ಮೊಳಹಳ್ಳಿಯವರನ್ನು ಮತ್ತು ಮಲ್ಯರನ್ನು ಓದುವುದೆಂದರೆ ಅದು 20 ನೆಯ ಶತಮಾನದ ಚರಿತ್ರೆಗೆ ಪ್ರವೇಶ ಮಾಡಿದ ಹಾಗೆ –  ಡಾ.ಪುರುಷೋತ್ತಮ ಬಿಳಿಮಲೆ

ಅರವಿಂದ ಚೊಕ್ಕಾಡಿಯವರ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಕೃತಿ ಬಿಡುಗಡೆ

ಮಂಗಳೂರು :
ಮೊಳಹಳ್ಳಿ ಶಿವರಾವ್ ಅವರು ಗ್ರಾಮೀಣ ಮಟ್ಟದಲ್ಲಿ ಸಹಕಾರ ಚಳವಳಿಯ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ಚೈತನ್ಯವನ್ನು  ಗಳಿಸಿಕೊಟ್ಟರೆ, ಶ್ರೀನಿವಾಸ್ ಮಲ್ಯ ಅವರು ನಗರ ಕೇಂದ್ರಿತವಾಗಿ ಬೃಹತ್ ಮೂಲಸೌಕರ್ಯಗಳನ್ನು ತಂದು ಜಿಲ್ಲೆಗೆ ಹೊಸ ರೂಪ ನೀಡಿದರು.  ಈ ಇಬ್ಬರು ಮಹನೀಯರ ಕೊಡುಗೆಯಿಂದಲೇ ಕರಾವಳಿ ಇಂದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂಚೂಣಿಯಲ್ಲಿದೆ. ಮಲ್ಯರನ್ನು ಮತ್ತು ಮೊಳಹಳ್ಳಿಯವರನ್ನು ಓದುವುದೆಂದರೆ ಅದು ೨೦ನೆಯ ಶತಮಾನದ ಚರಿತ್ರೆಗೆ ಪ್ರವೇಶ ಮಾಡಿದ ಹಾಗೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ,  ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಕಟಿಸಿರುವ ಚಿಂತಕ ಅರವಿಂದ ಚೊಕ್ಕಾಡಿ ಅವರ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಕೃತಿ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ  ಕೃತಿ ಬಿಡುಗಡೆ ಮಾಡಿ ಅವರು  ಮಾತನಾಡುತ್ತಿದ್ದರು.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಅಭಿವೃದ್ಧಿಗೆ ಕಾರಣೀ ಭೂತರಾದವರಲ್ಲಿ ಮೊಳಹಳ್ಳಿ ಶಿವರಾವ್ ಮತ್ತು  ಯು. ಶ್ರೀನಿವಾಸ್ ಮಲ್ಯ ಅತ್ಯಂತ ಪ್ರಮುಖರು ಎಂದು ಬಣ್ಣಿಸಿದ ಅವರು  ಮಂಗಳೂರು ಬಂದರು (NMPT), ಪಣಂಬೂರು ಕೈಗಾರಿಕಾ ವಲಯ, KREC ಸುರತ್ಕಲ್, ಮಂಗಳೂರು ವಿಮಾನ ನಿಲ್ದಾಣ, ಆಕಾಶವಾಣಿ, ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಸಂಪರ್ಕಗಳು ಜಿಲ್ಲೆಗೆ ಬರಲು ಮಲ್ಯ ಅವರ ನಿಸ್ವಾರ್ಥ ರಾಜಕೀಯ ಮತ್ತು ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು. ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಕಮಲಾ ದೇವಿ ಚಟ್ಟೋಪಾಧ್ಯಾಯರು ದೆಹಲಿಯಲ್ಲಿ ಶ್ರೀನಿವಾಸ ಮಲ್ಯ ಮೆಮೋರಿಯಲ್‌ ಮ್ಯೂಸಿಯಂ ಸ್ಥಾಪಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದರು. ಆದರೆ ನಮಗೆ ಮೊಳಹಳ್ಳಿಯವರ ಹೆಸರನ್ನು ಹಾಗೆ ಉಳಿಸಲು ಸಾಧ್ಯ ಆಗಿಲ್ಲ ಎಂದು ವಿಷಾದಿಸಿದ ಅವರು ಕನಿಷ್ಠ ಈಗಾದರೂ  ಅವರ ಬಗ್ಗೆ ಒಂದು ಪುಸ್ತಕ ಪ್ರಕಟವಾಗಿರುವುದು ಸಂತೋಷ ಎಂದರು.

ಮೊಳಹಳ್ಳಿ ಶಿವರಾಯರು ಕೇವಲ ಸಹಕಾರ ಕ್ಷೇತ್ರಕ್ಕೆ ಸೀಮಿತವಾಗದೆ, ಗ್ರಾಮೀಣ ಜನರ ಶಿಕ್ಷಣ, ಆರ್ಥಿಕ ಉನ್ನತಿ ಹಾಗೂ ಸಾಮಾಜಿಕ ಜಾಗೃತಿಗೆ ಬುನಾದಿ ಹಾಕಿದ ಬಗೆಯನ್ನು ಬಿಳಿಮಲೆಯವರು ವಿವರಿಸಿದರು.  ಮೊಳಹಳ್ಳಿಯವರು ಹಳ್ಳಿ ಹಳ್ಳಿಗಳಿಗೆ ಹೋಗಿ ಶಾಲೆ, ಸಹಕಾರಿ ಬ್ಯಾಂಕುಗಳನ್ನು ತೆರೆದರು. ಸಮಾಜ ಸುಧಾರಣೆಯ ಭಾಗವಾಗಿ ಸಹಕಾರವನ್ನು ಆರಿಸಿಕೊಂಡರು. ಅವರ ಸಮಗ್ರ ಅಭಿವೃದ್ಧಿಯ ಕಲ್ಪನೆಯಲ್ಲಿ ಸರ್ವೋದಯ ಧೋರಣೆಯಿತ್ತು. ಗಾಂಧೀಜಿ ಅವರ ಮೂಲ ಶಿಕ್ಷಣ ದ ಪರಿಕಲ್ಪನೆ  ಮತ್ತು ಠಾಗೋರರ  ಚಟುವಟಿಕೆ ಕೇಂದ್ರಿತ ಕಲ್ಪನೆ ಎರಡನ್ನೂ  ಮೊಳಹಳ್ಳಿಯವರು ಸಹಕಾರದ ಮೂಲಕ ಮಾಡಿ ತೋರಿಸಿದರು ಎಂದು ಸ್ಮರಿಸಿದರು.  

ಬದುಕಿರದ ವ್ಯಕ್ತಿಯ ಬಗ್ಗೆ ಬರೆಯುವುದು ಸುಲಭವಲ್ಲ. ಶಿವರಾಮ ಕಾರಂತರು ಬರೆದ ಅಳಿದ ಮೇಲೆ ಕಾದಂಬರಿಯಲ್ಲಿ ಯಶವಂತರಾಯರು ಅಳಿದ ಮೇಲೆ ಏನು ಉಳಿಸಿದರು ಎಂಬುದರ ಹುಡುಕಾಟ  ನಡೆಸಿದ ತಂತ್ರವನ್ನು ಬಳಸಿ ಅರವಿಂದ ಚೊಕ್ಕಾಡಿಯವರು ಮೊಳಹಳ್ಳಿಯವರು ಬಿಟ್ಟು ಹೋದ ನೆನಪುಗಳನ್ನು ಹೆಕ್ಕಿ ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಿದ ಕೆಲಸ ಮಾಡಿದ್ದಾರೆ. ಚುಕ್ಕಿಗಳನ್ನು ಅಂದವಾಗಿ ಜೋಡಿಸಿದ್ದಾರೆ. ಈ ಒಂದೊಂದು ಘಟನೆಗಳೂ ಸ್ವತಂತ್ರವೂ ಹೌದು, ಒಟ್ಟಂದದಲ್ಲಿ ಪರಸ್ಪರ ಜೋಡಿಸಿಕೊಂಡಿರುವುದೂ ಹೌದು- ಮಲ್ಲಿಗೆಯ ಮಾಲೆಯ ಹಾಗೆ ಎಂದು ಶ್ಲಾಘಿಸಿದರು.

ಯು. ಶ್ರೀನಿವಾಸ ಮಲ್ಯ, ಕಾರ್ನಾಡ್ ಸದಾಶಿವರಾಯರು, ಬಿ. ವಿ. ಕಕ್ಕಿಲ್ಲಾಯ, ಡಾ. ಕೆ. ಶಿವರಾಮ ಕಾರಂತರು, ಬೆನಗಲ್ ನರಸಿಂಹರಾಯರು, ಕುದ್ಮುಲ್ ರಂಗರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಅಮೆಂಬಳ ಸುಬ್ಬರಾಯ ಪೈ, ಹಾಜಿ ಅಬ್ದುಲ್ಲಾರಂತಹ ಮರೆವಿಗೆ ಸಂದ ಮಹನೀಯರನ್ನು ಸ್ಮರಿಸುತ್ತಾ ಈ  ಮಹಾನಾಯಕರ ಚಿಂತನೆಗಳು ಹಾಗೂ ಕೊಡುಗೆಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಆಕರ ಕೃತಿಗಳು ಹೆಚ್ಚೆಚ್ಚು ಹೊರಬರಬೇಕಾಗಿದೆ.   ಕರಾವಳಿಯ ಇತಿಹಾಸ ಮತ್ತು ನಾಯಕರ ಸಾಧನೆಗಳನ್ನು ದಾಖಲಿಸುವ ಇಂತಹ ಸಾಹಿತ್ಯಿಕ ಪ್ರಯತ್ನಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸದಾ ಬೆಂಬಲ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಮಹಿಳಾ ಸಬಲೀಕರಣದ ನೆಲೆಯಲ್ಲಿ ʼಮೊಗೆದಷ್ಟೂ ಮೊಳೆಯುವ ಮೊಳಹಳ್ಳಿʼ ಎಂಬ ವಿಷಯದ ಮೇಲೆ ಮಾತಾಡಿದ ಡಾ. ನಿಕೇತನ ಅವರು ಹೆಣ್ಣುಮಕ್ಕಳು ಶಾಲೆಗೆ ಹೋಗುವ ಕಲ್ಪನೆಯೇ ಇರದಿದ್ದಾಗ ಆ ಕಲ್ಪನೆಯನ್ನು ಮೂಡಿಸಿದವರು ಶಿವರಾಯರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶಿಕ್ಷಣವೇ ಬುನಾದಿ ಎಂಬುದನ್ನು ಅರಿತ ಅವರು ಹುಡುಗಿಯರನ್ನು ಶಾಲೆಯತ್ತ ಸೆಳೆದರು. ಅವರ ಸಬಲೀಕರಣದ ಸ್ಫೂರ್ತಿ ಅವರ ಮಡದಿಯೇ ಆಗಿದ್ದರು ಎಂದರು.  ಸಾರ್ವಜನಿಕ ಬದುಕು ಮತ್ತು ಕೌಟುಂಬಿಕ ಬದುಕು ಎರಡನ್ನೂ ಆಪ್ತತೆಯಿಂದ ಕಾಯ್ದುಕೊಳ್ಳಬೇಕು ಎಂಬುದಕ್ಕೆ ಶಿವರಾಯರು ಉದಾಹರಣೆ ಎಂದು ಅಭಿಪ್ರಾಯ ಪಟ್ಟ ಅವರು ಶಿವರಾಯರ ಮಾತೃಹೃದಯದ ಒಳನೋಟಗಳನ್ನು, ಚಿಕಿತ್ಸಕ ದೃಷ್ಟಿಕೋನವನ್ನು ಈ ಕೃತಿಯು ನೀಡುತ್ತದೆ ಎಂದರು.

ಶೈಕ್ಷಣಿಕ ಕೊಡುಗೆಯ ನೆಲೆಯಲ್ಲಿ ʼಮೊಗೆದಷ್ಟೂ ಮೊಳೆಯುವ ಮೊಳಹಳ್ಳಿʼ ವಿಷಯದ ಮೇಲೆ ಮಾತಾಡಿದ ಡಾ. ರೋಹಿಣಾಕ್ಷ ಶಿರ್ಲಾಲು, ಶಿಕ್ಷಣದಿಂದ ಬದಲಾವಣೆ ಸಾಧ್ಯ ಎಂಬ ದೂರದೃಷ್ಟಿಯಲ್ಲಿ ಮೊಳಹಳ್ಳಿಯವರು ಹಳ್ಳಿಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಗ್ರಾಮದ ಸಬಲೀಕರಣಕ್ಕೆ ಶಿಕ್ಷಣದ ಕೊಡುಗೆ ಅಪಾರವಾದುದು ಎಂಬುದರ ಅರಿವು ಅವರಲ್ಲಿತ್ತು. ಪ್ರಜಾಪ್ರಭುತ್ವದ ಅರಿವೇ ಇಲ್ಲದ ಕಾಲದಲ್ಲಿ ಪಂಚಾಯತ್‌ ವ್ಯವಸ್ಥೆ ಮತ್ತು ಆ ವ್ಯವಸ್ಥೆಯ ಮೂಲಕ ಊರಿನ ಶಾಲೆಗಳನ್ನು ಎತ್ತಿ ನಿಲ್ಲಿಸುವ ಅವರ ಚಿಂತನಾ ಕ್ರಮ ಅಪೂರ್ವವಾದುದು. ಎಲ್ಲ ಸಮುದಾಯದ ವಿದ್ಯಾರ್ಥಿಗಳನ್ನು ಜತೆಯಲ್ಲಿ ಕುಳ್ಳಿರಿಸಿ ಕಲಿಸಿದ್ದು ಸಮಾಜದ ದೊಡ್ಡ ಪರಿವರ್ತನೆಗೆ ಸಾಧನವಾಯಿತು ಎಂದ ಅವರು ಮೊಳಹಳ್ಳಿಯವರು ಸಹಕಾರಿ ತತ್ವವನ್ನು ಶಿಕ್ಷಣ ಸಂಸ್ಥೆಗಳ ಮೂಲಕ ಬೆಳೆಸಿದರೇ ಹೊರತು ಎಂದೂ ಅವುಗಳ ಮಾಲಕರಾಗಲಿಲ್ಲ ಎಂದರು . ಆದರೆ ಅವರು ಕೊಟ್ಟ ಆದರ್ಶಗಳನ್ನು ನಾವೆಷ್ಟರ ಮಟ್ಟಿಗೆ ಪಾಲಿಸಿದ್ದೇವೆ? ಅವರು ಬಿತ್ತಿದ ಬೀಜವನ್ನು ನಾನೆಷ್ಟು ಪೋಷಿಸಿದ್ದೇವೆ ಎಂದು ಪ್ರಶ್ನಿಸಿದ ಅವರು ದಕ್ಷಿಣ ಕನ್ನಡದ ಖಾಸಗಿ ಕಾಲೇಜುಗಳಲ್ಲಿ ಶೋಷಿತ ಸಮುದಾಯದ ಪ್ರಾಂಶುಪಾಲರು ಇರುವ ಕಾಲೇಜು ಯಾವುದಿದೆ? ಮುಜರಾಯಿ ಇಲಾಖೆಯ ಅಡಿ ಬರುವ  ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಶೋಷಿತ ಸಮುದಾಯದವರಿದ್ದಾರೆಯೇ? ಎಂದು ಬಹು ಮಹತ್ವದ  ಪ್ರಶ್ನೆಯನ್ನು ಎತ್ತಿದರು.

ಮಂಗಳೂರು ವಿ ವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ್‌ ನಾಯಕ್‌ ಅಧ್ಯಕ್ಷತೆಯಲ್ಲಿ ನಡೆದ ಸಂವಾದದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಸಿ ಎ ಚಂದ್ರಕಾಂತ ರಾವ್‌, ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ ಕೆ ಸಲೀಂ, ಪತ್ರಕರ್ತ ಲಕ್ಷ್ಮಿ ಮಚ್ಚಿನ ಮತ್ತು ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ  ಪಾಲ್ಗೊಂಡಿದ್ದರು. ಅರವಿಂದ ಚೊಕ್ಕಾಡಿ ಸಮನ್ವಯಕಾರರಾಗಿ ಸಂವಾದ ನಡೆಸಿಕೊಟ್ಟರು.

ದ.ಕ ಸಹಕಾರ ಯೂನಿಯನ್‌ ನ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಅಧ್ಯಕ್ಷರಾಗಿ ಸಹಕಾರ ಅಧ್ಯಯನ  ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಸ್‌ ಆರ್‌ ಹರೀಶ್‌ ಆಚಾರ್ಯ ಎಲ್ಲರನ್ನೂ ಸ್ವಾಗತಿಸಿ  ಪ್ರಸ್ತಾವನಾ ಮಾತುಗಳನ್ನಾಡಿದರು. ವಾರುಣಿ ಕಾರ್ಯಕ್ರಮ ನಿರೂಪಿಸಿದರು.

More articles

Latest article

Most read