Friday, December 6, 2024

ಬಟರ್ ಚಿಕನ್ ಜೊತೆಗೆ ವೈಟ್ ಕುಷ್ಕ ತಿಂತಾ ಇದ್ರೆ ಸ್ವರ್ಗ : ಅದನ್ನ ಮಾಡೋದೇಗೆ ಗೊತ್ತಾ..?

Most read

ಬೇಕಾಗುವ ಸಾಮಗ್ರಿಗಳು:

ಚಿಕನ್
ಬಾಸುಮತಿ ಅಕ್ಕಿ
ಅರಿಶಿನ ಪುಡಿ
ಖಾರದ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗೋಡಂಬಿ ಪೇಸ್ಟ್
ಧನ್ಯ ಪುಡಿ
ಈರುಳ್ಳಿ
ಹಸಿ‌ಮೆಣಸಿನಕಾಯಿ
ಎಣ್ಣೆ
ಬೆಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಬಟರ್ ಚಿಕನ್ ಮಾಡುವ ವಿಧಾನ :

ಮೊದಲಿಗೆ ಚಿಕನ್ ಸ್ವಚ್ಛಗೊಳಿಸಿ ಎತ್ತಿಟ್ಟುಕೊಳ್ಳಿ. ಮುಕ್ಕಾಲು ಕೆಜಿಯಷ್ಟು ಚಿಕನ್ ಗೆ ಒಂದು ಟೀ ಸ್ಪೂನ್ ಅರಿಶಿನದ ಪುಡಿ, ಒಂದು ಸ್ಪೂನ್ ಅಚ್ಚ ಖಾರದ ಪುಡಿ, ಒಂದೂವರೆ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸ್ ಮಾಡಿ, ಅರ್ಧ ಗಂಟೆ ಎತ್ತಿಡಿ. ಆಗ ಮಸಾಲೆ ಚೆನ್ನಾಗಿ ಚಿಕನ್ ನಲ್ಲಿ ಹಿಡಿಯುತ್ತೆ. ಒಂದು ಬಾಣಲಿಗೆ ಎಣ್ಣೆ ಹಾಕಿ, ಮೂರು ಈರುಳ್ಳಿ ಕಟ್ ಮಾಡಿ ಸೇರಿಸಿ ಉರಿದುಕೊಳ್ಳಿ. ಬಳಿಕ ಒಂದೆರಡು ಆಪಲ್ ಟಮೋಟೋ ಹಾಕಿ. ಟಮೋಟೋ ಸಾಫ್ಟ್ ಆದ ಮೇಲೆ ಒಂದು ಸ್ಪೂನ್ ಧನ್ಯ ಪುಡಿ, ಒಂದು ಸ್ಪೂನ್ ಖಾರದ ಪುಡಿ, ಸ್ವಲ್ಪ ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ ಬೇಯಿಸಿಕೊಳ್ಳಿ. ಬಳಿಕ ಅದನ್ನು ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಮೊಸರು ಹಾಕಿ ರುಬ್ಬಿಕೊಳ್ಳಿ. ಗೋಡಂಬಿಯನ್ನು ನೆನೆಸಿ ಸಪರೇಟ್ ಆಗಿ ರುಬ್ಬಿಕೊಳ್ಳಿ. ಚಿಕನ್ ಅನ್ನು ಎಣ್ಣೆಯಲ್ಲಿ ಕಡಾಯಿ ಅಥವಾ ತವಾ ಮೇಲೆ ಹಾಕಿ ಫ್ರೈ ಮಾಡಿ. ಒಂದು ಕಡಾಯಿಗೆ 20 ಗ್ರಾಂ ನಷ್ಟು ಬೆಣ್ಣೆ ಹಾಕಿ, ಬಿಸಿ ಆದ ಮೇಲೆ ಹಸಿಮೆಣಸಿನಕಾಯಿ ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಉಪ್ಪು ಹಾಕಿ ಒಂದು ಹತ್ತು ನಿಮಿಷ ಬೇಯಿಸಿಕೊಳ್ಳಿ. ಆಮೇಲೆ ಫ್ರೈ ಮಾಡಿದ ಚಿಕನ್ ಹಾಕಿ ಮಿಕ್ಸ್ ಮಾಡಿ, ಅದಕ್ಕೆ ಗೋಡಂಬಿ ಪೇಸ್ಟ್ ಸೇರಿಸಿ, ಲಿಡ್ ಕ್ಲೋಸ್ ಮಾಡಿ ಬೇಯಿಸಿಕೊಳ್ಳಿ.

ಬಿಳಿ ಕುಷ್ಕ ಮಾಡುವುದು ಹೇಗೆ..?

ಮೊದಲಿಗೆ ಬಾಸುಮತಿ ಅಕ್ಕಿಯನ್ನು ಹತ್ತು ನಿಮಿಷ ನೆನೆಸಿಡಿ. ಕಡಾಯಿಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಚಕ್ಕೆ, ಲವಂಗ, ಶಾಯಿ ಜೀರಾ, ಏಲಕ್ಕಿ, ಅನಾನಸ್ ಹೂ ಅನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ, ಬಳಿಕ ಎರಡು ಕಟ್ ಮಾಡಿದ ಈರುಳ್ಳಿಯನ್ನು ಎಣ್ಣೆಗೆ ಹಾಕಿ. ಕುಷ್ಕಗೆ ಈರುಳ್ಳಿ ಹೆಚ್ಚಾಗಿ ಹಾಕಿದಷ್ಟು ಸಖತ್ ಟೇಸ್ಟ್ ಬರುತ್ತೆ. ಐದರಿಂದ ಆರು ಹಸಿಮೆಣಸಿನಕಾಯಿ ಹಾಕಿ ಪ್ರೈ ಮಾಡಿ. ಬಳಿಕ ಒಂದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈ ಆಡಿಸಿ. ಸ್ವಲ್ಪ ಫ್ರೈ ಆದ ಮೇಲೆ 200 ಗ್ರಾಂನಷ್ಟು ಮೊಸರನ್ನು ಸೇರಿಸಿ. ಒಂದು ಟಮೋಟೋ, ಕೊತ್ತಂಬರಿ, ಪುದೀನಾ ಸೇರಿಸಿ ಸ್ವಲ್ಪ ಸಮಯ ಲೋ ಫ್ಲೇಮ್ ನಲ್ಲಿ ಬೇಯಿಸಿಕೊಳ್ಳಿ. ಎಣ್ಣೆಯೆಲ್ಲಾ ಬಿಟ್ಟುಕೊಂಡ ಮೇಲೆ ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಧನ್ಯ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಒಂದು‌ ನಿಮಿಷ ಬೇಯಿಸಿ. ಕಲರ್ ಕೂಡ ಲೈಟ್ ಆಗಿ ಚೇಂಜ್ ಆಗುತ್ತೆ. ಅಕ್ಕಿಗೆ ತಕ್ಕ ಹಾಗೆ ನೀರು ಹಾಕಿ, ಗೋಡಂಬಿ ಹಾಕಿ. ಬೇಡ ಎಂದರೆ ಗೋಡಂಬಿ ಸ್ಕಿಪ್ ಮಾಡಬಹುದು. ಇದೆಲ್ಲಾ ಹಾಕಿ ಒಂದು ಕುದಿ ಬಂದ ಮೇಲೆ ಬಾಸುಮತಿ ಅಕ್ಕಿಯನ್ನು ಸೇರಿಸಿ ಲಿಡ್ ಕ್ಲೋಸ್ ಮಾಡಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಈ ಅನ್ನಕ್ಕೆ ತುಪ್ಪ ಹಾಕಿಕೊಳ್ಳಿ.

More articles

Latest article