ಮಹಿಳಾದಿನ- ಒಂದು ಆತ್ಮಾವಲೋಕನ

ಮಹಿಳೆ ಅಂದರೆ ಅಲ್ಲಿ ಯಾವುದೇ ಜಾತಿ ಧರ್ಮ ಕಪ್ಪು ಬಿಳಿ ಅನ್ನೋ ತಾರತಮ್ಯ ಇರಬಾರದು. ಕೇವಲ ಮಹಿಳೆ ಅನ್ನೋ ಮನೋಭಾವದಿಂದ ಒಗ್ಗಟ್ಟಾಗಿ ನಡೆಯುವಂತಹ ಸ್ತ್ರೀವಾದ ಪ್ರಸ್ತುತ ದಿನಮಾನಗಳಲ್ಲಿ ಮುಖ್ಯವಾಗಿದೆ – ಸುವರ್ಣಕೆ.ಟಿ.ಶಿವಪ್ರಸಾದ್

ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ

ಹಸಿರನುಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯನಿಳಿಸಿ
ಬಯಲ ಹಸಿರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮರಗಿಡಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ

ಜಿ.ಎಸ್. ಶಿವರುದ್ರಪ್ಪ ಅವರ ಈ ಪ್ರಸಿದ್ಧ ಭಾವಗೀತೆಯ ಸಾಲುಗಳು ಹೆಣ್ಣಿನ ಶಕ್ತಿ ಪ್ರೀತಿ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ, ತಾಯಿ, ಮಗಳು ಪತ್ನಿಯಾಗಿ ಮನೆಗೆ ದೀಪವಾಗಿ ಪ್ರಕೃತಿಯಂತೆ ವಾತ್ಸಲ್ಯತೋರುವ ಅವಳಿಗೆ ಬೇರೆ ಯಾವ ಬಿರುದುಗಳೂ ಬೇಕಿಲ್ಲ. ನಾನು ಇಲ್ಲಿ ಯಾಕೆ ಈ ಕವನವನ್ನು ಎಲ್ಲರಿಗೂ ನೆನಪಿಸಿದೆ ಎಂದರೆ ಮತ್ತೆ ಬಂದಿದೆ ಮಹಿಳಾ ದಿನ. ಈ ದಿನ ಎಲ್ಲಾ ಮಹಿಳೆಯರು ಒಟ್ಟುಗೂಡಿ ಕೆಲ ಸಮಯ ಆತ್ಮಾವಲೋಕನ  ಮಾಡಿಕೊಳ್ಳುವ ದಿನ ಎಂದರೆ ತಪ್ಪಾಗಲಾರದು.

    ಸಂವಿಧಾನ ಕತೃ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಸಂವಿಧಾನದಲ್ಲಿ ಕಲ್ಪಿಸಿರುವ  ಎಲ್ಲಾ ರೀತಿಯ ಹಕ್ಕುಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಧ್ವನಿಕೊಟ್ಟಿದೆ. ಆ ಹಕ್ಕುಗಳಿಗಾಗಿ ಮಹಿಳಾ ಹೋರಾಟಗಾರ್ತಿಯರು ಹೋರಾಟ ನಡೆಸಿದ ಫಲವಾಗಿ ನಾವಿಂದು ಅಸಮಾನತೆ, ತಾರತಮ್ಯದಿಂದ ಸ್ವಲ್ಪಮಟ್ಟಿಗೆ ದೂರವಾಗಿ ಸಮಾನತೆಯತ್ತ ದಾಪುಗಾಲು ಇಡುತ್ತಿದ್ದೇವೆ ಅನ್ನೋದು ಅಲ್ಪಪ್ರಮಾಣದಲ್ಲಿ ಸಮಾಧಾನ ತಂದಿದೆ ಎನ್ನಬಹುದು. ಒಂದು ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನ ಹಕ್ಕುಗಳನ್ನು ಮಹಿಳೆಯರಿಗೆ ನೀಡಿರದಿದ್ದರೆ ಸಮಾಜದಲ್ಲಿ ಮಹಿಳೆ ಸಬಲಳಾಗಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬ ಮಹಿಳೆ ಅಂಬೇಡ್ಕರ್ ಅವರಿಗೆ ಸಲಾಂ ಹೇಳಲೇ ಬೇಕು. ಮಹಿಳೆಗೆ ಮತದಾನದ ಹಕ್ಕು ಕೊಡದಿದ್ದರೆ ಅವಳು ಗ್ರಾಮಪಂಚಾಯತಿ ಸದಸ್ಯೆಯಿಂದ ಪ್ರಧಾನಿ ಹುದ್ದೆಯ ವರೆಗೆ ತನ್ನ ಅಧಿಕಾರ ಚಲಾಯಿಸಲು ಆಗುತ್ತಿರಲಿಲ್ಲ. ಆಸ್ತಿಯ ಹಕ್ಕು ಕೊಡದಿದ್ದರೆ ಅವಳು ಯಾವುದೇ ಭೂಮಿ, ಮನೆಯ ಒಡತಿಯಾಗಲು ಸಾಧ್ಯವಾಗುತ್ತಿರಲಿಲ್ಲ

     ಪ್ರಸ್ತುತ ದಿನಗಳಲ್ಲಿ  ಮಹಿಳೆ ಪುರುಷರದ್ದೇ ಸಾಮ್ರಾಜ್ಯವೆನಿಸಿಕೊಂಡಿದ್ದ ಎಂಜಿನಿಯರಿಂಗ್, ರಕ್ಷಣೆ, ವಾಹನಚಾಲನೆ, ವಿಮಾನ ಚಾಲನೆ ಸಮೂಹ ಮಾಧ್ಯಮ, ಛಾಯಾಚಿತ್ರಗ್ರಹಣ, ಸಾಹಸಕ್ರೀಡೆಗಳು ಮತ್ತಿತರ ಹಲವಾರು ಕ್ಷೇತ್ರಗಳಲ್ಲಿ ಕಾಲಿಟ್ಟಿದ್ದರೂ ಅವರಿಗೆ ಸುರಕ್ಷಿತ ಕೆಲಸದ ವಾತಾವರಣ ಸಿಗುತ್ತಿಲ್ಲ  ಲಿಂಗಭೇದ ನಮ್ಮ ದೇಶದಲ್ಲಿ ಪ್ರಚಲಿತವಾಗಿದ್ದು ಪ್ರತಿನಿತ್ಯ ಮಹಿಳೆಯರ ಮುಂದೆ ಹಲವಾರು ಹೊಸ ಸವಾಲುಗಳನ್ನು ಮುಂದಿಡುತ್ತಿದೆ. ಮಹಿಳಾ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಹೋರಾಟ ಅಗತ್ಯ ಇದೆ ಎಂದರೂ ಯಾವ ಸೈದ್ಧಾಂತಿಕ ನೆಲೆಯ ತಳಹದಿಯಲ್ಲಿ ಮಹಿಳೆಯರು, ಮಹಿಳಾಪರ ಚಿಂತಕಿಯರು ತಮ್ಮ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯ ಬೇಕು ಅನ್ನೋ ಗೊಂದಲದಲ್ಲಿ ಇದ್ದಾರೆ ಅನಿಸುತ್ತಿದೆ. ಯಾಕೆಂದರೆ ನಾನು ಇತ್ತೀಚೆಗೆ ಒಂದು ಮಹಿಳಾ ವಿಚಾರ ಸಂಕಿರಣಕ್ಕೆ ಹೋದಾಗ ಕೆಲವು ಸ್ತ್ರೀವಾದಿಗಳು ತಮ್ಮ ವಾದವನ್ನು ಮಂಡಿಸುತ್ತಿದ್ದಾಗ ಅವರ ವಾದ ಪ್ರಸ್ತುತ ದಿನಕ್ಕೆ ಎಷ್ಟು ಸೂಕ್ತ ಎನಿಸಿತು.

ಸ್ತ್ರೀವಾದಿಗಳು ಅಲ್ಲಿ ಮಂಡಿಸಿದ ವಾದ ಯಾವುದು ಎಂದರೆ ಆಧುನಿಕ ಮಹಿಳೆ ಪುರುಷನಂತೆ ವಿದ್ಯಾವಂತೆಯಾಗಿ ಅವನಿಗೆ ಸರಿಸಮಾನವಾಗಿ ದುಡಿಯುತ್ತಿದ್ದರೂ ಕೂಡ ಶೋಷಣೆಗೆ ಒಳಗಾಗುತ್ತಿದ್ದಾಳೆ, ಮನೆಯ ಹೊರಗೂ ಒಳಗೂ ಎಲ್ಲಾ ಕೆಲಸವನ್ನು ಮಹಿಳೆಯೇ ನಿಭಾಯಿಸಬೇಕಾಗಿದೆ, ಅವಳ ಮನೆಕೆಲಸಗಳಲ್ಲಿ ಪುರುಷ ಯಾಕೆ ಸಮ ಪಾಲುದಾರನಾಗುವುದಿಲ್ಲ ಎಂಬ ಪ್ರಶ್ನೆ ಅವರದಾಗಿತ್ತು. ಅವರು ಆ ಪ್ರಶ್ನೆ ಕೇಳಿದಾಗ ನನಗೆ ಅನಿಸಿದ್ದು ಸ್ತ್ರೀವಾದಿಗಳು ಇನ್ನೂ ವೈಜ್ಞಾನಿಕಯುಗದತ್ತ ಅವರ ಆಲೋಚನಾಕ್ರಮ ತೆರೆದುಕೊಂಡಿಲ್ಲ ಎನಿಸಿತು. ಯಾಕೆಂದರೆ ನಾವು ಎಐಯತ್ತ ಸಾಗುತ್ತಿದ್ದೇವೆ. ಆದ್ದರಿಂದ  ಹೆಣ್ಣು ಮತ್ತು ಗಂಡು ಅನ್ನುವ ಲಿಂಗತಾರತಮ್ಯವಿಲ್ಲದೆ ಇಬ್ಬರು ಸಮಾನರು. ಹೆಣ್ಣು ಗಂಡು ಸಹಬಾಳ್ವೆಯಿಂದ ಹೇಗೆ ಸಮಾಜದಲ್ಲಿ ಬದುಕು ನಡೆಸಬೇಕು ಅನ್ನೋದರತ್ತ ಸ್ತ್ರೀವಾದದ ದಿಕ್ಕು ಸಾಗಬೇಕಾದ ತುರ್ತು ಇಂದು ಇದೆ. ಕಾರಣ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ತಾರತಮ್ಯ ಅಸಹನೆ, ಹಿಂಸೆ ಕ್ರೌರ್ಯಗಳನ್ನು ನೋಡಿದರೆ ಇಲ್ಲಿ ಹೆಣ್ಣು ಕಡಿಮೆ ಇಲ್ಲ ಗಂಡು ಕೂಡ ಕಡಿಮೆ ಇಲ್ಲ, ಇಬ್ಬರು ಜಿದ್ದಾಜಿದ್ದಿಗೆ ಬಿದ್ದಿದ್ದು ಮಾನವೀಯತೆ, ಮನುಷ್ಯತ್ವವೇ ಇಲ್ಲದಂತೆ ಅಹಂ ಅನ್ನು ಮುಂದೆ ಮಾಡುತ್ತಾ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಾ ಕ್ರೌರ್ಯದಿಂದ ಮೆರೆಯುತ್ತಿದ್ದಾರೆ  ಇದರಿಂದ ಎಷ್ಟೋ ಕುಟುಂಬಗಳು ಒಡೆದು ಹೋಗಿ ಅನೇಕ ಸಮಾಜಘಾತುಕ ಚಟುವಟಿಕೆಗಳು ನಡೆಯುವುದಕ್ಕೆ ಇವು ರಹದಾರಿಯಾಗಿದೆ.

   ಸ್ತ್ರೀವಾದ ಪುರುಷವಾದ ಯಾವ ವಾದವೂ ಅಗತ್ಯವಿಲ್ಲ ಹೆಣ್ಣು ಗಂಡು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಒಬ್ಬರಿಗೊಬ್ಬರು ಗೌರವವನ್ನು ಕೊಡುವ ನಾನೆಚ್ಚು ನೀನೆಚ್ಚು ಅನ್ನೋ ವಾದವನ್ನು ಮಾಡದೆ ವಿಶಾಲವಾದ ಹೃದಯ ಶ್ರೀಮಂತಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸ್ತ್ರೀವಾದ ಪುರುಷರಿಗೂ ಸಂಗಾತಿಯಾಗಲು ಸಾಧ್ಯವಾಗುತ್ತದೆ.

ಬಾಲ್ಯದಿಂದಲೇ ಮಕ್ಕಳ ಕಾಳಜಿ ಮಾಡುವ ಕೆಲಸ ತಾಯಿಯದಷ್ಟೇ ಅಲ್ಲ, ತಂದೆಯದೂ ಹೌದು. ಎಷ್ಟೋ ಮಹಿಳೆಯರು ಪ್ರಸ್ತುತ ಉದ್ಯೋಗಿಗಳಾಗಿರುವುದರಿಂದ ಗಂಡ ಹೆಂಡತಿ ಇಬ್ಬರೂ ಮಕ್ಕಳನ್ನು ಕಾಳಜಿ ವಹಿಸುತ್ತಾ ಇದ್ದಾರೆ ಎನ್ನಬಹುದು. ತಾಯಿ ಮನೆಯಲ್ಲಿ ತನ್ನ ಕಛೇರಿಗೆ ಹೋಗುವ ಮುನ್ನ ತಿಂಡಿ ಮಾಡಿದರೆ ಅಪ್ಪ ಮಗನಿಗೆ ಸ್ನಾನ ಬಟ್ಟೆ ತೊಡಿಸುವುದು ಶಾಲೆಗೆ ಹೋಗಲು ರೆಡಿಮಾಡಿ ಅವನಿಗೆ ಶಾಲೆಗೆ ಬಿಟ್ಟು ಬರುವ ಕೆಲಸವನ್ನು ಎಷ್ಟೋ ಕುಟುಂಬಗಳು ಮಾಡುತ್ತಿರುವುದರಿಂದ ಮಕ್ಕಳ ಪೋಷಣೆ ಮತ್ತು ಪಾಲನೆಯಲ್ಲಿ ಗಂಡು ಹೆಣ್ಣು ಇಬ್ಬರು ಸಮಪಾಲುದಾರರಾಗಿದ್ದಾರೆ ಎನ್ನಬಹುದು. ಇದಕ್ಕೆ ಅಪವಾದಗಳು ಖಂಡಿತಾ ಇವೆ. ಗಂಡು ಹೆಣ್ಣು ಇಬ್ಬರಲ್ಲಿಯೂ ಪ್ರೀತಿ ಗೌರವ ಎಲ್ಲಿ ಇರುತ್ತದೆಯೋ ಅಲ್ಲಿ ಯಾವುದೇ ಅಸಹನೆ ಅಸಮಾಧಾನ ತಾರತಮ್ಯ ಯಾವುದೂ ಇರುವುದಿಲ್ಲ. ಇದು ಸಮಸಮಾಜ ನಿರ್ಮಾಣವಾಗುವುದಕ್ಕೆ ಒಳ್ಳೆಯ ಬೆಳವಣಿಗೆ ಎನ್ನ ಬಹುದು.

ಇವತ್ತು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳನ್ನು ನೋಡಿದರೆ ಹೆಣ್ಣು ಹೆಣ್ಣಿನಿಂದಲೇ ಕೃತ್ಯಗಳು ನಡೆಯುತ್ತದೆ. ಒಬ್ಬ ಪರಪುರುಷನೊಂದಿಗೆ ಮತ್ತೊಬ್ಬ ಹೆಣ್ಣು ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡು ಮತ್ತೊಂದು ಹೆಣ್ಣಿಗೆ ಹಿಂಸಿಸುವುದು ಸರಿಯಲ್ಲ. ಜಾತಿ ಎನ್ನೋ ಕಾರಣಕ್ಕೆ ಹೆಣ್ಣು ಮತ್ತೊಂದು ಹೆಣ್ಣನ್ನು ತುಚ್ಚವಾಗಿ ಕಾಣುವುದು ಕೂಡ ಸ್ತ್ರೀವಾದವಲ್ಲ. ಮಹಿಳೆ ಅಂದರೆ ಅಲ್ಲಿ ಯಾವುದೇ ಜಾತಿ ಧರ್ಮ ಕಪ್ಪು ಬಿಳಿ ಅನ್ನೋ ತಾರತಮ್ಯ ಇರಬಾರದು. ಕೇವಲ ಮಹಿಳೆ ಅನ್ನೋ ಮನೋಭಾವದಿಂದ ಒಗ್ಗಟ್ಟಾಗಿ ನಡೆಯುವಂತಹ ಸ್ತ್ರೀವಾದ ಪ್ರಸ್ತುತ ದಿನಮಾನಗಳಲ್ಲಿ ಮುಖ್ಯವಾಗಿದೆ.

  ಮುಂದಿನ ಪೀಳಿಗೆಯ ಮಕ್ಕಳಲ್ಲಿ ಮನೆ ಮತ್ತು ಶಾಲೆಯಲ್ಲಿ ನೈತಿಕ ಶಿಕ್ಷಣದ ಜೊತೆ ಸಮಾನತೆಯನ್ನು ಕಲಿಸುವ ಜೊತೆಗೆ ಗಂಡು ಹೆಣ್ಣು ಅನ್ನೋ ಭೇದವಿಲ್ಲದೆ ತಾರತಮ್ಯವಿಲ್ಲದೇ ಎಲ್ಲರೂ ಎಲ್ಲಾ ಕೆಲಸಗಳಲ್ಲೂ ತೊಡಗುವಂತೆ ಪ್ರೋತ್ಸಾಹಿಸಿದರೆ ಸಮಾಜದಲ್ಲಿ ಗಂಡು ಹೆಣ್ಣು ಅನ್ಯೋನ್ಯವಾಗಿ ಬದುಕಲು ಸಹಕಾರಿಯಾಗುತ್ತದೆ.

ಸುವರ್ಣಕೆ.ಟಿ.ಶಿವಪ್ರಸಾದ್

ಸಾಹಿತಿ

ಇದನ್ನೂ ಓದಿ- ಮಹಿಳಾ ದಿನ ವಿಶೇಷ | ಕಮರುತ್ತಿರುವ ಕನಸುಗಳ ಸುತ್ತ…….

More articles

Latest article

Most read