ಬೆಂಗಳೂರು: ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಆರ್ಭಟದ ಆಟದಿಂದ ಹಾಲಿ ಚಾಂಪಿಯನ್ ಆರ್‌ಸಿಬಿ ಚೊಚ್ಚಲ ಪಂದ್ಯ ಗೆದ್ದಿದೆ.
ಹಾಲಿ ಚಾಂಪಿಯನ್ಸ್ ಈ ವರ್ಷವೂ ಚಾಂಪಿಯನ್ ಆಗುವ ಸೂಚನೆ ಮೊದಲ ಪಂದ್ಯದಲ್ಲೇ ನೀಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲುವಿನೊಂದಿಗೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ ವಿರಾಟ್ ಕೊಹ್ಲಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರು ವಿಕೆಟ್‌ಗಳಿಂದ ಜಯಗಳಿಸಿದೆ. ಆರ್‌ಸಿಬಿ ತಂಡದಿಂದ ಅದ್ಭುತ ಚೇಸಿಂಗ್! ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 26 ಎಸೆತಗಳು ಬಾಕಿ ಇರುವಾಗಲೇ 202 ರನ್‌ಗಳ ಗುರಿಯನ್ನು ತಲುಪಿತು.
ದೇವದತ್ ಪಡಿಕ್ಕಲ್ ಆರಂಭಿಕ ಹೊಡೆತ ನೀಡಿ, ಎಸ್‌ಆರ್‌ಹೆಚ್ ಬೌಲರ್‌ಗಳನ್ನು ಸ್ಫೋಟಿಸುವ ಮೂಲಕ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡರು. ಅವರು ಪತನಗೊಂಡ ನಂತರ, ಪಾಟಿದಾರ್ ಜವಾಬ್ದಾರಿಯನ್ನು ವಹಿಸಿಕೊಂಡರು, ಚೇಸ್-ಮಾಸ್ಟರ್ ಚೇಸಿಂಗ್ ನೊಂದಿಗೆ ಆರ್‌ಸಿಬಿ ಜಯಗೊಳಿಸಲು ಸಾಧ್ಯವಾಯಿತು.
ಆರ್‌ಸಿಬಿ 15.4 ಓವರ್‌ಗಳಲ್ಲಿ 203/4
ಎಸ್‌ಆರ್‌ಹೆಚ್ ತಂಡದ ಆಟ – 201/9
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸನ್ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್ ಇದ್ದಾರೆ.
ಎಸ್‌ಆರ್‌ಹೆಚ್ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್/ ನಾಯಕ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ ಇದ್ದಾರೆ.
ಎಸ್‌ಆರ್‌ಎಚ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಅಭಿಷೇಕ್ ಶರ್ಮಾ ಬ್ಯಾಟಿಂಗ್
2.1 ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ 7 ರನ್ ಗೆ ಔಟ್ ಆಗಿದ್ದಾರೆ.
ಒಂದೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಬಂದಿದೆ. ಟ್ರಾವಿಸ್ ಹೆಡ್ ರನ್ ಗಳಿಸಿ 9 ಜೇಕಬ್ ಡಫ್ಪಿಗೆ ವಿಕೆಟ್ ಒಪ್ಪಿಸಿದ್ದಾರೆ.
4ನೇ ಓವರ್‌ನಲ್ಲಿ ಮತ್ತೊಂದು ವಿಕೆಟ್. ನಿತೀಶ್ ರೆಡ್ಡಿ ವಿಕೆಟ್ ಜೇಕಬ್ ಡಫ್ಫಿಗೆ ಬೌಲಿಂಗ್ ಗೆ ಕ್ಯಚ್ ಒಪ್ಪಿಸಿದ್ದಾರೆ. ಎಸ್‌ಆರ್‌ಹೆಚ್ ಒಂಬತ್ತು ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 79 ರನ್ ಗಳಿಸಿದೆ. ಪವರ್‌ಪ್ಲೇನಲ್ಲಿ ಹೈದರಾಬಾದ್ ಕೇವಲ 29 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಸುಯಾಶ್ ಶರ್ಮಾ ಸಲೀಲ್ ಅರೋರಾಗೆ, ದೇವದತ್ ಪಡಿಕ್ಕಲ್ ಕ್ಯಾಚ್ ನೀಡಿ ಔಟ್ ಆದರು. ಸಲೀಲ್ ಅರೋರಾ ಸಿ ದೇವದತ್ ಪಡಿಕ್ಕಲ್ ಬೌ ಸುಯಾಶ್ ಶರ್ಮಾ
38 ಬಾಲ್‌ಗಳಿಗೆ 80 ರನ್ ಬಾರಿಸಿದ್ದ ಇಶಾನ್ ಕಿಶಾನ್ ಔಟ್ ಆಗಿದ್ದಾರೆ. ಈ ಮೂಲದ ಎಸ್‌ಆರ್‌ಹೆಚ್ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಸಾಲ್ಟ್ ಅದ್ಭುತ ಕ್ಯಾಚ್ ಹಿಡಿದರು.
ವಿರಾಟ್ ಕೊಹ್ಲಿಗೆ ಸಿಕ್ಕಿಬಿದ್ದ ಅನಿಕೇತ್ ವರ್ಮಾಗೆ ರೊಮಾರಿಯೋ ಶೆಫರ್ಡ್! 9ನೇ ವಿಕೆಟ್
ಹೈದರಾಬಾದ್ ಬೆಂಗಳೂರು ತಂಡಕ್ಕೆ 202 ರನ್ ಗಳ ಗುರಿ ನೀಡಿದೆ.
ಮೊದಲ ಓವರ್‌ನಲ್ಲೇ ಸಾಲ್ಟ್ ಕೇವಲ 8 ರನ್ ಗಳಿಸಿ ಔಟಾದರೂ.
ಬಳಿಕ ವಿರಾಟ್ ಕೊಹ್ಲಿ ಮತ್ತು ಪಡಿಕ್ಕಲ್ ಜೊತೆಯಾಟ. ಪವರ್‌ಪ್ಲೇನಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬೆಂಗಳೂರು ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ನಾಲ್ಕು ಓವರ್‌ಗಳಲ್ಲಿ ಇಬ್ಬರು ಸೇರಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ಆದಾಗ್ಯೂ, ಫಿಲ್ ಸಾಲ್ಟ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಳ್ಳಬೇಕಾಯಿತು.
ಆ 11 ಮಂದಿಗೆ ಸಂತಾಪ
ಟಾಸ್ ಬಳಿಕ ಉಭಯ ತಂಡಗಳು ಕಣಕ್ಕಿಳಿಯುವ ಮುನ್ನ 1 ನಿಮಿಷದ ಮೌನಾಚರಣೆ ನಡೆಸಿ, ಚಿನ್ನಸ್ವಾಮಿ ಮೈದಾನದಲ್ಲಿ ಬಳಿ ಕಳೆದ ವರ್ಷ ನಡೆದಿದ್ದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಮಂದಿಗೆ ಸಂತಾಪ ಸೂಚಿಸಲಾಯಿತು. ಇದರ ಜೊತೆಗೆ ಎರಡು ತಂಡಗಳ ಆಟಗಾರರು ತಮ್ಮ ಕೈಗೆ ಕಪ್ಪು ಬ್ಯಾಂಡ್ ಧರಿಸಿ ಕಣಕ್ಕಿಳಿಯುವ ಮೂಲಕ ಗೌರವ ಸಮರ್ಪಣೆ ಮಾಡಿದ್ದಾರೆ.
ಈ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ಆಡಳಿತ ಮಂಡಳಿ ಹಾಗೂ ಕೆಎಸ್ಸಿಎ ಅಗಲಿದ 11 ಜೀವಗಳ ನೆನಪನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಕ್ರೀಡಾಂಗಣದ ಮುಖ್ಯಧ್ವಾರದ ಬಳಿ ಸ್ಮಾರಕವನ್ನು ನಿರ್ಮಾಣ ಮಾಡಿದೆ. ಹಾಗೆಯೇ ಸಾವನ್ನಪ್ಪಿದ್ದ 11 ಜನರ ಸ್ಮರಣಾರ್ಥವಾಗಿ ಮೈದಾನದಲ್ಲಿ 11 ಆಸನಗಳನ್ನು ಖಾಲಿ ಇಡಲು ನಿರ್ಧರಿಸಿದೆ. ಕೇವಲ ಐಪಿಎಲ್ ಪಂದ್ಯಗಳಿಗೆ ಮಾತ್ರವಲ್ಲದೆ, ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲೂ ಆ 11 ಆಸನಗಳು ಖಾಲಿ ಇರಲಿವೆ.

