Monday, May 20, 2024

ರಾಘವೇಂದ್ರ ರಾಜ್‍ಕುಮಾರ್ ಮೊದಲ ಸಿನಿಮಾದ ನಾಯಕಿಯದ್ದು 21ನೇ ವಯಸ್ಸಿಗೆ ನಡೆಯಿತು ದುರಂತದ ಅಂತ್ಯ…!

Most read

ಅಣ್ಣಾವ್ರ ಎರಡನೇ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಸಿನಿಮಾರಂಗಕ್ಕೆ ಬರುವುದಕ್ಕೆಂದೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಸಿಂಗಿತಂ ಶ್ರೀನಿವಾಸ ರಾವ್ ಅವರು ರಾಘವೇಂದ್ರ ರಾಜ್‍ಕುಮಾರ್ ಅವರನ್ನು ʻಚಿರಂಜೀವಿ ಸುಧಾಕರʼ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯ ಮಾಡಿಕೊಟ್ಟರು. ಈ ಸಿನಿಮಾದ ಮೂಲಕವೇ ಕನ್ನಡಕ್ಕೆ ಮೋನಿಷಾ ಉನ್ನಿ ಸಹ ಪರಿಚಯವಾದರು‌. ಆದರೆ ಅವರದ್ದು ಕನ್ನಡದಲ್ಲಿ ಒಂದೇ ಸಿನಿಮಾ, ಮತ್ತೊಂದು ಸಿನಿಮಾ ಮಾಡುತ್ತಾರೇನೋ ಎನ್ನುವಷ್ಟರಲ್ಲಿ ಕೇವಲ 21 ವರ್ಷಕ್ಕೆ ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದರು.

ಮೋನಿಷಾ ಉನ್ನಿ ಮೂಲತಃ ಕೇರಳದವರು. ಆದರೆ ವಿದ್ಯಾಭ್ಯಾಸ ಮಾಡಿದ್ದೆಲ್ಲ ಬೆಂಗಳೂರಿನಲ್ಲಿ. ರಾಘವೇಂದ್ರ ರಾಜ್‍ಕುಮಾರ್ ಅವರ ಮೊದಲ ಸಿನಿಮಾ ಚಿರಂಜೀವಿ ಸುಧಾಕರ ಸಿನಿಮಾ ಮೂಲಕ ಕನ್ನಡಕ್ಕೆ ಬಂದರು. ಚಿಕ್ಕವಯಸ್ಸಿನಲ್ಲಿಯೇ ಸಿ‌ನಿಮಾಗಳಲ್ಲಿ‌ ನಟನೆ ಶುರು ಮಾಡಿದ್ದವರು ಮೋನಿಷಾ. ಕನ್ನಡಕ್ಕೆ ಎಂಟ್ರಿ ಕೊಡುವ ಮುನ್ನವೇ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಕಿರುಚಿತ್ರಗಳಲ್ಲಿ ನಟಿಸಿದ್ದರು. ನೃತ್ಯದಲ್ಲೂ ಪ್ರವೀಣೆಯಾಗಿದ್ದರು. ಇವರ ದುರಂತ ಸಾವಿನ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಯೂಟ್ಯೂಬ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

1992ರಲ್ಲಿ ಮೋನಿಷಾ ಉನ್ನಿ ಕೇರಳದ ಗುರುವಾಯೂರಿನಲ್ಲಿ ನೃತ್ಯ ಪ್ರದರ್ಶನವನ್ನು ನೀಡಬೇಕಾಗಿತ್ತು. ಆದರೆ ಮೋನಿಷಾ ಉನ್ನಿಗೆ ಅದು ಸಾಧ್ಯವಾಗಿರುವುದಿಲ್ಲ. ಈ ನೃತ್ಯ ಪ್ರದರ್ಶನಕ್ಕೆ ಇನ್ನು ಎರಡು ವಾರ ಬಾಕಿ ಇತ್ತು. ಮೋನಿಷಾ ಚಪ್ಪಡಿ ವಿದ್ಯಾ ಎನ್ನುವ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಕೊಚ್ಚಿಗೆ ಕಾರಿನಲ್ಲಿ ಪ್ರಯಾಣ ನಡೆಸುವಾಗ ಎದುರಿಗೆ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆಯುತ್ತದೆ. ತೀವ್ರ ರಕ್ತಸ್ರಾವದಿಂದ ಮೋನಿಷಾ ಸಾವನ್ನಪ್ಪುತ್ತಾರೆ ಎಂದು ಹೇಳಿದ್ದಾರೆ. ಚಿರಂಜೀವಿ ಸುಧಾಕರ ಸಿನಿಮಾ ಅಷ್ಟಾಗಿ ಸದ್ದು ಮಾಡದ ಕಾರಣ ಮೋನಿಷಾಗೆ ಮತ್ತೆ ಕನ್ನಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

More articles

Latest article