Thursday, June 13, 2024

ಅಬ್ಬಬ್ಬಾ ‘ಕರಿಯ’ನ ಹೀರೋಯಿನ್ ಎಷ್ಟೊಂದು ಬದಲಾಗಿದ್ದಾರೆ ನೋಡಿ..!

Most read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಆ ಸಿನಿಮಾದ ಹೀರೋಯಿನ್ ಅಭಿನಯಶ್ರೀ ಕೂಡ ಎಲ್ಲರಿಗೂ ನೆನಪಿದ್ದೇ ಇರುತ್ತಾರೆ. ಗುಂಡು ದುಂಡುಗೆ ಎಲ್ಲರನ್ನು ಸೆಳೆದಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ಈಗ ಸಿಕ್ಕಾಪಟ್ಟೆ ಬದಲಾಗಿದ್ದಾರೆ.

ಆ ಕಾಲಕ್ಕೆ ಅಭಿನಯಶ್ರೀ ಬಗ್ಗೆ ಭರವಸೆಯ ನಟಿಯಾಗುತ್ತಾರೆ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದರು. ಆದರೆ ಅಭಿನಯಶ್ರೀ ಕೇವಲ ಐಟಂ ಹಾಡುಗಳಿಗಷ್ಟೇ ಸೀಮಿತವಾದರು. ಅಲ್ಲು ಅರ್ಜುನ್ ಆರ್ಯ ಸಿನಿಮಾದಲ್ಲಿ ಆ ಅಂಟೆ ಅಮಲಾಪುರ ಹಾಡು ಎಲ್ಲರಿಗೂ ನೆನಪಿದೆ ಅಲ್ವಾ. ಅಲ್ಲು ಅರ್ಜುನ್ ಕೆರಿಯರ್ ಗೆ ಈ ಹಾಡು ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಅದೇ ಹಾಡಿಗೆ ಸೊಂಟ ಬಳುಕಿಸಿದ್ದವರು ಅಭಿನಯಶ್ರೀ.

ಈ ಹಾಡು ಆಗಿನ ಕಾಲಕ್ಕೆ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಶಾಲಾ-ಕಾಲೇಜು ಫಂಕ್ಷನ್ ಗಳಲ್ಲಿಯೂ ಈ ಹಾಡಿನದ್ದೇ ಜಮಾನ. ಎಲ್ಲೆ ಡ್ಯಾನ್ಸ್ ಮಾಡುವ ಸನ್ನಿವೇಶ ಬರಲಿ ಅಲ್ಲೆಲ್ಲಾ ಮೊದಲಿಗೆ ಇದೆ ಹಾಡಿಗೆ ಪ್ರಾಮುಖ್ಯತೆ ಸಿಗುತ್ತಾ ಇತ್ತು. ಆದರೆ ನಿನ್ನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅಭಿನಯಶ್ರೀ ನೋಡಿ, ಎಷ್ಟೋ ಜನರಿಗೆ ಗುರುತೇ ಸಿಕ್ಕಿಲ್ಲ. ಇವರೇನಾ ಅವರು ಎಂಬಷ್ಟು ಅನುಮಾನ ಮೂಡಿತ್ತು.

ಆರ್ಯ ಸಿನಿಮಾ ಎರಡು ದಶಕ ಪೂರೈಸಿದ ಹಿನ್ನೆಲೆ ಚಿತ್ರತಂಡ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಅಭಿನಯಿಶ್ರೀ ವೇದಿಕೆ ಏರಿ, ಅದೇ ಹಾಡಿಗೆ ಕುಣಿದಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಮುಖದಲ್ಲಿ ಮಂದಹಾಸ ಮೂಡಿತ್ತು. ಈ ವೇಳೆ ಅಭಿನಯಶ್ರೀ ಅಂದಿನ ಆಫರ್ ಬಗ್ಗೆ ಮಾತನಾಡಿದ್ದಾರೆ. ಶಂಕರ್ ಮೇಷ್ಟ್ರು ಯಾವುದೋ ಚಿತ್ರಕ್ಕೆ ಡ್ಯಾನ್ಸರ್ ಹುಡುಕುತ್ತಿದ್ದಾರೆ ಎಂದು ಗೊತ್ತಾದ ನಂತರ ಈ ಚಿತ್ರದ ಆಫರ್ ನನಗೆ ಬಂತು. ಈ ಸಾಂಗ್ ಗಾಗಿ ಆರು ದಿನ ನಿದ್ದೆಗೆಟ್ಟು ಕೆಲಸ ಮಾಡಿದ್ದೀವಿ ಎಂದಿದ್ದಾರೆ.

More articles

Latest article