೇಕು. ಬಿಜೆಪಿಯವರ ಸ್ವಾಭಿಮಾನ ತತ್ವ ಸಂಸ್ಕೃತಿ ಎಲ್ಲಿ ಹೋಯಿತು. ಈ ರೀತಿ ಮಾತನಾಡುವುದು ತಪ್ಪು ಕಿಡಿಕಾರಿದ್ದಾರೆ.

More articles

Latest article