ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಮುಂದುವರೆದ ಕಾರ್ಯಾಚರಣೆ, ಇಂದು ಮತ್ತಷ್ಟು ಮಳಿಗೆಗಳಿಗೆ 45 ಸಾವಿರ ದಂಡ

ಬೆಂಗಳೂರು : ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಅಧಿಕಾರಿಗಳ ತಂಡವು ಸತತ 2ನೇ ದಿನವೂ ಪರಿಶೀಲನೆ ಮುಂದುವರಿಸಿದ್ದು, ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಕಸ ವಿಂಗಡಿಸದೆ ಇರುವುದು ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನೆಕ್ಸಸ್ ಮಾಲ್‌ನ 6 ವಾಣಿಜ್ಯ ಮಳಿಗೆಗಳಿಗೆ 45 ಸಾವಿರ ದಂಡ
ಇಂದು ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡಕ್ಕೆ ಮಾಲ್ ನ ಫುಡ್ ಕೋರ್ಟ್‌ನಲ್ಲಿರುವ ಪ್ರಮುಖ ಬ್ರಾಂಡ್‌ಗಳು ಘನತ್ಯಾಜ್ಯ ನಿಯಮಗಳನ್ನು ಗಾಳಿಗೆ ತೂರಿ ಹಸಿ-ಒಣ ಕಸವನ್ನು ವಿಂಗಡಿಸದೆ ಮಿಶ್ರಣ ಮಾಡಿರುವುದು ಮತ್ತು ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ (SUP) ಬಳಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಒಟ್ಟು 6 ವಾಣಿಜ್ಯ ಮಳಿಗೆಗಳಿಗೆ ಒಟ್ಟಾರೆಯಾಗಿ 45,000 ರೂ. ದಂಡವನ್ನು ವಿಧಿಸಿ ವಸೂಲಿ ಮಾಡಲಾಗಿದೆ.

ಪ್ರತಿಷ್ಠಿತ ವಾಣಿಜ್ಯ ಮಳಿಗೆಗಳಿಗೆ ವಿಧಿಸಿದ ದಂಡದ ವಿವರ
ಸಬ್‌ವೇ – ರೂ.15,000, ಕ್ಯಾಲಿಫೋರ್ನಿಯಾ ಬುರ್ರಿಟೋ – ರೂ.10,000, ಟ್ಯಾಕೋ ಬೆಲ್, ಗೋಚುಜಾಂಗ್, ಡ್ರಿಂಕಲ್ ಮತ್ತು ಸ್ಕ್ವೀಸ್ – ತಲಾ ರೂ. 5,000 ಗಳಂತೆ ದಂಡ ವಿಧಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ
ಎಲ್ಲಾ ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳು ಹಾಗೂ ಮಾಲ್ ಮಳಿಗೆಗಳು ಕಡ್ಡಾಯವಾಗಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು ಮತ್ತು ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ಪರಿಸರಕ್ಕೆ ಹಾನಿಯುಂಟು ಮಾಡುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ನಿರಂತರ ತಪಾಸಣೆ ನಡೆಸಿ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆರೋಗ್ಯ ಪರಿವಿಕ್ಷಕರು ಹಾಗೂ ಮಾರ್ಷಲ್‌ಗಳು ಭಾಗವಹಿಸಿದ್ದರು.

More articles

Latest article

Most read