ಬೆಂಗಳೂರು, ಸೆ.05 : ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ‘ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ 31 ಜನ ಶಿಕ್ಷಕರನ್ನು (ಪ್ರಾಥಮಿಕ 20, ಪ್ರೌಢಶಾಲೆ 11) ಆಯ್ಕೆ ಮಾಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಸೆಪ್ಟೆಂಬರ್ 05ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರತಿ ಪುರಸ್ಕೃತರಿಗೆ ರೂ. 25,000 ನಗದು ಪುರಸ್ಕಾರ ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರ ವಿವರ: (ಶೈಕ್ಷಣಿಕ ಜಿಲ್ಲಾ ವಾರು)
ಪ್ರಾಥಮಿಕ ಶಾಲೆ: ಸಿ. ಉಮಾ (ಬೆಂಗಳೂರು ಗ್ರಾಮಾಂತರ ), ಬಸಪ್ಪ ಪರಪ್ಪ ಪಾಟೀಲ (ಚಿಕ್ಕೋಡಿ), ಅಶೋಕ (ಉಡುಪಿ), ಕೆ. ಸುರೇಶ್ (ರಾಯಚೂರು), ಉಷಾ ವಿ ನಾಯಕ (ಉತ್ತರ ಕನ್ನಡ), ಮಸ್ತಾನ ವಲಿ (ಚಿಕ್ಕಬಳ್ಳಾಪುರ), ಪ್ರಭಾವತಿ ಬಾಳಪ್ಪ ಹಾಲೇನ್ನವರ (ಬೆಳಗಾವಿ), ಸರೋಜಮ್ಮ (ಚಾಮರಾಜನಗರ), ನಿಂಗಪ್ಪಾ (ಕಲಬುರಗಿ), ಎನ್.ಎಂ. ರತ್ನಮ್ಮ (ಬೆಂಗಳೂರು ದಕ್ಷಿಣ), ನೇಮಣ್ಣ ಬಮ್ಮಣ್ಣ ಜಮಖಂಡಿ (ಬಾಗಲಕೋಟೆ), ರಾಮಚಂದ್ರ ಈ. ನಾಯ್ಕ (ಶಿರಸಿ), ಮಾಲಿನಿ ಎಂ. (ಮಧುಗಿರಿ), ಕುಮಾರ ನಾಯಕ ಬಿ.ಡಿ. (ಶಿವಮೊಗ್ಗ), ಕೃಷ್ಣಮೂರ್ತಿ ಕೆ.ಎಸ್. (ಬೆಂಗಳೂರು ಉತ್ತರ), ಮಲ್ಲಿಕಾರ್ಜುನ ಬಡಿಗೇರ (ದಾವಣಗೆರೆ), ಪ್ರೇಮಕುಮಾರ್ ವಿ.ಎಸ್. (ತುಮಕೂರು), ದುರಗಪ್ಪ ಎಚ್. (ಬಳ್ಳಾರಿ), ಮೈಲಾರಪ್ಪ ಬೂದಿಹಾಳ (ಕೊಪ್ಪಳ).
ಪ್ರೌಢಶಾಲೆ: ಬಿರಾದರ ಸಿದ್ದಪ್ಪ ವೀರಭದ್ರಪ್ಪ (ಶಿರಸಿ), ಶೈನಕುಮಾರಿ ಎಂ. (ಬೆಂಗಳೂರು ದಕ್ಷಿಣ), ಕುಬೇರ ನಾಯ್ಕ ಬಿ. (ಶಿವಮೊಗ್ಗ), ನೀಲಕಂಠ ಗಾಂವಕರ್ (ಬೆಂಗಳೂರು ಗ್ರಾಮಾಂತರ), ವಿ. ವೆಂಕಟೇಶ್ (ಚಿಕ್ಕಬಳ್ಳಾಪುರ), ಮಮತಾ ಆರ್. ನಾಯ್ಕ (ಉತ್ತರ ಕನ್ನಡ), ರೋಶನ್ ಅಲೆಕ್ಸಾಂಡರ್ ಪಿಂಟೋ (ದಕ್ಷಿಣ ಕನ್ನಡ), ಜಯಶೀಲ (ಮೈಸೂರು), ಮಥಾಯಿ ಟಿ. (ಚಿಕ್ಕಮಗಳೂರು), ಜಯಪ್ಪ ಕೆ.ಟಿ. (ದಾವಣಗೆರೆ), ಆನಂದ ಮಾದೇವ ಝಂಡೆ (ವಿಜಯಪುರ).
ಉತ್ತಮ ಪ್ರಾಂಶುಪಾಲ ಪ್ರಶಸ್ತಿ
ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ಕಾರಿ, ಖಾಸಗಿ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ಇಬ್ಬರು ಪ್ರಾಂಶುಪಾಲರು ಮತ್ತು 8 ಮಂದಿ ಉಪನ್ಯಾಸಕರಿಗೆ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ನೀಡಲು ಆಯ್ಕೆ ಮಾಡಲಾಗಿದೆ.
ಪ್ರಾಂಶುಪಾಲರು: ಶ್ರೀಕಂಠಯ್ಯ (ಬೆಂಗಳೂರು ಉತ್ತರ), ಜೈರಾಮ್ ಬಿ (ತುಮಕೂರು).
ಉಪನ್ಯಾಸಕರು: ಶ್ರೀನಿವಾಸ ಡಿ (ಮೈಸೂರು), ಸೌಮ್ಯ ಎಲ್. (ಬೆಂಗಳೂರು ಉತ್ತರ), ಪ್ರಮೀಳಾ ಎಚ್. (ಬೆಂಗಳೂರು ಕೇಂದ್ರ), ವಾಸು ಎಚ್.ಬಿ. (ಮೈಸೂರು), ನಜೀಮಾ ಜಮಷೇದ್ ಖಾನ್ ಪಠಾಣ (ವಿಜಯಪುರ), ನಿಂಗಪ್ಪ ಕುರುಬರ (ಚಿಕ್ಕೋಡಿ), ಇಬ್ರಾಹಿಂ ಎಂ. (ದಕ್ಷಿಣ ಕನ್ನಡ), ಸವಿತ ಬಿ. (ಕಲಬುರಗಿ).

