ಬಲೀಂದ್ರನ ಕತೆ – ಪುರಾಣ, ಪಾಡ್ದನಗಳು ನಿಜಕ್ಕೂ ಹೇಳುವುದೇನು?

ಭಾರತದ ಮೂಲನಿವಾಸಿಗಳ ಹಲವು ಪಂಥಗಳನ್ನು ವೈದಿಕರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಶಕ್ತಿ ದೇವತೆಗಳ ಮೇಲೆ ತಮ್ಮ ಹಿಡಿತ ಸಾಧಿಸತೊಡಗಿದ್ದರು. ಶೈವ, ವೈಷ್ಣವ ಪಂಥಗಳು ವೇದಗಳ ಕಾಲದಲ್ಲಿ ಇರಲೇ ಇಲ್ಲ. ಆದರೆ ದ್ರಾವಿಡ ಬುಡಕಟ್ಟುಗಳ ನಂಬಿಕೆಗಳನ್ನು ತಮ್ಮದೇ ಲಾಭಕ್ಕೆ ಕತೆಗಳಾಗಿ ಕಟ್ಟಬೇಕಿತ್ತು. ಅದೆಲ್ಲವನ್ನೂ ಪುರಾಣಗಳ ಮುಖಾಂತರ ಮಾಡಿದರು. ಈ ಪುರಾಣಗಳೇ ಮುಂದೆ ಜನಪ್ರಿಯ ಸಂಸ್ಕೃತಿಯ ಮಾಧ್ಯಮಗಳ ಮೂಲಕ ದೇಶದ ಉದ್ದಗಲಕ್ಕೂ ಚಾಚಿಕೊಂಡವು – ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಸಂಶೋಧಕರು.

ಪುರಾಣಗಳು ಚರಿತ್ರೆಯಲ್ಲ. ಅವು ನಮ್ಮ ದೇಶದಲ್ಲಿ ಒಂದು ಕಾಲದಲ್ಲಿ ಉದ್ದೇಶಪೂರ್ವಕವಾಗಿ ರಚಿಸಲಾದ ಕಾಲ್ಪನಿಕ ಕತೆಗಳು. ಮುಖ್ಯವಾಗಿ ವೈದಿಕ ಪುರೋಹಿತಶಾಹಿಗೆ ಪುರಾಣಗಳನ್ನು ಕಟ್ಟಿ ಪ್ರಚಾರ ಮಾಡುವುದರಿಂದ ಲಾಭವಿತ್ತು. ಆದರೆ, ಪುರಾಣಗಳಲ್ಲಿ ಚಾರಿತ್ರಿಕ ಸಂಗತಿಗಳೂ ಇವೆ ಎಂಬುದು ಮುಖ್ಯ. ಭಾರತದ ಸಂಸ್ಕೃತಿ ಚರಿತ್ರೆ ತಿಳಿಯಲು ಈ ಪುರಾಣಗಳು ಪೂರಕ ಆಕರಗಳಾಗಿವೆ. ಯಾಕೆಂದರೆ, ಪುರಾಣಗಳನ್ನು ರಚಿಸುವವರು ಶೂನ್ಯದಿಂದ ಏನನ್ನೂ ಸೃಷ್ಟಿಸಲಿಲ್ಲ.‌ ಅದುವರೆಗೆ ಭಾರತೀಯ ಸಮಾಜದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಬೌದ್ಧ ಜಾತಕ ಕತೆಗಳು, ಜೈನ ಸಾಹಿತ್ಯಗಳೇ ಪುರಾಣ ಬರೆದವರಿಗೆ ಪ್ರೇರಣೆಯಾಗಿದ್ದು.‌ ಆದರೆ ವೈದಿಕ ಪುರಾಣ ರಚನೆಕಾರರಿಗೆ ಅದುವರೆಗೆ ಜನಪ್ರಿಯವಾಗಿದ್ದ ಕತೆಗಳನ್ನು, ಸಾಮಾಜಿಕ ಸಾಂಸ್ಕೃತಿಕ ಸಂಘರ್ಷಗಳನ್ನು, ಒಂದು ಪ್ರಧಾನ ನರೇಟಿವ್ ಗೆ ತರಬೇಕಿತ್ತು. ಭಾರತದ ಮೂಲನಿವಾಸಿಗಳ ಹಲವು ಪಂಥಗಳನ್ನು ವೈದಿಕರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಶಕ್ತಿ ದೇವತೆಗಳ ಮೇಲೆ ತಮ್ಮ ಹಿಡಿತ ಸಾಧಿಸತೊಡಗಿದ್ದರು. ಶೈವ, ವೈಷ್ಣವ ಪಂಥಗಳು ವೇದಗಳ ಕಾಲದಲ್ಲಿ ಇರಲೇ ಇಲ್ಲ. ಆದರೆ ದ್ರಾವಿಡ ಬುಡಕಟ್ಟುಗಳ ನಂಬಿಕೆಗಳನ್ನು ತಮ್ಮದೇ ಲಾಭಕ್ಕೆ ಕತೆಗಳಾಗಿ ಕಟ್ಟಬೇಕಿತ್ತು. ಅದೆಲ್ಲವನ್ನೂ ಪುರಾಣಗಳ ಮುಖಾಂತರ ಮಾಡಿದರು. ಈ ಪುರಾಣಗಳೇ ಮುಂದೆ ಜನಪ್ರಿಯ ಸಂಸ್ಕೃತಿಯ ಮಾಧ್ಯಮಗಳ ಮೂಲಕ ದೇಶದ ಉದ್ದಗಲಕ್ಕೂ ಚಾಚಿಕೊಂಡವು.

ದಕ್ಷಿಣ ಭಾರತದಲ್ಲಿ ಬಲಿಗೆ ಸಂಬಂಧಿಸಿದ ಆಚರಣೆಗಳು, ಪುರಾಣ ಕತೆಗಳು ಮತ್ತು ಆದಿವಾಸಿ ಬುಡಕಟ್ಟು ಜನರಲ್ಲಿ ಜನಜನಿತವಾಗಿರುವ ಐತಿಹ್ಯಗಳನ್ನು ಅಧ್ಯಯನ ಮಾಡಿದರೆ ನಾವು ನಮ್ಮ ಸಮಾಜ ರೂಪುಗೊಂಡ ಬಗೆಯನ್ನು ಗ್ರಹಿಸಬಹುದು.

ದೀಪಾವಳಿಯಲ್ಲಿ ಬಲಿಪಾಡ್ಯ ಆಚರಿಸುತ್ತೇವೆ. ಹಲವು ಕಡೆಗಳಲ್ಲಿ ಬಲೀಂದ್ರನನ್ನು ಪೂಜಿಸುತ್ತಾರೆ. ನಮ್ಮ ಕಡೆ ಒಂದು ವಾರ ಕಾಲ ಮಣ್ಣಿನ ಕೊಡದಲ್ಲಿ ನೀರು ತುಂಬಿ ಬಲೀಂದ್ರನನ್ನು ಸ್ಥಾಪಿಸಿ ಪೂಜಿಸುತ್ತೇವೆ. ಅಂಟಿಗೆ ಪಂಟಿಗೆಯಲ್ಲಿ ಬಲೀಂದ್ರನ ಕರೆಯುವ ಹಾಡು ಹಾಡುತ್ತಾರೆ.‌ ಈ ಬಲೀಂದ್ರನ ಕುರಿತ ಹಾಡುಗಳಲ್ಲಿ ಒಂದು ಸಮೃದ್ಧ ಸಮಾಜದ ಚಿತ್ರಣವಿದೆ. ಬಲೀಂದ್ರ ಬಂದಾಗ ಪ್ರಕೃತಿ ನಳನಳಿಸುತ್ತದೆ, ಮಳೆ ಬೆಳೆಯೆಲ್ಲಾ ಉತ್ತಮವಾಗುತ್ತದೆ, ಸುಖ ಶಾಂತಿಯಿಂದ ಸಮಾಜ ತುಂಬಿರುತ್ತದೆ.

ಕೇರಳದ ವಯನಾಡು ಮತ್ತು ಕರ್ನಾಟಕದ ಮೈಸೂರು ಕೊಡಗು ಭಾಗಗಳಲ್ಲಿ ವಾಸವಾಗಿರುವ ಆಡಿಯ ಮತ್ತು ಪಣಿಯ ಆದಿವಾಸಿಗಳು ತಮ್ಮ ಜಾನಪದ ಕತೆಗಳಲ್ಲಿ ಮಹಾಬಲಿಯನ್ನು ಜೀವಂತವಿರಿಸಿಕೊಂಡಿದ್ದಾರೆ.  ವಿನೋದ್ ಕೊಟ್ಟಾಯಿಲ್ ಕಾಳಿದಾಸನ್ ಎಂಬ ಸ್ವತಂತ್ರ ಸಂಶೋಧಕರೊಬ್ಬರು A King lost and found: Revisiting the popular and the tribal myths of Mahabalii from Kerala ಎಂಬ ಸಂಶೋಧನಾ ಪ್ರಬಂಧದಲ್ಲಿ ಈ ಜನಪದ ಕತೆಗಳ ವಿವರ ನೀಡಿದ್ದಾರೆ.‌. ಈ ಆದಿವಾಸಿಗಳಲ್ಲಿ ಪ್ರಚಲಿತದಲ್ಲಿರುವ ಕತೆಗಳ ಪ್ರಕಾರ ಮಾವಲಿಮಾಂಟು ಅವರ ಪೂರ್ವಿಕ ನಾಯಕ. ಇವನ ನಾಯಕತ್ವದಲ್ಲಿ ಮಾವಲಿಮಂತಂ (ಮಹಾಬಲಿ ಊರು)  ನಲ್ಲಿ ಬುಡಕಟ್ಟು ಜನರು ಸುಖ ಸಂತೋಷದಿಂದ ನೆಲೆಸಿರುತ್ತಾರೆ. ಒಂದು ಕತೆಯ ಪ್ರಕಾರ, ಆ ಊರಿಗೆ ಮೂವರು ವಂಚಕ ದಣಿಗಳು ಬರುತ್ತಾರೆ. ಅವರನ್ನು ಮಹಾಬಲಿ ಸ್ವಾಗತಿಸಿ ಆದರದಿಂದ ಬರಮಾಡಿಕೊಳ್ಳುತ್ತಾನೆ. ಆದರೆ ಅವರು ಅವನನ್ನು ಹೊಡೆದು ಕೊಂದು ಆ ಊರನ್ನು ವಶಪಡಿಸಿಕೊಳ್ಳುತ್ತಾರೆ..

ಈ ಆಡಿಯರಲ್ಲೇ ಪ್ರಚಲಿತವಿರುವ ಮತ್ತೊಂದು ಕತೆಯ ಪ್ರಕಾರ ಮಹಾಬಲಿಯ ಊರಿಗೆ ಉತ್ತರದಿಂದ ಇಬ್ಬರು ರಾಜಕುಮಾರಿಯರು ದೊಡ್ಡ ಸಂಖ್ಯೆಯಲ್ಲಿ  ಗೆದ್ದಲು ‌ಹುಳುಗಳು ಪಾತಾಳ ಲೋಕಕ್ಕೆ ಗುಳೇ ಹೋಗುತ್ತಿರುವುದನ್ನು ನೋಡುತ್ತಾರೆ. ಯಾಕೆಂದು ಕೇಳಲಾಗಿ, ನಾವು ಮಹಾಬಲಿಯ ಊರಿಗೆ ಹೋಗುತ್ತಿದ್ದೇವೆ ಎನ್ನುತ್ತಾರೆ. ಆಗ ರಾಜಕುಮಾರಿಯರು ತಮ್ಮ ಮಾಂತ್ರಿಕ ಶಕ್ತಿಯ ಸಹಾಯದಿಂದ ತಾವೂ ಗೆದ್ದಲು ‌ಹುಳುಗಳಾಗಿ ಆ ಗೆದ್ದಲು  ಹುಳುಗಳ ಸಾಲಿನಲ್ಲಿ ಸೇರಿಕೊಂಡು ಅವರೂ ಮಹಾಬಲಿ ಊರನ್ನು ತಲುಪುತ್ತಾರೆ. ಮಹಾಬಲಿ ಅವರನ್ನು ಆದರದಿಂದ ಬರಮಾಡಿ ಕೊಳ್ಳುತ್ತಾನೆ. ಆದರೆ ಸಮಯ ಸಾಧಿಸಿ ಇವರು ಮಹಾಬಲಿಯ ಬಳಿ ಇರುವ ಅತ್ಯಂತ ಬೆಲೆ ಬಾಳುವ ಆಸ್ತಿಯನ್ನು ಅಂದರೆ ಮಣ್ಣನ್ನು ಕದಿಯಲು ತೊಡಗುತ್ತಾರೆ. ಮೊದಲು ಉಗುರಿನಲ್ಲಿ, ನಂತರ ತೆಂಗಿನ ಚಿಪ್ಪಿನೊಳಗೆ, ಅದು ತುಂಬಿದಾಗ ಬಿದಿರು ಕೊಳವೆಯಲ್ಲಿ ನಂತರ ಬಿದಿರು ಬುಟ್ಟಿಯಲ್ಲಿ ತುಂಬುತ್ತಾರೆ. ಅದೂ ತುಂಬಿದಾಗ ಒಂದು ಕೊಠಡಿಯಲ್ಲಿ ತುಂಬುತ್ತಾರೆ.. ಅದೂ ತುಂಬಿದ ಮೇಲೂ ಇವರು ಕದ್ದ ಮಣ್ಣು ಇಡೀ ಬ್ರಹ್ಮಾಂಡವೇ ತುಂಬುತ್ತದೆ.‌

ಆಡಿಯ ಜನರಲ್ಲಿ ಮಹಾಬಲಿಯ ಕುರಿತು ಇರುವ ಮೂರನೇ ಕತೆಯೊಂದರ ಪ್ರಕಾರ ಅವರ ಪೂರ್ವಿಕ ಮಾವೆಲಿ (ಮಹಾಬಲಿ) ಯನ್ನು  ತಂಬೂರನ್ ಎಂಬ ಬ್ರಾಹ್ಮಣ ಭೂಮಾಲೀಕನೊಬ್ಬ  ಸುಲಭವಾಗಿ ಮೋಸಗೊಳಿಸುತ್ತಾನೆ. ಮುಗ್ಧ ಮಾವೇಲಿಯನ್ನು ಒಂದು ಪಂದ್ಯಾಟಕ್ಕೆ ಕರೆಯುತ್ತಾನೆ. ಹಿಂದೆ ಮುಂದೆ ಯೋಚಿಸದ ಮಾವೇಲಿ ಒಪ್ಪಿಕೊಳ್ಳುತ್ತಾನೆ. ಆಟದ ನಿಯಮಗಳನ್ನು ಆ ಬ್ರಾಹ್ಮಣನೇ ತಿಳಿಸುತ್ತಾನೆ. ನಾವಿಬ್ಬರೂ ನೀರಿನಲ್ಲಿ ನಿಂತು ಅದನ್ನು ಕಲಕಬೇಕು. ಯಾರ ಕಡೆ ಹೆಚ್ಚು ಕಲಕಿದ ನೀರು ಬರುತ್ತದೆಯೋ ಅವರು ಕಲಕಿದವರಿಗೆ ತನ್ನ ಜಾಗ ಬಿಟ್ಟುಕೊಡಬೇಕು ಎಂಬುದು ನಿಯಮ. ಚಾಣಾಕ್ಷ ಬ್ರಾಹ್ಮಣ ಹರಿಯುವ ನೀರಿನ ಮೇಲ್ಭಾಗದಲ್ಲಿ ನಿಲ್ಲುತ್ತಾನೆ. ಮಾವೆಲಿ ಕೆಳಕ್ಕೆ ನಿಲ್ಲುತ್ತಾನೆ. ಸಹಜವಾಗಿ ಬ್ರಾಹ್ಮಣ ಕಲಕಿದ ನೀರು ಮಾವೇಲಿ ಕಡೆ ಹರಿದು ಮಾವೇಲಿ ತನ್ನ ಭೂಮಿ ಕಳೆದುಕೊಳ್ಳುತ್ತಾನೆ.

ಆದಿವಾಸಿಗಳು ತಲತಲಾಂತರದಿಂದ ತಮ್ಮ ಸ್ಮೃತಿಯಲ್ಲಿಟ್ಟುಕೊಂಡು ಬಂದ ಈ ಕತೆಗಳು ಅವರ ಪೂರ್ವಿಕರನ್ನು ದಾಳಿಕೋರ ಸಮುದಾಯಗಳು ವಂಚಿಸಿದ ಕತೆಗಳೇ ಆಗಿವೆ; ತಮ್ಮ ನೆಲವನ್ನು ನೆಲೆಯನ್ನು ಕಳೆದುಕೊಂಡ ಕತೆಗಳೇ ಆಗಿವೆ. ಪುರಾಣಗಳು ಹೇಗೆ ಶೂನ್ಯದಿಂದ ಹುಟ್ಟುವುದಿಲ್ಲವೋ ಜನಪದ ಕತೆಗಳೂ, ಸಮುದಾಯಗಳ ಐತಿಹ್ಯಗಳೂ ಶೂನ್ಯದಲ್ಲಿ ಹುಟ್ಟುವುದಿಲ್ಲ. ಜನಸಮುದಾಯಗಳ ಅನುಭವಗಳೇ ಕತೆಗಳ ರೂಪದಲ್ಲಿ ಸಾಂದ್ರೀಕರಣಗೊಂಡು ಅಭಿವ್ಯಕ್ತಗೊಳ್ಳುತ್ತವೆ.

ವಿಷ್ಣು ಪುರಾಣದಲ್ಲಿ ಬರುವ ಮಹಾಬಲಿ ಅಸುರ ಚಕ್ರವರ್ತಿ, ಶಿವಭಕ್ತ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನ ಮೊಮ್ಮಗ. ಅತ್ಯಂತ ಪರಾಕ್ರಮಿ‌. ಭೂಲೋಕದಲ್ಲಿ ದಾನ ಧರ್ಮಕ್ಕೆ ಹೆಸರಾದ ಅಸುರ. ತನ್ನ ಪರಾಕ್ರಮದಿಂದ ದೇವತೆಗಳ ದೊರೆ ಇಂದ್ರನನ್ನೇ ಸೋಲಿಸಿದಾಗ ದೇವತೆಗಳಿಗೆ ಅಭದ್ರತೆ ಉಂಟಾಗಿ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣು ವಾಮನ ಎಂಬ ಕುಳ್ಳ ಬ್ರಾಹ್ಮಣನ ವೇಷದಲ್ಲಿ ಮಹಾಬಲಿಯ ಬಳಿ ದಾನ ಕೇಳಿ ಮೋಸದಿಂದ ಪಾತಾಳಕ್ಕೆ ತುಳಿಯುತ್ತಾನೆ. ವೈದಿಕ ಪುರಾಣಗಳೆಲ್ಲವೂ ಭಾರತದ ಒಳನಾಡಿಗೆ ಆರ್ಯರ ಸಾಮ್ರಾಜ್ಯಶಾಹಿ ವಿಸ್ತರಣೆಗಳೆ ಕತೆ ಎಂದು ಸಂಸ್ಕೃತಿ ಚಿಂತಕರು ಹೇಳುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ದಕ್ಷಿಣ ಭಾರತದಲ್ಲಿ ಆರ್ಯ ವೈದಿಕ ಸಂಸ್ಕೃತಿಯ ವಸಾಹತುಶಾಹಿ ಪ್ರಕ್ರಿಯೆಯನ್ನೇ “ವಾಮನಾವತಾರ” ಹೇಳುತ್ತದೆ. ನಾವಿಲ್ಲಿ ಆದಿವಾಸಿ ಆಡಿಯ ಹಾಗೂ ಪಣಿಯರ ಜನಪದ ಕತೆಗಳನ್ನು ವೈದಿಕರ ಪುರಾಣದೊಂದಿಗೆ ಎದುರು ಬದುರು ಇಟ್ಟು ನೋಡಿದಾಗ ಈ “ವೈದಿಕ ಆಕ್ರಮಣ” ದ ಕತೆ ಢಾಳಾಗಿ ಕಾಣುತ್ತದೆ.

ಕೇರಳದಲ್ಲಿ ಓಣಂ ಹಬ್ಬದ ಹತ್ತನೆಯ ದಿನ ತಿರುಓಣಂ ಮಹಾಬಲಿಯು ಮರಳಿ ಬರುತ್ತಾನೆಂದು ನಂಬುವ ದಿನ. ಬಲಿರಾಜನ ಮಾವೇಲಿನಾಡಿನ ನೆನಪಿನ ದಿನ. ನಮ್ಮ ತುಳುನಾಡಿನ ಪಾಡ್ದನಗಳಲ್ಲಿ ಬಲಿರಾಜನನ್ನು ಮರಳಿ ಕರೆಯುವ ವಾಡಿಕೆ ಇದೆ. ಆದರೆ ತುಳು ಪಾಡ್ದನಗಳಲ್ಲಿ ಇರುವ ವಿವರಣೆಗಳನ್ನು ನೋಡಿದಾಗ ನಮಗೆ ವಿರೋಧಾಭಾಸವೊಂದು ಅರಿವಿಗೆ ಬರುತ್ತದೆ. ಬಲೀಂದ್ರ ಲೆಪ್ಪು ಎಂದು ಕರೆಯುವ ಪಾಡ್ದನದಲ್ಲಿ ಬಲ ಬಲಿಯೇಂದ್ರ ಎಂದು ಕರೆಯುವ ತುಳುವರು ಕರಿಕಲ್ಲು ಕಾಯಾದಾಯ, ಬಿಳಿಕಲ್ಲು ಹೂವಾದಾಗ, ಕಲ್ಲ ಕೋಳಿ ಕೂಗಿದಾಗ…. ನಮ್ಮ ಬಲಿಯೇಂದ್ರ ಬರುತ್ತಾನೆ ಎನ್ನುತ್ತಾರೆ. ಪ್ರಾಯಶಃ ಇದು ನಮ್ಮ ಜನಪದೀಯರು ತಾವು ಕಳೆದುಕೊಂಡದ್ದು ಮರಳಿ ಬರುವುದಿಲ್ಲ ಎಂಬ ಅರಿವಿನಿಲ್ಲಿ ವಿಷಾದದಿಂದ ಕಟ್ಟಿದ ಪಾಡ್ದನವಾಗಿರಬಹುದು.

ಮಹಾರಾಷ್ಟ್ರದಲ್ಲಿ ಸ್ವಾಭಿಮಾನಿ ಚಳವಳಿ ಹುಟ್ಟುಹಾಕಿದ ಜ್ಯೋತಿಬಾ ಫುಲೆ ತಮ್ಮ “ಗುಲಾಮಗಿರಿ” ಕೃತಿಯಲ್ಲಿ ಮಹಾಬಲಿಯನ್ನು ದ್ರಾವಿಡ ಶೂದ್ರ ರಾಜನೆಂದು ಕರೆದು ವೈದಿಕ ನರೆಟಿವ್ ಗೆ ಎದುರುಬದುರಾಗಿ ನಿಲ್ಲಿಸುತ್ತಾರೆ. ಪುರಾಣಕತೆಗಳು, ಐತಿಹ್ಯಗಳು ಜನರನ್ನು ಗುಲಾಮ ಮನಸ್ಥಿತಿಗೆ ಕೊಂಡೊಯ್ಯಲು ವಹಿಸಿದ ದೊಡ್ಡ ಪಾತ್ರದ ಅರಿವಿದ್ದ ಜ್ಯೋತಿಬಾ ಫುಲೆ ಪ್ರತಿಪುರಾಣದ ಮೊರೆ ಹೋಗಿರಬಹುದು. ಕೇರಳದಲ್ಲಿ ನಾರಾಯಣ ಗುರುಗಳ ಶಿಷ್ಯರಾಗಿದ್ದ ಸಹೋದರನ್ ಐಯಪ್ಪನ್ ಸಹ ತಮ್ಮ ಬರೆಹವೊಂದರಲ್ಲಿ “ವಾಮನನನ್ನು ತಿರಸ್ಕರಿಸಿ ಮಹಾಬಲಿಯ ನ್ಯಾಯದ ಆಡಳಿತವನ್ನು ಸ್ವಾಗತಿಸೋಣ” ಎಂದು ಕರೆ ನೀಡುತ್ತಾರೆ.

ನಮ್ಮ ಜಾನಪದ ಕಥನ ಸಂಸ್ಕೃತಿ, ಜಾನಪದ ಆಚರಣೆ ಹಾಗೂ ವೈದಿಕ ಸಂಸ್ಕೃತಿಯಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುವ ಮಹಾಬಲಿ/ಮಾವೇಲಿಯ ಕಥೆಗಳು ಅಧ್ಯಯನ ಯೋಗ್ಯವಾಗಿವೆ ಮಾತ್ರವಲ್ಲ ಸಮಾನತಾವಾದಿ ಸಂಸ್ಕೃತಿ ನಿರ್ಮಾಣದಲ್ಲಿ ಮುಖ್ಯವಾಗಬಹುದಾದ ಆಕರಗಳೂ ಆಗಿವೆ.‌

ಹರ್ಷಕುಮಾರ್‌ ಕುಗ್ವೆ
ಇವರು ಕನ್ನಡದ ಒಬ್ಬ ಪ್ರಮುಖ ಚಿಂತಕರು, ಬರಹಗಾರರು, ಸಂಶೋಧಕರು ಮತ್ತು ಪತ್ರಕರ್ತರು. ಪ್ರಸ್ತುತ ‘ಕನ್ನಡ ಪ್ಲಾನೆಟ್’ ಜಾಲತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More articles

Latest article

Most read