ಬ್ರಿಟಿಷ್ ಸೆನ್ಸಾರ್ ಬೋರ್ಡ್ ಟಾಕ್ಸಿಕ್ ಚಿತ್ರವನ್ನು ತಮಿಳು ಸಿನಿಮಾ ಎಂದು ವರ್ಗೀಕರಣ ಮಾಡಿದ್ದೇಕೆ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (BBFC) 18+ ಪ್ರಮಾಣಪತ್ರ ನೀಡಿದ್ದು, ಹಿಂಸೆ, ಲೈಂಗಿಕತೆ ಹಾಗೂ ಗಾಯದ ವಿವರಗಳಿಗೆ 5/5 ರೇಟಿಂಗ್ ನೀಡಿದೆ.

ಆದರೆ ಈ ಪ್ರಮಾಣಪತ್ರದ ಮತ್ತೊಂದು ಅಂಶ ಇದೀಗ ಕನ್ನಡಿಗರ ಗಮನ ಸೆಳೆದಿದೆ. BBFCಯ ವೆಬ್‌ಸೈಟ್‌ನಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಕನ್ನಡ ಸಿನಿಮಾ ಎನ್ನುವ ಬದಲು ‘Tamil-language’ ಸಿನಿಮಾ ಎಂದು ವರ್ಗೀಕರಿಸಲಾಗಿದೆ. ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣವಾಗಿದೆ.

ಬ್ರಿಟಿಷ್ ಸೆನ್ಸಾರ್ ಮಂಡಳಿ ‘ಟಾಕ್ಸಿಕ್’ ಅನ್ನು ತಮಿಳು ಸಿನಿಮಾ ಎಂದು ಏಕೆ ದಾಖಲಿಸಿದೆ ಎಂಬ ಪ್ರಶ್ನೆ ಇದೀಗ ಎದ್ದಿದೆ. ಇದಕ್ಕೆ BBFCಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಈ ವರ್ಗೀಕರಣಕ್ಕೆ ಕಾರಣವೇನು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

BBFCಯ ದಾಖಲೆಗಳಲ್ಲಿ ಭಾರತೀಯ ಚಿತ್ರಗಳ ಭಾಷೆಯನ್ನು ದಾಖಲಿಸುವಾಗ ಇಂತಹ ವರ್ಗೀಕರಣದ ನಮೂದುಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, BBFCಯ ಹಿಂದಿನ ಹಲವು ದಾಖಲೆಗಳಲ್ಲಿ ಚಿತ್ರಗಳ ಭಾಷೆಯನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ.

ಇನ್ನು ‘ಟಾಕ್ಸಿಕ್’ಗೆ ನೀಡಿರುವ 18+ ಪ್ರಮಾಣಪತ್ರದ ಪ್ರಕಾರ, ಹಿಂಸೆ, ಲೈಂಗಿಕತೆ ಮತ್ತು ಗಾಯದ ವಿವರಗಳಿಗೆ ಅತ್ಯಧಿಕ 5/5 ರೇಟಿಂಗ್ ನೀಡಲಾಗಿದೆ. ಗುಂಡಿನ ದಾಳಿ, ಇರಿತ, ಚಿತ್ರಹಿಂಸೆ, ನೇಣು, ಬೆಂಕಿ ಹಚ್ಚುವುದು ಹಾಗೂ ದೇಹದ ಅಂಗಾಂಗಗಳನ್ನು ಕತ್ತರಿಸುವಂತಹ ತೀವ್ರ ಹಿಂಸೆಯ ದೃಶ್ಯಗಳಿರುವುದಾಗಿ BBFCಯ ವಿಷಯ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಈಗಾಗಲೇ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘A’ ಪ್ರಮಾಣಪತ್ರ ನೀಡಿದೆ. ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.

More articles

Latest article

Most read