ಏ.29 ರಿಂದ ಮೇ.5ರವರೆಗೆ ಮಳೆಯಾಗಲಿದೆ : ಹವಾಮಾನ ಇಲಾಖೆ

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ತಾಪಮಾನ ಮಿತಿ ಮೀರಿದ್ದು, ಮಳೆಗಾಗಿ ಪ್ರಾರ್ಥನೆ ಮಾಡುವಂತಾಗಿದೆ. ಧಗೆ ಈಗಿಸಲು ವರುಣ ತಂಪೆರೆಯಬೇಕಾಗಿದೆ.
ಮೈಸೂರು ಭಾಗ ಹೊರತುಪಡಿಸಿ ಉಳಿದಿಡೆ ಮಳೆಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಏ.29ರವರೆಗೆ ಹಾಗೂ ಬೆಂಗಳೂರಿನಲ್ಲಿ ಮೇ 5ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏ.29 ರಿಂದ ಮಳೆ : ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಏ.29ರವರೆಗೆ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಏ.28ರಿಂದ ಮೇ 5ರವರೆಗೆ ಭಾರೀ ಗಾಳಿ, ಮಳೆಯಾಗಲಿದೆ ಎನ್ನಲಾಗುತ್ತಿದೆ.

ಜನ ತತ್ತರ : ಕಲ್ಯಾಣ ಕರ್ನಾಟಕ ಸೇರಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ದಾಟಿದ್ದರೂ, ಸೆಖೆಯ ಅನುಭವ 44-45 ಡಿಗ್ರಿಯಂತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳೂ ಇದಕ್ಕೆ ಹೊರತಾಗಿಲ್ಲ.
ಬಳಲಿಕೆ, ನಿರ್ಜಲೀಕರಣ ಮತ್ತಿತರೆ ಸಮಸ್ಯೆಗಳಿಂದ ಜನ-ಜಾನುವಾರು ತತ್ತರಿಸಿ ಹೋಗಿದ್ದಾರೆ. ಉಷ್ಣಾಘಾತದ ಹೊಡೆತ ತಪ್ಪಿಸಿಕೊಳ್ಳಲು ಜನರು ನಾನಾ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಬಳಲಿ ಬೆಂಡಾದ ಪಕ್ಷಿಗಳು : ಬಿಸಿಲಿನ ಬೇಗೆಗೆ ಕರುನಾಡು ಕಾದ ಕಬ್ಬಿಣದಂತಾಗಿದೆ. ಸುಡು ಬಿಸಿಲಿಗೆ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳೂ ಬಳಲಿ ಬೆಂಡಾಗಿದ್ದಾರೆ.

ಸಿಗ್ನಲ್‌ಗಳಲ್ಲಿ ಗ್ರೀನ್ ಮ್ಯಾಟ್‌ : ಕೆಲವು ನಗರಗಳ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಗ್ರೀನ್ ಮ್ಯಾಟ್‌ ನೆರಳಿನ ಹೊದಿಕೆ ವ್ಯವಸ್ಥೆ ಕಲ್ಪಿಸಿದೆ. ಕೆಲ ದೇಗುಲಗಳಲ್ಲೂ ಹಸಿರು ನೆರಳು ಪರದೆ ಅಳವಡಿಸಲಾಗಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣಕ್ಕೆ ಬಿಳಿ ಬಣ್ಣ ಬಳಿದು ಶಾಖ ತಗ್ಗಿಸುವ ಪ್ರಯತ್ನ ಮಾಡಲಾಗಿದೆ. ಕೆಲವು ಪಟ್ಟಣಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಹೆಲ್ಮೆಟ್ ಎಸಿ ನೀಡಲಾಗಿದೆ.

ಪ್ರಾಣಿಗಳಿಗೆ ಐಸ್‌ಕ್ಯೂಬ್‌ : ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿಗೆ ಐಸ್‌ಕ್ಯೂಬ್, ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಒಆರ್ ಎಸ್ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿ, ಪಕ್ಷಿಗಳ ಗೂಡುಗಳಲ್ಲಿ ನೀರಿನ ಕೊಳ ಹಾಗೂ ನೆರಳು ಇರುವಂತೆ ನೋಡಿಕೊಳ್ಳಲಾಗುತ್ತಿದೆ.

More articles

Latest article

Most read