ಮೂರು ದಿನಗಳಲ್ಲಿ 165 ಕೋಟಿ ರೂ. ಗಳಿಕೆ ಕಂಡ ಟಾಕ್ಸಿಕ್‌

ಬೆಂಗಳೂರು : ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 165 ಕೋಟಿ ರೂ.ಗಳ ಗಡಿಯನ್ನು ದಾಟಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ,  ಮೊದಲ ದಿನ ಉತ್ತಮ ಪ್ರದರ್ಶನ ಕಂಡರೂ, ಗುರುವಾರ ಇದರ ಗಳಿಕೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ವ್ಯಾಪಾರ ವಿಶ್ಲೇಷಣಾ ವೆಬ್‌ಸೈಟ್ ‘ಸ್ಯಾಕ್ನಿಲ್ಕ್’ ಪ್ರಕಾರ, ‘ಟಾಕ್ಸಿಕ್’ ಶುಕ್ರವಾರ ಭಾರತದಲ್ಲಿ 26.6 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ಇದರೊಂದಿಗೆ, ಚಿತ್ರದ ಮೂರು ದಿನಗಳ ಒಟ್ಟು ಗಳಿಕೆಯು 165.35 ಕೋಟಿ ರೂ.ಗೆ ತಲುಪಿದೆ.

ಶುಕ್ರವಾರದಂದು ಒಟ್ಟು 14,746 ಪ್ರದರ್ಶನಗಳಲ್ಲಿ ಚಿತ್ರವು ಸರಾಸರಿ 21.9% ರಷ್ಟು ಪ್ರೇಕ್ಷಕರ ಹಾಜರಾತಿಯನ್ನು ದಾಖಲಿಸಿದೆ. ‘ಟಾಕ್ಸಿಕ್’ ಬುಧವಾರ 101.10 ಕೋಟಿ ರೂ. ಗಳಿಕೆಯೊಂದಿಗೆ ಆರಂಭಗೊಂಡಿತ್ತು. ಆದರೆ, ಎರಡನೇ ದಿನವಾದ ಗುರುವಾರ ಗಳಿಕೆಯಲ್ಲಿ 62.8% ರಷ್ಟು ಕುಸಿತ ಕಂಡುಬಂದಿತು ಮತ್ತು ಚಿತ್ರವು 37.65 ಕೋಟಿ ರೂ. ಗಳಿಸಿತು.

ಕನ್ನಡ ಆವೃತ್ತಿಗೆ ಹೋಲಿಸಿದರೆ ಹಿಂದಿ ಮಾರುಕಟ್ಟೆಯಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ಮತ್ತು ತಮಿಳು ಆವೃತ್ತಿಗಳು ಕೂಡ ತೃಪ್ತಿದಾಯಕ ಗಳಿಕೆಯನ್ನು ಕಂಡಿವೆ. ಆದರೆ ಓಣಂ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿದ್ದರೂ, ಮಲಯಾಳಂ ಆವೃತ್ತಿಗೆ ಸೀಮಿತ ಪ್ರತಿಕ್ರಿಯೆ ಮಾತ್ರ ದೊರೆತಿದೆ.

More articles

Latest article

Most read