ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು: ಸಿದ್ದರಾಮಯ್ಯ

ಬೆಂಗಳೂರು: ನಾನು ಶಕ್ತಿ ರಾಜಕಾರಣದಿಂದ ದೂರ ಇರುತ್ತೇನೆ ಆದರೆ ಚುನಾವಣಾ ರಾಜಕಾರಣದಿಂದ ಮಾತ್ರ ದೂರ ಇರುತ್ತೇನೆ. ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಆದರೆ ಈ ಸಮಾಜದಲ್ಲಿ ಸಮಾನತೆಯ ಹೋರಾಟದಲ್ಲಿ ಕೊನೆಯವರೆಗೂ ನಿಮ್ಮೊಂದಿಗೆ ಇರಲಿದ್ದೇನೆ, ನೀವು ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ” ಎಂದು ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರು ಇಂದು ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ಬೆಳ್ಳಿಹಬ್ಬದ ಸಮಾವೇಶದಲ್ಲಿ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಇನ್ನೂ ಸಮಾನತೆ ಬಂದಿಲ್ಲ, ಜಾತಿ ವ್ಯವಸ್ತೆ ಇರುವವರೆಗೂ ಹೋರಾಟ ಇರಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಅಲಿಖಿತ ಸಂವಿಧಾನವಾಗಿ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಶ್ರೇಣೀಕೃತ ವ್ಯವಸ್ಥೆ ಹುಟ್ಟುಹಾಕಿತ್ತು.‌ ಆದರೆ ಈ ದೇಶದಲ್ಲಿ ಒಂದು ದಿನ ಸಮಾನತೆಯ ಸಮಾಜ ನಿರ್ಮಾಣ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.‌
ಜಾತಿ ಸಮೀಕ್ಷೆ ವರದಿ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.‌ ನಾನು 1996ರಲ್ಲಿ ಡಿಸಿಎಂ ಆಗಿದ್ದಾಗ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು ಎಂಬ ಕನಸು ಕಂಡಿದ್ದೆ. ನ್ಯಾಯಾಲಯಗಳು ಸರಿಯಾದ ರೀತಿ ಸಮೀಕ್ಷೆ ಆಗಿಲ್ಲ, ನಿಖರವಾದ ಅಂಕಿಅಂಶ ಇಲ್ಲ ಅಂತ ಅನೇಕ ಬಾರಿ ಹೇಳಿವೆ. ಅದಕ್ಕಾಗಿ ನಾನು 2013ರಲ್ಲಿ ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ಮಾಡಲು ಸೂಚನೆ ನೀಡಿದ್ದೆ‌. ಆದರೆ ನನ್ನ ಅವಧಿಯಲ್ಲಿ ವರದಿ ತಯಾರಾಗಲಿಲ್ಲ. ಚುನಾವಣೆ ಬಂದ ಬಳಿಕ ನಮ್ಮ ಪಕ್ಷ ಸೋತಿತು. ಆಮೇಲೆ ವರದಿ ಕೊಟ್ಟರು. ಬಳಿಕ ಕುಮಾರಸ್ವಾಮಿ ಸಿಎಂ ಆಗಿದ್ದರು.‌ ಆದರೆ ವರದಿ ಸ್ವೀಕಾರ ಮಾಡಲು ಕುಮಾರಸ್ವಾಮಿ ಒಪ್ಪಲಿಲ್ಲ ಎಂದರು.

2023ರಲ್ಲಿ ಸಿಎಂ ಆದ ಬಳಿಕ ಮತ್ತೆ ಹೊಸದಾಗಿ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೆ. ಮಧುಸೂದನ್ ನಾಯಕ್ ನೇತೃತ್ವದ ಆಯೋಗ ವರದಿ ನೀಡಿದೆ.‌ ನಾನು ಸಿಎಂ ಆಗಿ ಇಳಿಯುವ ಮೊದಲು ಆ ವರದಿಯನ್ನು ಸ್ವೀಕಾರ ಮಾಡಿದ್ದೇನೆ. ನ್ಯಾಯಾಲಯದಲ್ಲಿ ವರದಿ ಜಾರಿ ಮಾಡಬಾರದು, ಬಹಿರಂಗ ಮಾಡಬಾರದು ಎಂಬ ಆದೇಶ ಇದೆ. ಆ ಆದೇಶವನ್ನು ತೆರವು ಮಾಡಿ, ನಮ್ಮ ಪಕ್ಷ, ನಮ್ಮ ಸರ್ಕಾರ ಸಿಎಂ ಆದಿಯಾಗಿ ನನ್ನ ಮಾತು ಕೇಳುತ್ತಾರೆ ಎಂಬ ನಂಬಿಕೆ ಇದೆ. ಜಾತಿ ಸಮೀಕ್ಷೆ ವರದಿ ಜಾರಿಯಾಗಲೇಬೇಕು. ನಿಮಗೆ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ಕನಿಷ್ಠ ಮೀಸಲಾತಿ ಶೇ.75ರಷ್ಟು ಸಿಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಸಮಾನ‌ ಅವಕಾಶ ಬಂದಿಲ್ಲ. ಅಸಮಾನತೆ ತೊಲಗಿಲ್ಲ.‌ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ಸ್ವಾತಂತ್ರ್ಯ ಬಂದು 79 ವರ್ಷ ಆಯ್ತು. ಆದರೆ ಇನ್ನೂ ಸಮಾನ ಅವಕಾಶ, ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆಯೋ, ಅಲ್ಲಿವರೆಗೆ ನಿಮ್ಮ‌ ಹೋರಾಟ ಇರಬೇಕು. ಮನುಸ್ಮೃತಿ ಅಲಿಖಿತ ಸಂವಿಧಾನವಾಗಿದೆ. ಅದರ ಪ್ರಕಾರ ಜಾತಿಗಳನ್ನು ಒಡೆದು, ಶ್ರೇಣೀಕೃತ ವ್ಯವಸ್ಥೆ ನಿರ್ಮಾಣ ಮಾಡಿ ಪಟ್ಟಬದ್ಧ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಕೆಟಗರಿ 2A, ಕೆಟಗರಿ 1ನಲ್ಲಿ ಸುಮಾರು 752 ಜಾತಿಗಳು ಇವೆ. ಒಟ್ಟು ಹಿಂದುಳಿದ ಜಾತಿಗಳ ಸಂಖ್ಯೆ 806. ನಾನು ಎಲ್ಲಾ ಶೋಷಿತ ವರ್ಗದ ಜೊತೆ ಇರುತ್ತೇನೆ.‌ ಜಾತಿ ವ್ಯವಸ್ಥೆ ನಿರ್ಮೂಲನೆ ಆಗುವವರೆಗೆ ನಿಮ್ಮ ಜೊತೆ ಹೋರಾಟ ಮಾಡುತ್ತೇನೆ. ನಾನು ನನ್ನ ಆಡಳಿತಾವಧಿಯಲ್ಲಿ ಎಲ್ಲಾ ಭಾಗ್ಯಗಳನ್ನು ಕೊಡಲು ನೀವು ನೀಡಿದ ಶಕ್ತಿ ಮತ್ತು ಆಶೀರ್ವಾದವೇ ಕಾರಣ. ನಿಮ್ಮ ಹೋರಾಟದಲ್ಲಿ ನಾನು ಯಾವತ್ತೂ ನಿಮ್ಮ ಜೊತೆ ಇರುತ್ತೇನೆ ಎಂದರು.

ಶೈಕ್ಷಣಿಕ ಸಮಾಜಿಕ ಸಮೀಕ್ಷೆಯಾಗಬೇಕು ಎಂಬ ಉದ್ದೇಶದಿಂದ ನಾನು ಕಾಂತರಾಜ್ ಆಯೋಗ ನೇಮಿಸಿದ್ದೆ, ಆದರೆ ವರದಿ ಆ ಅವಧಿಯಲ್ಲಿ ತಯಾರಾಗಲಿಲ್ಲ. ನಂತರ ವರದಿಯನ್ನು ಸ್ವೀಕರಿಸಲು ಎಚ್ ಡಿ ಕುಮಾರಸ್ವಾಮಿಯವರು ಒಪ್ಪಲಿಲ್ಲ. ನಂತರ ಮತ್ತೆ ಮುಖ್ಯಂಮತ್ರಿ ಆಗುವ ವೇಳೆಗೆ ಮಧುಸೂಧನ್ ನಾಯ್ಕ್ ಅವರ ಆಯೋಗ ನೇಮಿಸಿ ಅದು ತನ್ನ ವರದಿ ನೀಡಿದೆ. ನಾನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವ ಸಂದರ್ಭದಲ್ಲಿ ಆ ವರದಿಯನ್ನು ಸ್ವೀಕಾರ ಮಾಡಿದ್ದೇನೆ.

ನಮ್ಮ ಪಕ್ಷ, ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಇದನ್ನು ಜಾರಿಗೊಳಿಸುತ್ತಾರೆ ಎಂಬ ನಂಬಿಕೆ ಇದೆ.‌ ನಮ್ಮ ರಾಜ್ಯದಲ್ಲಿ 75% ಮೀಸಲಾತಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಸಿಗಲೇಬೇಕು. ಜಾತಿಗಳ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಸಿದ್ದರಾಮಯ್ಯ ಹೇಳಿದರು.‌

ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಬೈರತಿ ಸುರೇಶ್ ಮೊದಲಾದವರು ಹಾಜರಿದ್ದರು.

More articles

Latest article

Most read