ಮುಂಬೈ : ಬಾಲಿವುಡ್‌ನ ‘ಡ್ರಾಮಾ ಕ್ವೀನ್’ ರಾಖಿ ಸಾವಂತ್ ಆಗಾಗ್ಗೆ ಯಾವುದಾದರೊಂದು ಕಾರಣದಿಂದಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಜಾರ್ಜಿಯಾ ಮೆಲೋನಿ ಅವರ ಪೋಸ್ಟ್ ಒಂದರ ಕುರಿತು ರಾಖಿ ಸಾವಂತ್ ಮಾಡಿರುವ ಕಾಮೆಂಟ್ ಈಗ ವೈರಲ್ ಆಗುತ್ತಿದೆ.
ಜಾರ್ಜಿಯಾ ಮೆಲೋನಿ ಅವರ ಪೋಸ್ಟ್‌ವೊಂದಕ್ಕೆ ರಾಖಿ ಸಾವಂತ್ ಮಾಡಿರುವ ಕಮೆಂಟ್ ಈಗ ಜೋಕ್ ಆಗಿ ಪರಿವರ್ತನೆಯಾಗಿದೆ. ಜಾರ್ಜಿಯಾ ಮೆಲೋನಿ ಅವರೇ ದಯವಿಟ್ಟು ನಿಮ್ಮ ಬಾಯ್‌ಫ್ರೆಂಡ್‌ಗೆ ಹೇಳಿ ರಾಜೀನಾಮೆ ನೀಡಲು ಎಂದು ಕಮೆಂಟ್ ಹಾಕಿದ್ದಾರೆ. ಇದಕ್ಕೆ ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಅವರು ನಿರಂತರವಾಗಿ ಬೆಂಬಲಿಸುತ್ತಿದ್ದು, ಅವರ ಪರವಾದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದಲ್ಲದೆ, ವಿದ್ಯಾರ್ಥಿಗಳಿರುವ ವೀಡಿಯೊವೊಂದು ಹೊರಬಂದಿದ್ದು, ಅದರಲ್ಲಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರಾಖಿ ಸಾವಂತ್ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತಾವು ಖಂಡಿತವಾಗಿಯೂ ದೆಹಲಿಯ ಜಂತರ್ ಮಂತರ್‌ಗೆ ಭೇಟಿ ನೀಡುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ರಾಖಿ ಸಾವಂತ್ ಅವರು ಪದೇ ಪದೇ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸುತ್ತಿರುವುದು ಕಂಡುಬಂದಿದೆ. ನಿನ್ನೆ ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ (ಪಾಪರಾಜಿ) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರಧಾನಿ ಮೋದಿ ಅವರ ಕುರಿತು ವಿಸ್ತೃತವಾಗಿ ಮಾತನಾಡಿದರು. ಅಷ್ಟೇ ಅಲ್ಲದೆ, ಮಾಧ್ಯಮಗಳನ್ನು “ಗೋದಿ ಮೀಡಿಯಾ” (ಸರ್ಕಾರದ ಪರವಾಗಿರುವ ಮಾಧ್ಯಮ) ಎಂದು ಪ್ರಶ್ನಿಸುತ್ತಾ ಅವುಗಳನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮ ಬಾಯ್‌ಫ್ರೆಂಡ್‌ಗೆ ಹೇಳಿ ರಾಜೀನಾಮೆ ನೀಡಲು : ಜಾರ್ಜಿಯಾ ಮೆಲೋನಿಗೆ ರಾಖಿ ಸಾವಂತ್ ಮಾಡಿರುವ ಕಮೆಂಟ್ ಈಗ ವೈರಲ್