ಸಚಿವರಿಗೆ ಖಾತೆ ಹಂಚಿಕೆ, ಪಟ್ಟಿ ಬಿಡುಗಡೆಗೆ ಅಮಾವಾಸ್ಯೆ ಅಡ್ಡಿ, ಮಧ್ಯಾಹ್ನದ ನಂತರ ಪ್ರಕಟ ಸಾಧ್ಯತೆ

ಬೆಂಗಳೂರು: ಎರಡು ತಿಂಗಳಿಂದ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಪ್ರಹಸನಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಕಳೆದ ವಾರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಅದರೆ, ಖಾತೆ ಹಂಚಿಕೆ ಇದುವರೆಗೂ ಆಗಿರಲಿಲ್ಲ. 

ಇದೀಗ ಖಾತೆ ಹಂಚಿಕೆಯಾದರೂ ಪಟ್ಟಿ ಬಿಡುಗಡೆಗೆ ಅಮಾವಾಸ್ಯೆ ಅಡ್ಡಿಯಾಗಿದೆ. ಹೌದು, ಇಂದು ಅಮಾವಾಸೆ ಆಗಿರುವುದರಿಂದ ಪಟ್ಟಿ ಫೈನಲ್‌ ಆಗಿದ್ದರೂ ಬಿಡುಗಡೆಯಾಗಿಲ್ಲ ಇದಕ್ಕೆ ಮಧ್ಯಾಹ್ನದ ನಂತರ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.

ಅಮಾವಾಸ್ಯೆಯ ಪ್ರಭಾವ ಮುಗಿದ ನಂತರ, ಅಂದರೆ   ಮಧ್ಯಾಹ್ನ 3 ಗಂಟೆಯ ನಂತರವಷ್ಟೇ ಬಹುನಿರೀಕ್ಷಿತ ಖಾತೆಗಳ ಹಂಚಿಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಅನುಗುಣವಾಗಿ, ಸಚಿವ ಸಂಪುಟ ಸಭೆಯನ್ನು ಬುಧವಾರದಿಂದ ಗುರುವಾರಕ್ಕೆ ಮುಂದೂಡಲಾಗಿದೆ.

ಇದು ಜ್ಯೋತಿಷ್ಯದ ಮೇಲಿನ ನಂಬಿಕೆಯಿಂದ ತೆಗೆದುಕೊಂಡ ಎಚ್ಚರಿಕೆಯ ಕ್ರಮವೇ ಅಥವಾ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸಲು ಕಂಡುಕೊಂಡ ಅನುಕೂಲಕರ ನೆಪವೇ ಎಂಬುದು ಈಗ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಶುಭ ಮುಹೂರ್ತವನ್ನು ಪರಿಗಣಿಸುವುದು ಕರ್ನಾಟಕದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಾಲಿಗೆ ಹೊಸದೇನಲ್ಲ.

ಯಾರಿಗೆ ಯಾವ ಖಾತೆ?
ಚಲುವರಾಯಸ್ವಾಮಿ – ಕೃಷಿ
ರಿಜ್ವಾನ್ ಅರ್ಷದ್‌ – ಆಹಾರ
ಮುನಿಯಪ್ಪ – ಸಮಾಜ ಕಲ್ಯಾಣ
ಸಂತೋಷ್ ಲಾಡ್ – ಕಾರ್ಮಿಕ
ಬಸಂತಪ್ಪ- ಮೀನುಗಾರಿಕೆ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ
ರಾಯರೆಡ್ಡಿ- ಉನ್ನತ ಶಿಕ್ಷಣ
ಜಮೀರ್ – ಹೌಸಿಂಗ್ ವಕ್ಪ್
ಲಕ್ಷ್ಮಣ ಸವದಿ – ಸಹಕಾರಿ
ಅಜಯ್ ಸಿಂಗ್ – ಅರಣ್ಯ
ಎಸ್‌ ಎಸ್‌ ಮಲ್ಲಿಕಾರ್ಜುನ – ಗಣಿ
ಬಾಲಕೃಷ್ಣ- ಸಣ್ಣ ನೀರಾವರಿ
ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ

More articles

Latest article

Most read